Advertisement

ಮದುವೆಗೂ ಮುನ್ನವೆ‌ ಹದಿಯಾ ಪತಿ ಶಫಿನ್‌ಗೆ ಉಗ್ರರ ನಂಟಿತ್ತು

07:50 AM Dec 05, 2017 | Team Udayavani |

ನವದೆಹಲಿ: ಹದಿಯಾ ಪ್ರಕರಣ ದಿನದಿಂದ ದಿನಕ್ಕೆ ಹೊಸ ತಿರುವು ಪಡೆದುಕೊಳ್ಳುತ್ತಿದ್ದು, ಇದೀಗ ರಾಷ್ಟ್ರೀಯ ತನಿಖಾ ಸಂಸ್ಥೆ ಮತ್ತೂಂದು ಹೊಸ ಮಾಹಿತಿ ಬಹಿರಂಗಪಡಿಸಿದೆ.

Advertisement

ಅಖೀಲಾ ಅಶೋಕನ್‌ ಅಲಿಯಾಸ್‌ ಹದಿಯಾಳನ್ನು ವಿವಾಹವಾಗುವ ಮೊದಲೇ ಶಫಿನ್‌ ಜಹಾನ್‌ಗೆ ಇಸ್ಲಾಮಿಕ್‌ ಸ್ಟೇಟ್‌ ಉಗ್ರ ಸಂಘಟನೆ (ಐಸಿಸ್‌) ಜತೆ ಸಂಪರ್ಕವಿತ್ತು ಎಂದು ಎನ್‌ಐಎ ಮೂಲಗಳು ತಿಳಿಸಿವೆ. ಕೇರಳ ಲವ್‌ ಜಿಹಾದ್‌ ಪ್ರಕರಣಕ್ಕೆ ಸಂಬಂಧಿಸಿ ತನಿಖೆ ನಡೆಸುತ್ತಿರುವ ಎನ್‌ಐಎ, ಒಮರ್‌ ಅಲ್‌ ಹಿಂದಿ ಪ್ರಕರಣದ ರೂವಾರಿಗಳಾದ ಮನ್ಸಿàದ್‌ ಮತ್ತು ಪಿ. ಸಫಾÌನ್‌ ಅವರು ಶಫಿನ್‌ ಜಹಾನ್‌ ಹಾಗೂ ಹದಿಯಾ ವಿವಾಹದ ಸೂತ್ರಧಾರರು ಎಂದು ಎನ್‌ಐಎ ತನಿಖೆಯಿಂದ ಬಹಿರಂಗಗೊಂಡಿದೆ ಎನ್ನಲಾಗಿದೆ. ಮನ್ಸಿàದ್‌ ಮತ್ತು ಪಿ. ಸಫಾÌನ್‌ ಇಬ್ಬರೂ ಮೊದಲಿನಿಂದಲೂ ಶಫಿನ್‌ಗೆ ಆಪ್ತರೇ ಆಗಿದ್ದರು ಎಂದು ಎನ್‌ಐಎ ಅಭಿಪ್ರಾಯಪಟ್ಟಿದೆ. ಒಮರ್‌ ಅಲ್‌ ಹಿಂದಿ ಪ್ರಕರಣಕ್ಕೆ ಸಂಬಂಧಿಸಿ ಮನ್ಸಿàದ್‌ ಮತ್ತು ಪಿ. ಸಫಾÌನ್‌ರನ್ನು ಕಳೆದ ವರ್ಷ ಅಕ್ಟೋಬರ್‌ನಲ್ಲಿ ಬಂಧಿಸಲಾಗಿತ್ತು. ದಕ್ಷಿಣ ಭಾರತದಲ್ಲಿ ಭಾರಿ ಸಂಚಲನ ಮೂಡಿಸಿದ ಪ್ರಮುಖ ಪ್ರಕರಣದಲ್ಲಿ ಇದೂ ಒಂದಾಗಿದೆ.

ಸದ್ಯ ಹದಿಯಾಗೆ ಶಿಕ್ಷಣ ಮುಂದುವರಿಸಲು ಸುಪ್ರೀಂಕೋರ್ಟ್‌ ಅವಕಾಶ ನೀಡಿದ್ದು ತಮಿಳುನಾಡಿನ ಶಿಕ್ಷಣ ಸಂಸ್ಥೆಯಲ್ಲಿ ವೈದ್ಯಕೀಯ ಪದವಿ ಮುಂದುವರೆಸಿದ್ದಾಳೆ. ಆದರೆ ಈಕೆಗೆ ಪತಿ ಶಫಿನ್‌ ಭೇಟಿಯಾಗಲು ಕಾಲೇಜಿನ್‌ ಡೀನ್‌ ಅವಕಾಶ ನೀಡಿಲ್ಲ. ಇದಕ್ಕೂ ಮುನ್ನ ಪ್ರಕರಣದ ವಿಚಾರಣೆ ನಡೆಸಿದ್ದ ಕೇರಳ ಹೈಕೋರ್ಟ್‌ ಇವರ ವಿವಾಹವನ್ನು ರದ್ದುಗೊಳಿಸಿ, ಹದಿಯಾಳನ್ನು ಪೋಷಕರ ವಶಕ್ಕೆ ಒಪ್ಪಿಸಿತ್ತು. ಹೈಕೋರ್ಟ್‌ ತೀರ್ಪಿನ ವಿರುದ್ಧ ಶಫಿನ್‌ ಸುಪ್ರೀಂಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದ.

ಶಫಿನ್‌ ಪುನಃ ವಿಚಾರಣೆ: ಶಫಿನ್‌ನನ್ನು ಪುನಃ ಸೋಮವಾರ ಎನ್‌ಐಎ ವಿಚಾರಣೆ ನಡೆಸಿದೆ. ಕೆಲವು ವಿಷಯಗಳ ಬಗ್ಗೆ ಈ ಹಿಂದೆ ಶಫಿನ್‌ ನೀಡಿರುವ ಹೇಳಿಕೆಗಳ ಸ್ಪಷ್ಟತೆಗಾಗಿ ವಿಚಾರಣೆ ನಡೆಸಲಾಗಿದೆ ಎಂದು ಎನ್‌ಐಎ ಮೂಲಗಳು ತಿಳಿಸಿವೆ. ಆದರೆ ಈ ಬಗ್ಗೆ ಹೆಚ್ಚಿನ ವಿವರವನ್ನು ಎನ್‌ಐಎ ನೀಡಿಲ್ಲ. ಅಖೀಲಾಳನ್ನು ಮತಾಂತರ ಮಾಡಿದ ಆರೋಪಕ್ಕೆ ಸಂಬಂಧಿಸಿದಂತೆ ವಿಚಾರಣೆಯನ್ನು ಮುಂದುವರಿಸಲು ಎನ್‌ಐಎಗೆ ಸುಪ್ರೀಂಕೋರ್ಟ್‌ ಕೆಲವೇ ದಿನಗಳ ಹಿಂದೆ ಅನುಮತಿ ನೀಡಿತ್ತು. ಈ ಹಿನ್ನೆಲೆಯಲ್ಲಿ ಎನ್‌ಐಎ ತನಿಖೆ ಮುಂದುವರಿಸಿದ್ದು, ಶೀಘ್ರದಲ್ಲೇ ಇತರ ಸಾಕ್ಷಿಗಳ ವಿಚಾರಣೆಯನ್ನೂ ನಡೆಸುವ ಸಾಧ್ಯತೆಗಳಿವೆ ಎನ್ನಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next