Advertisement

ಡಿಎಂಕೆ ಮೈತ್ರಿ ಕೂಟ ತೊರೆದರೆ ಕಾಂಗ್ರೆಸ್‌ ಜತೆ ಮೈತ್ರಿ: ಕಮಲಹಾಸನ್‌

04:41 PM Dec 22, 2018 | udayavani editorial |

ಚೆನ್ನೈ : 2019ರ ಲೋಕಸಭಾ ಚುನಾವಣೆಯಲ್ಲಿ ಹೋರಾಡಲು ಸಮಾನ ಮನಸ್ಕ ಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಳ್ಳುವುಕ್ಕೆ ತನಗೆ ತನ್ನ ಮಕ್ಕಳ್‌ ನೀತಿ ಮೈಯಮ್‌ ಪಕ್ಷವು ಅಧಿಕಾರ ನೀಡಿದೆ ಎಂದು ಪಕ್ಷದ ಮುಖ್ಯಸ್ಥ, ಚಿತ್ರ ನಟ ಕಮಲಹಾಸನ್‌ ಅವರು ಇಂದು ಶನಿವಾರ ಇಲ್ಲಿ ಹೇಳಿದ್ದಾರೆ.

Advertisement

ಪಕ್ಷದ ಕಾರ್ಯಕಾರಿಣಿ ಮತ್ತು ಆಡಳಿತಗಾರರ ಮಂಡಳಿಯಲ್ಲಿ ಈ ಬಗ್ಗೆ ಚರ್ಚಿಸಲಾಗಿ ಸಮಾನ ಮನಸ್ಕ ಪಕ್ಷಗಳೊಂದಿಗೆ ಮೈತ್ರಿ ಹೊಂದಲು ಮತ್ತು ಉತ್ತಮ ಮೈತ್ರಿ ಸಾಧ್ಯವಾಗುವಂತೆ ಸೂಕ್ತ ನಿರ್ಧಾರ ಕೈಗೊಳ್ಳಲು ಪಕ್ಷವು ತನಗೆ ಅಧಿಕಾರ ನೀಡಿದೆ ಎಂದು ಕಮಲಹಾಸನ್‌ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಹೇಳಿದರು. 

ಡಿಎಂಕೆ ಮೈತ್ರಿಕೂಟದಿಂದ ಹೊರಬರಲು ಕಾಂಗ್ರೆಸ್‌ ನಿರ್ಧರಿಸಿದಲ್ಲಿ ಅದರೊಂದಿಗೆ (ಕಾಂಗ್ರೆಸ್‌) ಚುನಾವಣಾ ಮೈತ್ರಿ ಹೊಂದಲು ತನ್ನ ಪಕ್ಷ ಸಿದ್ಧವಿದೆ ಎಂದು ಕಮಲ ಹಾಸನ್‌ ಹೇಳಿದರು.

ಈ ವರ್ಷ ಫೆಬ್ರವರಿಯಲ್ಲಿ ಅಸ್ತಿತ್ವಕ್ಕೆ ಬಂದ ಕಮಲಹಾಸನ್‌ ಅವರ ಹೊಸ ಪಕ್ಷವು 2019ರ ಲೋಕಸಭಾ ಚುನಾವಣೆಯಲ್ಲಿ ಏಕಾಂಗಿಯಾಗಿ ಹೋರಾಡಲು ಬಯಸುವುದಿಲ್ಲ; ಸ್ಥಾಪಿತ ಸಮಾನ ಮನಸ್ಕ ಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಳ್ಳುವ ರಣತಂತ್ರವನ್ನು ರೂಪಿಸಲಿದೆ ಎಂದು ಕಮಲಹಾಸನ್‌ ಹೇಳಿದರು.  

Advertisement

Udayavani is now on Telegram. Click here to join our channel and stay updated with the latest news.

Next