Advertisement
ವಿಶ್ವಸಂಸ್ಥೆಯಿಂದ ಜಾಗತಿಕ ಉಗ್ರನೆಂದು ಘೋಷಿ ಸಲ್ಪಟ್ಟಿರುವ ಸಯೀದ್‌ನ ಬಿಡುಗಡೆಗೆ ಕೋರ್ಟ್ ಆದೇಶ ನೀಡಿದ ಹಿನ್ನೆಲೆಯಲ್ಲಿ ಗುರು ವಾರ ಮಧ್ಯರಾತ್ರಿಯೇ ಆತನಿಗೆ ಗೃಹ ಬಂಧನ ದಿಂದ ಮುಕ್ತಿ ನೀಡಲಾಗಿದೆ. ಈ ಹಿನ್ನೆಲೆಯಲ್ಲಿ ಪಾಕ್ ಮೇಲೆ ಒತ್ತಡ ಹೇರಿರುವ ಅಮೆರಿಕ, “ಆತನನ್ನು ಕೂಡಲೇ ಅರೆಸ್ಟ್ ಮಾಡಿ, ತಕ್ಕ ಶಿಕ್ಷೆ ವಿಧಿಸಿ,’ ಎಂಬ ಎಚ್ಚರಿಕೆಯ ಸಂದೇಶವನ್ನು ರವಾನಿಸಿದೆ.
Related Articles
Advertisement
ಭಾರತದ ವಿರುದ್ಧ ಬೆಂಕಿ ಉಗುಳಿದ ಉಗ್ರಉಗ್ರ ಹಫೀಜ್ ಸಯೀದ್ ಗೃಹಬಂಧನದಿಂದ ಬಿಡುಗಡೆಯಾಗಿ ಹೊರಬರುತ್ತಲೇ ಭಾರತದ ವಿರುದ್ಧ ಬೆಂಕಿ ಉಗುಳಿದ್ದಾನೆ. “ಕಾಶ್ಮೀರದ ಸ್ವಾತಂತ್ರ್ಯಕ್ಕಾಗಿನ ನನ್ನ ಧ್ವನಿಯನ್ನು ಅಡಗಿಸುವ ಸಲುವಾಗಿಯೇ 10 ತಿಂಗಳ ಕಾಲ ಬಂಧಿಸಿಡಲಾಯಿತು. ಆದರೆ, ನನ್ನ ಹೋರಾಟ ಮುಂದುವರಿಯಲಿದೆ. ಕಾಶ್ಮೀರದ ಸ್ವಾತಂತ್ರ್ಯಕ್ಕಾಗಿ ವಿಶ್ವಾದ್ಯಂತ ಜನರನ್ನು ಒಗ್ಗೂಡಿಸುತ್ತೇನೆ. ಜಿಹಾದ್ ಮುಂದುವರಿಯುತ್ತದೆ. ಅಮೆರಿಕವು ಎಷ್ಟು ಬೊಗಳಿದರೂ ನಾನು ಯಾರಿಗೂ ಕ್ಯಾರೇ ಎನ್ನುವುದಿಲ್ಲ,’ ಎಂದಿದ್ದಾನೆ. ಇದೇ ವೇಳೆ, ಉಚ್ಚಾಟಿತ ಪ್ರಧಾನಿ ನವಾಜ್ ಷರೀಫ್ ವಿರುದ್ಧವೂ ವಾಗ್ಧಾಳಿ ನಡೆಸಿದ ಉಗ್ರ, “ಕಾಶ್ಮೀರದ ಸ್ವಾತಂತ್ರ್ಯವನ್ನು ಮರೆತು, ಭಾರತದ ಜತೆ ಸ್ನೇಹಹಸ್ತ ಚಾಚುವ ಮೂಲಕ ಷರೀಫ್ ಅವರು ದೇಶದ್ರೋಹ ಎಸಗಿದ್ದಾರೆ. ಪಾಕ್ ಸರಕಾರವು ಅಂತಾರಾಷ್ಟ್ರೀಯ ಸಮುದಾಯದ ಮುಂದೆ ಸಾಲಕ್ಕೆ ಕೈಚಾಚಬಾರದು. ಅಮೆರಿಕದಂಥ ದೇಶಗಳ ಸಲಹೆಗಳಿಗೆ ಕಿವಿಗೊಡದೇ, ಸ್ವಂತ ನಿರ್ಧಾರ ಕೈಗೊಳ್ಳಬೇಕು,’ ಎಂದೂ ಹೇಳಿದ್ದಾನೆ. ತಕ್ಕ ಪ್ರತ್ಯುತ್ತರಕ್ಕೆ ನಾವು ಸಿದ್ಧ: ಗೃಹ ಇಲಾಖೆ
ಸಯೀದ್ ಹೇಳಿಕೆಗೆ ಕೂಡಲೇ ಪ್ರತಿಕ್ರಿಯಿಸಿರುವ ಕೇಂದ್ರ ಗೃಹ ಸಚಿವಾಲಯ, “ಪಾಕಿಸ್ಥಾನದ ಭಯೋತ್ಪಾದಕರ ನೈಜ ಅಜೆಂಡಾವನ್ನು ಉಗ್ರ ಸಯೀದ್ ಮತ್ತೂಮ್ಮೆ ಸ್ಪಷ್ಟಪಡಿಸಿದ್ದಾನೆ. ಜಮ್ಮು-ಕಾಶ್ಮೀರವು ಭಾರತದ ಅವಿಭಾಜ್ಯ ಅಂಗವಾಗಿಯೇ ಮುಂದುವರಿಯಲಿದೆ. ಉಗ್ರರ ಇಂಥ ಬೆದರಿಕೆಗಳಿಗೆ ನಾವು ಬಗ್ಗುವುದಿಲ್ಲ. ಅಂಥವರಿಗೆ ತಕ್ಕ ಪ್ರತ್ಯುತ್ತರವನ್ನು ನಾವೂ ನೀಡುತ್ತೇವೆ. ಹಿಂದೆಯೂ ಇಂಥ ಹೇಳಿಕೆಗಳು ಹೊರಬಿದ್ದಾಗ ನಾವು ಸರಿಯಾಗಿಯೇ ಪ್ರತಿಕ್ರಿಯಿಸಿದ್ದೇವೆ’ ಎಂದು ಹೇಳಿದೆ.