Advertisement

ಎಚ್‌1ಬಿ ವೀಸಾ: ಭಾರತೀಯ ಟೆಕ್ಕಿಗಳಿಗೆ ಕಂಟಕವಾದ ಮಸೂದೆ ಮಂಡನೆ

04:34 PM Mar 24, 2017 | udayavani editorial |

ವಾಷಿಂಗ್ಟನ್‌ : ಅಮೆರಿಕದ ಕಂಪೆನಿಗಳು ಎಚ್‌1ಬಿ ವೀಸಾ ದುರುಪಯೋಗಿಸಿ ಉದ್ಯೋಗಗಳ ಹೊರಗುತ್ತಿಗೆ ನೀಡುವುದನ್ನು ತಡೆಯುವ ಮಸೂದೆಯನ್ನು ಪ್ರತಿನಿಧಿಗಳ ಸಭೆಯಲ್ಲಿ ಮತ್ತೆ ಮಂಡಿಸಲಾಗಿದೆ. ಈ ಮಸೂದೆ ಪಾಸಾದಲ್ಲಿ  ಭಾರತೀಯ ಐಟಿ ಕಂಪೆನಿಗಳಿಗೆ ಮತ್ತು ವೃತ್ತಿಪರರಿಗೆ ಭಾರೀ ಹೊಡೆತ ಬೀಳುವುದು ನಿಶ್ಚಿತವಿದೆ.

Advertisement

ಡೆಮೋಕ್ರಾಟಿಕ್‌ ಸಂಸದ ಡೆರೆಕ್‌ ಕಿಲ್‌ಮರ್‌ ಮತ್ತು ಅವರ ರಿಪಬ್ಲಿಕನ್‌ ಸಹೋದ್ಯೋಗಿ ಡಫ್ ಕಾಲಿನ್ಸ್‌ ಅವರು ಅಮೆರಿಕ ಸಂಸತ್ತಿನಲ್ಲಿ ಈ ಮಸೂದೆಯನ್ನು ಮಂಡಿಸಿದ್ದಾರೆ.

ಎಚ್‌1ಬಿ ಕಾರ್ಯಕ್ರಮದ ಮೂಲಕ ತಾತ್ಕಾಲಿಕ ವೀಸಾಗಳನ್ನು ಪಡೆದು ಅಮೆರಿಕದಲ್ಲಿ ವಿದೇಶಿ ನೌಕರರಿಗೆ ತರಬೇತಿ ನೀಡಿ ಬಳಿಕ ಆ ಉದ್ಯೋಗಗಳನ್ನು ಬೇರೊಂದು ದೇಶಕ್ಕೆ ವರ್ಗಾಯಿಸುವ ಉದ್ಯಮಪತಿಗಳ ಕುಟಿಲೋಪಾಯವನ್ನು ತಡೆಯುವುದು ಈ ಮೂಸದೆಯ ಉದ್ದೇಶವಾಗಿದೆ. 

ಕೆಲ ದಿನಗಳ ಹಿಂದಷ್ಟೇ ಅಮೆರಿಕದ ಸಾರ್ವಜನಿಕ ಪ್ರಸಾರ ಸೇವೆಯು ಸಾಕ್ಷ್ಯ ಚಿತ್ರವೊಂದನ್ನು ಪ್ರದರ್ಶಿಸಿತ್ತು. ಅದರಲ್ಲಿ ಎಚ್‌1ಬಿ ವೀಸಾ ಕಾರ್ಯಕ್ರಮವು ಭಾರತದಂತಹ ದೇಶಗಳ ಪರಿಣತ ತಂತ್ರಜ್ಞಾನ ನೌಕರರಿಗೆ ಅಮೆರಿಕದಲ್ಲಿನ ಹೈಟೆಕ್‌ ಉದ್ಯೋಗಳನ್ನು ಪಡೆಯುವುದಕ್ಕೆ ಹೇಗೆ ಅನುಕೂಲ ಮಾಡಿಕೊಡುತ್ತದೆ ಎನ್ನುವುದನ್ನು ತೋರಿಸಲಾಗಿತ್ತು. 

Advertisement

Udayavani is now on Telegram. Click here to join our channel and stay updated with the latest news.

Next