ಮೈಸೂರು: ನೆಹರುರವರ ಇಡೀ ಕುಟುಂಬ ಸ್ವಾತಂತ್ರ್ಯ ಹೋರಾಟದಲ್ಲಿ ತೊಡಗಿತ್ತು. ಸಿ.ಟಿ.ರವಿ ಟೀಕೆ ಯಾರು ಮೆಚ್ಚುವಂತಹದ್ದಲ್ಲ ಎಂದು ಎಂಎಲ್‌ಸಿ ಹೆಚ್.ವಿಶ್ವನಾಥ್ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಕ್ಷದ ಪ್ರಧಾನ ಕಾರ್ಯದರ್ಶಿಯಾಗಿ ನೀಡಿರುವ ಹೇಳಿಕೆ ಬಿಜೆಪಿಗೆ ಶೋಭೆ ತರಲ್ಲ. ಸಿ.ಟಿ.ರವಿ ಮೇಲ್ಮನೆ, ಕೆಳಮನೆ ನಿಯಮಾವಳಿಗಳನ್ನ ಓದಬೇಕು. ನೆಹರು ಅಸ್ತಂಗತವಾದ ವೇಳೆ ವಾಜಪೇಯಿ ಮಾಡಿದ ಭಾಷಣವನ್ನು ಸಿ.ಟಿ.ರವಿ ಓದಬೇಕು. ಬಲಿಷ್ಠ ಭಾರತ ಕಟ್ಟಿದ ನೆಹರು ಬಗ್ಗೆ ಹುಕ್ಕಾಬಾರ್ ಆರೋಪ ಸಲ್ಲದು. ನೆಹರು ಬಗ್ಗೆ ನಿಮಗೇನು ಗೊತ್ತು ರವಿ. ನೆಹರು ಭಾರತದ ಗರ್ವ, ಅಸ್ಮಿತೆ. ಅಂತಹ ಜನನಾಯಕನ ಬಗ್ಗೆ ಲಘುವಾದ ಹೇಳಿಕೆಯನ್ನ ವಾಪಾಸ್ ಪಡೆಯಬೇಕು. ಯಾರನ್ನೋ ಮೆಚ್ಚಿಸಲಿಕ್ಕೆ ಇಂತಹ ಹೇಳಿಕೆಗನ್ನ ಕೊಡಬೇಡಿ ಎಂದು ಹೇಳಿದರು.
ಇದನ್ನೂ ಓದಿ:ಮಂಡ್ಯದಲ್ಲಿ ಗದ್ದೆಗಿಳಿದು ನಾಟಿ ಮಾಡಿದ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ
ಪ್ರಿಯಾಂಕ ಖರ್ಗೆ ಕೂಡ ವಾಜಪೇಯಿ ಬಗ್ಗೆ ಕುಡುಕ ಎನ್ನಬಾರದು. ವಾಜಪೇಯಿ ಭಾಷಣವನ್ನ ಕೇಳಲು ಒಂದು ವಾರ ದೆಹಲಿಯಲ್ಲೇ ಉಳಿಯುತ್ತಿದ್ದೆ. ಹೆದ್ದಾರಿ ಅಭಿವೃದ್ದಿ ಮೂಲಕ ಸಂಪರ್ಕ ಸಾಧನೆ ಸುಧಾರಣೆ. ನಿಮ್ಮ ತಂದೆಯನ್ನ ನೋಡಿ ಕಲಿತುಕೊಳ್ಳಿ. ನಿಮ್ಮ ತಂದೆ ಖರ್ಗೆ ನಮ್ಮ ನಾಯಕರು ಎಂದರು.
ವೈಯುಕ್ತಿಕ ಜೀವನದ ಬಗ್ಗೆ ಮಾತನಾಡುವ ಅಧಿಕಾರ ಯಾರಿಗೂ ಇಲ್ಲ. ಐವರು ಮಾಜಿ ಮುಖ್ಯಮಂತ್ರಿಗಳು ಯಾಕೆ ಮೌನ ವಹಿಸಿದ್ದೀರಿ. ಯಾಕೆ ನಿಮ್ಮ ಶಾಸಕರಿಗೆ ಶಟಪ್ ಅಂತ ಹೇಳುವ ನೈತಿಕತೆ ಕಳೆದುಕೊಂಡಿದ್ದೀರ ಎಂದು ವಿಶ್ವನಾಥ್ ಕಿಡಿಕಾರಿದರು.