Advertisement
ಈ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಸ್ಟ್ಯಾಲಿನ್, ಚುನಾವಣೆಯಲ್ಲಿ ಗೆದ್ದು ಮುಖ್ಯ ಮಂತ್ರಿಯಾಗಿದ್ದಕ್ಕೆ ಪ್ರಧಾನಿಯವರು ಅಭಿನಂಧಿಸಿದ್ದಾರೆ. ತಮಿಳು ನಾಡಿನ ಸರ್ವಾಭಿವೃದ್ಧಿಯಲ್ಲಿ ಕೇಂದ್ರ ಸರ್ಕಾರ ಕೈ ಜೋಡಿಸುವುದಾಗಿ ಭರಚಸೆ ನೀಡಿದ್ದಾರೆ ಎಂದು ಹೇಳಿದ್ದಾರೆ.
Related Articles
Advertisement
ಇನ್ನು, ಕೋವಿಡ್ ಸೋಂಕಿನ ಹಿನ್ನೆಲೆಯಲ್ಲಿ ರಾಜ್ಯಕ್ಕೆ ಲಸಿಕೆಗಳ ಅಗತ್ಯವಿದ್ದು, ತಮಿಳು ನಾಡಿಗೆ ಹೆಚ್ಚುವರಿ ಲಸಿಕೆಗಳನ್ನು ನೀಡುವಂತೆ ಮನವಿ ಮಾಡಿಕೊಳ್ಳಲಾಯಿತು. ಪ್ರಧಾನಿ ಅವರು ಅಗತ್ಯಕ್ಕೆ ಬೇಕಾಗುವಷ್ಟು ಲಸಿಕೆಗಳನ್ನು ಪೂರೈಸಲಾಗುವುದು ಎಂದು ಭರವಸೆ ನೀಡಿದ್ದಲ್ಲದೇ, ಯಾವುದೇ ಸಂದರ್ಭದಲ್ಲಿ ನನ್ನನ್ನು ಸಂಪರ್ಕಿಸಬಹುದು, ಕೇಂದ್ರ ಸರ್ಕಾರ ರಾಜ್ಯದ ಸುಸ್ತಿರ ಅಭಿವೃದ್ಧಿಗೆ ಕೈ ಜೋಡಿಸುತ್ತದೆ ಎಂದು ಭವರಸೆ ನೀಡಿರುವುದಾಗಿ ತಿಳಿಸಿದ್ದಾರೆ.
ಮಧುರೈನಲ್ಲಿ ಏಮ್ಸ್ ನಿರ್ಮಾಣ, ಕೊಯಮತ್ತೂರಿನಲ್ಲಿ ಹೊಸ ಏಮ್ಸ್ ಸ್ಥಾಪನೆ, ಈಲಂ ತಮಿಳರಿಗೆ ಸಮಾನ ನಾಗರಿಕ ಮತ್ತು ರಾಜಕೀಯ ಹಕ್ಕುಗಳು, ತಮಿಳನ್ನು ಭಾರತದ ಅಧಿಕೃತ ಭಾಷೆ ಎಂದು ಘೋಷಿಸುವುದು ಮತ್ತು ತಮಿಳು ಬಳಕೆ ಹೈಕೋರ್ಟ್‌ನಲ್ಲಿ ಭಾಷೆ, ತಿರುಕ್ಕುರಾಲ್ ನನ್ನು ರಾಷ್ಟ್ರೀಯ ಸಾಹಿತ್ಯವೆಂದು ಘೋಷಿಸುವುದು, ಚೆನ್ನೈನಲ್ಲಿ ಸುಪ್ರೀಂ ಕೋರ್ಟ್‌ನ ಪ್ರಾದೇಶಿಕ ಶಾಖೆಯನ್ನು ಸ್ಥಾಪಿಸುವ ವಿಚಾರ, ಜಲಸಂಪನ್ಮೂಲ ಸಮಸ್ಯೆಗಳು, ಮೀನುಗಾರಿಕೆ, ವಿದ್ಯುತ್, ಹಣಕಾಸು, ಆರೋಗ್ಯ, ಕೃಷಿ, ಕೈಗಾರಿಕೆಗಳು, ಮೂಲಸೌಕರ್ಯ ಯೋಜನೆಗಳು ಮುಂತಾದ ಹಲವು ಬೇಡಿಕೆಗಳನ್ನು ಇಡಲಾಯಿತು ಎಂದಿದ್ದಾರೆ.
ಕೆಲವು ಬೇಡಿಕೆಗಳನ್ನು ಕೇಂದ್ರ ಸರ್ಕಾರದಿಂದ ಮಾತ್ರ ಮಾಡಲು ಸಾಧ್ಯ. ಕೇಂದ್ರ ಸರ್ಕಾರ ತಮಿಳು ನಾಡಿನ ಬೇಡಿಕೆಗಳನ್ನು ಈಡೆರಿಸುತ್ತದೆ ಎನ್ನುವ ಭರವಸೆ ಇದೆ. ನಮ್ಮ ಸರ್ಕಾರ ತಮಿಳು ನಾಡಿನ ಅಭಿವೃದ್ಧಿಗೆ ಶ್ರಮಿಸುತ್ತದೆ ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ : ತೈಲ ಬೆಲೆ ಏರಿಕೆ ಎಫೆಕ್ಟ್: ಅಕ್ಕಿ ದರದಲ್ಲಿ ಕ್ವಿಂಟಲ್‌ಗೆ ದಿಢೀರ್ 200 ರೂ. ಹೆಚ್ಚಳ