Advertisement

ಎಚ್‌3ಎನ್‌2 ವೈರಸ್‌ ಹಾವಳಿ: ಮುಂಜಾಗರೂಕತೆ ಅಗತ್ಯ: ಆರೋಗ್ಯ ಇಲಾಖೆ

01:05 AM Mar 06, 2023 | Team Udayavani |

ಮಂಗಳೂರು: ಎಲ್ಲೆಡೆ ಶೀತ, ಕೆಮ್ಮು, ಜ್ವರದ ಸಮಸ್ಯೆ ಹೆಚ್ಚಾಗಿ ವರದಿಯಾಗುತ್ತಿರುವುದರೊಂದಿಗೆ ಎಚ್‌3ಎನ್‌2 ವೈರಸ್‌ ಹಾವಳಿ ತೀವ್ರಗೊಳ್ಳುತ್ತಿರುವುದರಿಂದ ಸಾರ್ವಜನಿಕರು ಮುಂಜಾಗರೂಕತೆ ವಹಿಸಿಕೊಳ್ಳುವ ಅಗತ್ಯ ಎಂದು ಆರೋಗ್ಯ ಇಲಾಖೆ ಸೂಚಿಸಿದೆ.

Advertisement

ಇದರೊಂದು ಮಾರಣಾಂತಿಕ ಕಾಯಿಲೆ ಅಲ್ಲ. ವೈರಸ್‌ನಿಂದಾಗಿ ಒಬ್ಬರಿಂದ ಒಬ್ಬರಿಗೆ ಗಾಳಿಯಲ್ಲಿ ಹರಡುವ ಜ್ವರವಾಗಿದ್ದು, ವಾತಾವರಣದಲ್ಲಿ ಉಂಟಾಗುವ ಬದಲಾವಣೆಯಿಂದಾಗಿ ಇದು ರೂಪಾಂತರಗೊಂಡು ಹೊಸ ತಳಿ ಸೃಷ್ಟಿಯಾಗುತ್ತದೆ. ಇದಕ್ಕೆ ನಿರ್ದಿಷ್ಟ ಚಿಕಿತ್ಸೆ ಇಲ್ಲ. ವಿಶ್ರಾಂತಿ ಪಡೆಯುವುದು ಮುಖ್ಯ. ಎರಡು -ಮೂರು ದಿನಗಳಲ್ಲಿ ಜ್ವರ-ಮೈ ಕೈ ನೋವು ಕಡಿಮೆಯಾಗುತ್ತದೆ. ಕೆಮ್ಮು- ಕಫ ಎರಡು ವಾರಗಳ ವರೆಗೆ ಇರುವ ಸಾಧ್ಯತೆಯಿದೆ.

ಈ ಸಂಬಂಧ ರಾಜ್ಯ ಮಟ್ಟದಲ್ಲಿ ಈ ವರೆಗೆ ಯಾವುದೇ ಸಭೆ ನಡೆದಿಲ್ಲ, ಈ ವಾರ ನಡೆಯುವ ಆಯೋಜನೆಗೊಳ್ಳುವ ಸಾಧ್ಯತೆಯಿದೆ. ಬಳಿಕ ಜಿಲ್ಲೆಗಳಿಗೆ ಈ ಸಂಬಂಧ ನಿರ್ದೇಶನ ನೀಡುವ ಸಾಧ್ಯತೆಯಿದೆ ಎನ್ನುತ್ತಾರೆ ಆರೋಗ್ಯ ಇಲಾಖೆ ಅಧಿಕಾರಿಗಳು.

ಎಚ್‌3ಎನ್‌2 ವೈರಲ್‌ ಜ್ವರವಾಗಿದ್ದು, ಜಿಲ್ಲೆಯಲ್ಲಿ ಇದೇ ಜ್ವರಕ್ಕೆ ಸಂಬಂಧಿಸಿ ಸದ್ಯ ಟೆಸ್ಟಿಂಗ್‌ ಆರಂಭಿಸಿಲ್ಲ. ದೇಶದ ವಿವಿಧೆಡೆ ವೈರಾಲಜಿ ಲ್ಯಾಬ್‌ಗಳಲ್ಲಿ ಟೆಸ್ಟ್‌ ಮಾಡುವಾಗ ಎಚ್‌3ಎನ್‌2 ಎಂದು ವರದಿ ಬಂದಿದೆ. ಜ್ವರ, ಶೀತ, ಕೆಮ್ಮಿನಿಂದ ಬಳಲುತ್ತಿರುವವರಿಂದ ಅಂತರ ಕಾಯ್ದುಕೊಳ್ಳುವುದು ಉತ್ತಮ ಎಂದು ದ.ಕ. ಜಿಲ್ಲಾ ಆರೋಗ್ಯಾಧಿಕಾರಿ ಡಾ| ಕಿಶೋರ್‌ ಕುಮಾರ್‌ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next