Advertisement
ಸಯೀದ್ ಬಂಧಮುಕ್ತ ಸುದ್ದಿಗೆ ಗುರುವಾರ ಖಾರವಾಗಿ ಪ್ರತಿಕ್ರಿಯಿಸಿರುವ ವಿದೇಶಾಂಗ ಇಲಾಖೆ, “ಬಹಿಷ್ಕಾರಕ್ಕೊಳಗ ಗಿರುವ ಭಯೋತ್ಪಾದಕನನ್ನು ಮುಖ್ಯ ವಾಹಿನಿಗೆ ತರುವಂಥ ಪಾಕಿಸ್ಥಾನದ ಯತ್ನವು, ಉಗ್ರರಿಗೆ ಬೆಂಬಲ ನೀಡುವು ದನ್ನು ಮುಂದುವರಿಸಿರುವುದನ್ನು ಮತ್ತೂಮ್ಮೆ ಸಾಬೀತುಪಡಿಸಿದೆ. ವಿಧ್ವಂಸಕ ಕೃತ್ಯ ಎಸಗಿದವರನ್ನು ಶಿಕ್ಷೆಗೊಳಪಡಿಸು ವಲ್ಲಿ ಪಾಕಿಸ್ಥಾನದ ಗಂಭೀರತೆಯ ಕೊರತೆ ಯನ್ನು ಇದು ತೋರಿಸುತ್ತಿದೆ’ ಎಂದು ಹೇಳಿದೆ. ಅಲ್ಲದೆ, ಭಯೋತ್ಪಾದಕರಿಗೆ ರಕ್ಷಣೆ ನೀಡುವ ಪಾಕ್ ನೀತಿಯಲ್ಲಿ ಯಾವುದೇ ಬದಲಾವಣೆ ಆಗಿಲ್ಲ ಎನ್ನುವುದು ಕೂಡ ಸ್ಪಷ್ಟವಾಗುತ್ತಿದೆ ಎಂದು ವಿದೇಶಾಂಗ ಇಲಾಖೆ ವಕ್ತಾರ ರವೀಶ್ ಕುಮಾರ್ ಹೇಳಿದ್ದಾರೆ.
Related Articles
ಮರಣದಂಡನೆಗೆ ಗುರಿಯಾಗಿರುವ ಭಾರತದ ನೌಕಾಪಡೆಯ ಮಾಜಿ ಅಧಿಕಾರಿ ಕುಲಭೂಷಣ್ ಜಾಧವ್ ಅವರನ್ನು ಭೇಟಿಯಾಗಲು ತೆರಳುತ್ತಿರುವ ಅವರ ಪತ್ನಿ ಹಾಗೂ ತಾಯಿಗೆ ಸೂಕ್ತ ಭದ್ರತೆ ಒದಗಿಸುವ ಕುರಿತು ಖಚಿತಪಡಿಸುವಂತೆ ಪಾಕಿಸ್ಥಾನಕ್ಕೆ ಭಾರತ ಕೋರಿಕೆ ಸಲ್ಲಿಸಿದೆ. ಜಾಧವ್‌ಗೆ ಅವರ ಪತ್ನಿಯನ್ನು ಭೇಟಿಯಾಗಲು ಅವಕಾಶ ಕಲ್ಪಿಸುವುದಾಗಿ ಪಾಕ್ ಸರಕಾರ ಹೇಳಿದೆ. ಅಲ್ಲಿಗೆ ತೆರಳುತ್ತಿರುವ ಜಾಧವ್ ಪತ್ನಿಯ ಸುರಕ್ಷತೆಯ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುವಂತೆ ಅಲ್ಲಿನ ಸರಕಾರವನ್ನು ಕೇಳಿಕೊಳ್ಳಲಾಗಿದೆ ಎಂದು ವಿದೇಶಾಂಗ ಇಲಾಖೆ ತಿಳಿಸಿದೆ. ಜತೆಗೆ, ಪಾಕಿ ಸ್ತಾನವು ಜಾಧವ್ ಕುಟುಂಬ ಸದಸ್ಯರಿಗೆ ಕಿರುಕುಳ ಕೊಡುವುದು, ವಿಚಾರಣೆ ನಡೆಸುವುದಾಗಲೀ ಮಾಡಬಾ ರದು ಎಂದೂ ಸೂಚಿಸಲಾಗಿದೆ. ಏತನ್ಮಧ್ಯೆ, ಕಾಶ್ಮೀರ ವಿಚಾರವನ್ನು ಅಂತಾರಾಷ್ಟ್ರೀಯ ಕೋರ್ಟ್‌ನಲ್ಲಿ ಪ್ರಶ್ನಿಸುವ ಕುರಿತು ಕಾನೂನು ತಜ್ಞರೊಂದಿಗೆ ಸಮಾಲೋಚನೆ ನಡೆಸುತ್ತಿರುವುದಾಗಿ ಪಾಕ್ ಸುಳಿವು ನೀಡಿದೆ.
Advertisement
ಕಣಿವೆ ರಾಜ್ಯದಲ್ಲಿ ವಕೀಲರ ಪ್ರತಿಭಟನೆಉಗ್ರ ಹಫೀಜ್ ಸಯೀದ್ ಬಿಡುಗಡೆ ನಿರ್ಧಾರವನ್ನು ಖಂಡಿಸಿ ಗುರುವಾರ ಜಮ್ಮು ಬಾರ್ ಅಸೋಸಿಯೇಷನ್‌ನ ಸದಸ್ಯರು ಭಾರೀ ಪ್ರತಿಭಟನೆ ನಡೆಸಿದರು. ಹೈಕೋರ್ಟ್ ಸಂಕೀರ್ಣದ ಮುಂದೆ ಸೇರಿದ ವಕೀಲರು, ಉಗ್ರ ಸಯೀದ್ ಹಾಗೂ ಪಾಕಿಸ್ಥಾನದ ವಿರುದ್ಧ ಘೋಷಣೆ ಕೂಗಿದರಲ್ಲದೆ, ಪಾಕಿಸ್ಥಾನಿ ಧ್ವಜಕ್ಕೂ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು. ಜತೆಗೆ, ಪಾಕ್‌ನಲ್ಲಿರುವ ಹಫೀಜ್ ಸಯೀದ್‌ನ ಉಗ್ರ ಜಾಲದ ಮೇಲೆ ಮತ್ತೂಂದು ಸರ್ಜಿಕಲ್ ದಾಳಿಯನ್ನು ನಡೆಸಬೇಕು ಎಂದೂ ವಕೀಲರು ಒತ್ತಾಯಿಸಿದರು.