Advertisement

ಎಚ್‌1ಎನ್‌1:11 ದಿನಗಳ ಅಂತರದಲ್ಲಿ 10 ಪಾಸಿಟಿವ್‌

09:22 AM Oct 26, 2018 | |

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಎಚ್‌1ಎನ್‌1 ಪಾಸಿಟಿವ್‌ ಪ್ರಕರಣಗಳು ದಿನೇ ದಿನೇ ಹೆಚ್ಚುತ್ತಿವೆ. 11 ದಿನಗಳ ಹಿಂದೆಯಷ್ಟೇ 29 ಮಂದಿಗೆ ಎಚ್‌1ಎನ್‌1 ಕಂಡು ಬಂದಿದ್ದರೆ, ಗುರುವಾರದ ವೇಳೆಗೆ ಸಂಖ್ಯೆ 39ಕ್ಕೆ ಏರಿದೆ.
ಎಚ್‌1ಎನ್‌1 ನಿಯಂತ್ರಣಕ್ಕೆ ಜಿಲ್ಲಾ ಆರೋಗ್ಯ ಇಲಾಖೆಯು ಸರ್ವ ಪ್ರಯತ್ನಗಳನ್ನು ನಡೆಸುತ್ತಿದೆ. ಈಗಾಗಲೇ ಶಂಕಿತ ಎಚ್‌1ಎನ್‌1ನಿಂದ ಮೃತಪಟ್ಟ ನಾಲ್ವರ ಮನೆ ಆಸುಪಾಸಿನಲ್ಲಿ ತೆರಳಿ ಸರ್ವೆ ಕಾರ್ಯ ನಡೆಸಲಾಗಿದ್ದು, ಸೂಕ್ತ ಮುನ್ನೆಚ್ಚರಿಕೆ ವಹಿಸಲಾಗಿದೆ.

Advertisement

ಆದಾಗ್ಯೂ ಈ ವೈರಸ್‌ ಬಾಧೆ ಹೆಚ್ಚುತ್ತಲೇ ಇದ್ದು, ಒಂಬತ್ತು ದಿನಗಳ ಅಂತರದಲ್ಲಿ ಹತ್ತು ಮಂದಿಯಲ್ಲಿ ಪಾಸಿಟಿವ್‌ ಪ್ರಕರಣ ಕಾಣಿಸಿಕೊಂಡಿದೆ. ಈ ಪೈಕಿ ಕೆಲವರು ಗುಣಮುಖರಾಗಿ ಮನೆಗೆ ತೆರಳಿದರೆ, ಉಳಿದವರು ವಿವಿಧ ಸರಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಎಲ್ಲರೂ ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.

ಅಕ್ಟೋಬರ್‌ನಲ್ಲೇ 24ಪಾಸಿಟಿವ್‌ ಪ್ರಕರಣ
ಈ ವರ್ಷ ಜನವರಿಯಿಂದ ಇಲ್ಲಿ ವರೆಗೆ ಒಟ್ಟು 403 ಮಂದಿಯನ್ನು ಎಚ್‌1ಎನ್‌1 ಪರೀಕ್ಷೆಗೊಳಪಡಿಸಲಾಗಿದ್ದು, 39 ಪಾಸಿಟಿವ್‌ ಪ್ರಕರಣ ದಾಖಲಾಗಿವೆ. ಅ.14ರ ವರೆಗೆ ಜಿಲ್ಲೆಯಲ್ಲಿ ಒಟ್ಟು 14 ಎಚ್‌1ಎನ್‌1 ಪಾಸಿಟಿವ್‌ ಪ್ರಕರಣ ಪತ್ತೆಯಾಗಿದ್ದರೆ, ಅ. 25ರ ವೇಳೆಗೆ ಈ ಸಂಖ್ಯೆ 24ಕ್ಕೇರಿದೆ. ಸೆಪ್ಟಂಬರ್‌ನಲ್ಲಿ ಒಟ್ಟು 12 ಪ್ರಕರಣ ಪತ್ತೆಯಾಗಿತ್ತು. ಪಾಸಿಟಿವ್‌ ಪ್ರಕರಣಗಳ ಪೈಕಿ ಬಹುತೇಕ ಮಂಗಳೂರಿನದ್ದಾಗಿವೆ. ಜಿಲ್ಲೆಯಲ್ಲಿ ಸಾಕಷ್ಟು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗುತ್ತಿದ್ದು, ಸದ್ಯ ಎಚ್‌1ಎನ್‌1 ನಿಯಂತ್ರಣದಲ್ಲಿದೆ ಎಂದು ಜಿಲ್ಲಾ ಆರೋಗ್ಯ ಅಧಿಕಾರಿ ಡಾ| ರಾಮಕೃಷ್ಣ ರಾವ್‌ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next