Advertisement

ಹಗೆದಾಳ ಕೆರೆ ಕಾಮಗಾರಿ ವೀಕ್ಷಣೆ

04:49 PM Jun 27, 2020 | Suhan S |

ಯಮಕನಮರಡಿ: ಕೋವಿಡ್ ಹಿನ್ನೆಲೆಯಲ್ಲಿ ಬಡವರು ಪರದಾಡುವಂತಾಗಿದ್ದು, ಹುಕ್ಕೇರಿ ತಾಲೂಕಿನ ಬಸ್ಸಾಪೂರ ಗ್ರಾಪಂ ವ್ಯಾಪ್ತಿಗೆ ಬರುವ ಹಗೆದಾಳ ಗ್ರಾಮದ ಗುಡ್ಡ ಪ್ರದೇಶದಲ್ಲಿ ಹೊಸ ಕೆರೆ ನಿರ್ಮಾಣಕ್ಕೆ ನರೇಗಾ ಯೋಜನೆಯಡಿ ಸಾವಿರಾರು ಜನರಿಗೆ ಉದ್ಯೋಗ ನೀಡಿದ ಅಧಿಕಾರಿಗಳ ಕಾರ್ಯವನ್ನು ಶಾಸಕ ಸತೀಶ ಜಾರಕಿಹೊಳಿ ಶ್ಲಾಘಿಸಿದರು.

Advertisement

ಅವರು ಸಮೀಪದ ಹಗೆದಾಳ ಹೊರವಲಯದಲ್ಲಿ ಕೆರೆ ನಿರ್ಮಾಣ ಸ್ಥಳಕ್ಕೆ ಭೇಟಿ ನೀಡಿ ಮಾಧ್ಯಮದೊಂದಿಗೆ ಮಾತನಾಡಿ, ಕೆರೆ ನಿರ್ಮಾಣಕ್ಕೆ ಬೇಡಿಕೆ ಹಾಗೂ ನಮ್ಮ ಚಿಂತನೆಯೂ ಇತ್ತು. ಈ ಭಾಗದ ಜನರ ಬಹುದಿನಗಳ ಕನಸು ಈಗ ಸಾಕಾರಗೊಂಡಿದೆ. ಕೆರೆ ನಿರ್ಮಾಣದಿಂದ ಅಂತರ್ಜಲ ಮಟ್ಟ ಹೆಚ್ಚಿ ಜನರು, ರೈತರಿಗೆ ಅನುಕೂಲವಾಗಲಿದೆ ಎಂದರು.ಬಸ್ಸಾಪೂರ ಪಿಡಿಒ ಪ್ರತಿಭಾ ಮುತಾಲಿಕದೇಸಾಯಿ ಮಾತನಾಡಿ, ಸ್ಥಳೀಯವಾಗಿ ಯಾರೇ ನರೇಗಾ ಯೋಜನೆಯಡಿ ಕೆಲಸಕ್ಕೆ, ಜಾಬ್‌ ಕಾರ್ಡ್‌ಗೆ ಅರ್ಜಿ ಹಾಕಿದರೆ ಅವರಿಗೆ ಕೆಲಸ ನೀಡುತ್ತೇವೆ. ಇಂದು 774 ಜನರು ಕೆರೆಯಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದರು. ಜಿಪಂ ಸದಸ್ಯ ಮಂಜುನಾಥ ಪಾಟೀಲ, ಬಸನಾಯಿಕ ನಾಯಿಕ ಮುಂತಾದವರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next