Advertisement

ಎಚ್‌. ವಿಶ್ವನಾಥ್‌ –ಎಚ್‌.ಡಿ. ದೇವೇಗೌಡ ಮಾತುಕತೆ

10:32 AM May 17, 2017 | Karthik A |

ಬೆಂಗಳೂರು: ಜೆಡಿಎಸ್‌ ಹೊಸ್ತಿಲಲ್ಲಿರುವ ಮಾಜಿ ಸಂಸದ ಹಾಗೂ ಕಾಂಗ್ರೆಸ್‌ನ ಹಿರಿಯ ನಾಯಕ ಎಚ್‌.ವಿಶ್ವನಾಥ್‌ ಮಂಗಳವಾರ ಜೆಡಿಎಸ್‌ ರಾಷ್ಟ್ರೀಯ ಆಧ್ಯಕ್ಷ ಎಚ್‌.ಡಿ.ದೇವೇಗೌಡರ ಜತೆ ಸಮಾಲೋಚನೆ ನಡೆಸಿದರು. ಪದ್ಮನಾಭನಗರ ನಿವಾಸಕ್ಕೆ ಸಂಜೆ 5.35ಕ್ಕೆ ಆಗಮಿಸಿದ ವಿಶ್ವನಾಥ್‌ ಸುಮಾರು ಒಂದು ಗಂಟೆ ಕಾಲ ದೇವೇಗೌಡರ ಜತೆ ಮಾತುಕತೆ ನಡೆಸಿದ್ದು ಕುತೂಹಲ ಮೂಡಿಸಿದೆ. ಜೆಡಿಎಸ್‌ಗೆ ಬಂದರೆ ಗೌರವಯುತವಾಗಿ ನಡೆಸಿಕೊಳ್ಳುವ ಬಗ್ಗೆ ಮಾತುಕತೆ ಸಂದರ್ಭದಲ್ಲಿ ದೇವೇಗೌಡರು ಭರವಸೆ ಸಹ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

Advertisement

ಎಚ್‌.ವಿಶ್ವನಾಥ್‌ ಜೆಡಿಎಸ್‌ ಸೇರ್ಪಡೆ ಬಹುತೇಕ ಖಚಿತವಾಗಿದ್ದು, ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಹುಣಸೂರು ಕ್ಷೇತ್ರದಿಂದ ಸ್ಪರ್ಧೆ ಮಾಡಲಿದ್ದಾರೆ. ಆ ಕ್ಷೇತ್ರದಲ್ಲಿ ಪತ್ನಿ ಅಥವಾ ಮಗನಿಗೆ ಟಿಕೆಟ್‌ ಬಯಸಿದ್ದ ಜಿ.ಟಿ.ದೇವೇಗೌಡ ಹಾಗೂ ಪ್ರಜ್ವಲ್‌ ರೇವಣ್ಣ ಅವರು ಅಸಮಾಧಾನಗೊಂಡಿದ್ದು ಅವರ ಜತೆ ದೇವೇಗೌಡರು ಮಾತನಾಡಿ ಸಮಸ್ಯೆ ಬಗೆಹರಿಸಲಿದ್ದಾರೆ ಎಂದು ಹೇಳಲಾಗಿದೆ. ವಿಶ್ವನಾಥ್‌ ಜತೆ ಕಾಂಗ್ರೆಸ್‌ನ ಹಾಲಿ ಆರು ಶಾಸಕರ ಸಂಪರ್ಕದಲ್ಲಿದ್ದು ಸ್ವಲ್ಪ ದಿನ ಕಾದರೆ ತಾವೂ ನಿಮ್ಮ ಜತೆಗೂಡುತ್ತೇವೆ. ಒಂದು ತಂಡವಾಗಿ ಜೆಡಿಎಸ್‌ಗೆ ಹೋಗೋಣ ಎಂಬ ಪ್ರಸ್ತಾವ‌ ಇಟ್ಟದ್ದಾರೆ. ಈ ಬಗ್ಗೆಯೂ ವಿಶ್ವನಾಥ್‌ ಅವರು ದೇವೇಗೌಡರ ಜತೆ ಮಾತುಕತೆ ವೇಳೆ ಚರ್ಚಿಸಿದರು ಎನ್ನಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next