ಮುಂಡರಗಿ: ಹಸಿವು ಪ್ರತಿ ಜೀವಿಗೂ ಸಾಮಾನ್ಯ ಸಂಗತಿ. ಅದೇ ಜ್ಞಾನದ ಹಸಿವು, ಕೆಲವರಿಗೆ ಹೊಟ್ಟೆ ಹೊರೆಯುವ ವೃತ್ತಿ. ಮತ್ತೆಬೆರಣಿಕೆಯಷ್ಟು ಜನರಿಗೆ ಅರಿವಿನ ಪಯಣವಾಗಿ ಪರಿಣಮಿಸುತ್ತದೆ. ಈ ನಿಟ್ಟಿನಲ್ಲಿ ಬೆಂಗಳೂರಿನ ಯುವ ಸಾಹಿತಿಯೊಬ್ಬರು ವಿಶಿಷ್ಟ ಹೆಜ್ಜೆ ಇಟ್ಟಿದ್ದಾರೆ.
ಅರಿವಿನ ಪಯಣದಲ್ಲಿ ಬೆಂಗಳೂರಿನ ಯುವ ಸಾಹಿತಿ ಎಚ್.ಕೆ. ವಿವೇಕಾನಂದಅವರು ಸಾಗುತ್ತಿದ್ದು, ಪಟ್ಟಣಕ್ಕೆ ಬಂದಾಗಮನದಾಳದ ಅರಿವಿನ ಮಾತುಗಳನ್ನುಬಿಚ್ಚಿಟ್ಟಿದ್ದಾರೆ. ಎಚ್.ಕೆ. ವಿವೇಕಾನಂದ ಅವರು ತಮ್ಮ ಬರಹಗಳ ಮೂಲಕ ನಾಡಿನ ಸಾಹಿತ್ಯ ವಲಯದಲ್ಲಿ ಚಿರಪರಿತ ಹೆಸರು. ಬರಹ, ಅರಿವು, ಜ್ಞಾನ, ಪರಿಸರ ಸಂರಕ್ಷಣೆ,ಪ್ರಚಲಿತ ವಿದ್ಯಮಾನಗಳು, ಮಾನವೀಯ ಮೌಲ್ಯಗಳ ಉಳುವಿಗಾಗಿಜನರರೊಂದಿಗೆ ಮುಖಾಮುಖೀಯಾಗಿ ಸಂವಾದ ನಡೆಸಲು ಕಾಲ್ನಡಿಗೆ ಮೂಲಕ ನಾಡು ಸುತ್ತುತ್ತಿದ್ದಾರೆ.
ಕಾಲ್ನಡಿಗೆ ಪ್ರಾರಂಭ: ಕರ್ನಾಟಕದ ತುದಿಯಲ್ಲಿರುವ ಬೀದರ ಜಿಲ್ಲೆ ಔರಾದ ತಾಲೂಕಿನ ವನಮಾರಪಳ್ಳಿ ಗ್ರಾಮದಿಂದ 2020 ನವೆಂಬರ್ 1 ರಿಂದ ಪ್ರಾರಂಭವಾಗಿರುವ ಕಾಲ್ನಡಿಗೆಯು ಪ್ರಬುದ್ಧ ಮನಸ್ಸು,ಪ್ರಬುದ್ಧ ಸಮಾಜದ ಕಲ್ಪನೆ ಇಟ್ಟುಕೊಂಡು ಅರಿವಿನ ಬೆಳಕು ಹಂಚುವದಿಶೆಯಲ್ಲಿ ಕಾಲ್ನಡೆ ಸಾಗುತ್ತಿದೆ. ಈಗಾಗಲೇ 135 ದಿನಗಳಲ್ಲಿ, 4 ಸಾವಿರ ಕಿ.ಮೀ ಅಂತರ ಕಾಲ್ನಡಿಗೆ ಮೂಲಕ ಕ್ರಮಿಸಿ, ಬೀದರ, ಗುಲ್ಬರ್ಗಾ,ಯಾದಗಿರಿ, ರಾಯಚೂರು, ವಿಜಯಪುರ, ಬಾಗಲಕೋಟೆ,ಧಾರವಾಡ, ಹಾವೇರಿ, ಗದಗ ಸುತ್ತಿದ್ದಾರೆ. ಈಗ ಕೊಪ್ಪಳ ಜಿಲ್ಲೆಯಲ್ಲಿಕಾಲ್ನಡಿಗೆಯ ಇದ್ದು, ಕರ್ನಾಟಕದ ಪ್ರತಿಯೊಂದು ತಾಲೂಕು ಕೇಂದ್ರದಲ್ಲಿಯೂ ಕಾಲ್ನಡಿ ಗೆಯು ಸಾಗುತ್ತಿದೆ. ಪ್ರತಿದಿನವೂ ಬೆಳಗ್ಗೆ 8ಗಂಟೆಯಿಂದ ಪ್ರಾರಂಭವಾಗುವ ಕಾಲ್ನಡಿಗೆ ಸಂಜೆ 6 ಗಂಟೆಯವರೆಗೂ ನಡೆಯುತ್ತದೆ. ಇದರ ಮಧ್ಯೆಯೇ ಚರ್ಚೆ, ಸಂವಾದ, ಜನರ ಜೊತೆಗೆ ಮಾತುಕತೆ ನಡೆಸುತ್ತಾರೆ. ಕಾಲ್ನಡಿಗೆಯು ಬೀದರ್ ಜಿಲ್ಲೆಯಲ್ಲಿ 2020 ನವ್ಹೆಂಬರ್‌ನಲ್ಲಿ ಪ್ರಾರಂಭವಾಗಿದ್ದು, 2021 ನವ್ಹೆಂಬರ್‌ನಲ್ಲಿ ಚಾಮರಾಜ ಜಿಲ್ಲೆಯ ಕೊಳ್ಳೆಗಾಲದ ಕರ್ನಾಟಕ-ತಮಿಳುನಾಡುಗಡಿ ಸಂಧಿಸುವ ಗ್ರಾಮದಲ್ಲಿ ಅಂತ್ಯವಾಗಲಿದೆ. ಜೊತೆಗೆ ಕಾಲ್ನಡಿಗೆ ಸಮಾರೋಪ ಕಾರ್ಯಕ್ರಮವು ಮಧ್ಯ ಕರ್ನಾಟಕದ ಹಾವೇರಿಯಲ್ಲಿ ಮಾಡಬೇಕೆನ್ನುವ ಯೋಚನೆ ಇದೆ.
ಸಂವಾದ-ಚರ್ಚೆ: ಕನ್ನಡ ನಾಡು-ನುಡಿ, ಪರಿಸರ ಜಾಗೃತಿ, ಪ್ಲಾಸ್ಟಿಕ್‌ನಿಂದ ಆಗುವ ಪರಿಸರ ನಾಶ ಮತ್ತು ಮಾನವನ ಆರೋಗ್ಯದ ಮೇಲೆ ಆಗುತ್ತಿರುವ ಪರಿಣಾಮಗಳು, ಶಿಥಿಲವಾಗುತ್ತಿರುವಕೌಟುಂಬಿಕ ಸಂಬಂಧಗಳು, ಸಮಾಜದಲ್ಲಿ ಕುಸಿಯುತ್ತಿರುವಮಾನವೀಯ ಮೌಲ್ಯ ಎತ್ತಿ ಹಿಡಿಯುವ ದಿಶೆಯಲ್ಲಿ ಜನರು, ಸಾಹಿತಿಗಳು, ಪ್ರಾಧ್ಯಾಪಕರು, ಮಠಾಧಿಧೀಶರು, ವಕೀಲರು, ಯುವಕರು,ವಿದ್ಯಾರ್ಥಿಗಳ ಜೊತೆಯಲ್ಲಿ ಚರ್ಚೆ-ಸಂವಾದ ನಡೆಸುತ್ತಾರೆ.
ಕೈಯಲ್ಲಿ ಕಾಸಿಲ್ಲ-ಜನರೇ ಪೋಷಕರು: ಎಚ್.ಕೆ. ವಿವೇಕಾನಂದ ಕಾಲ್ನಡಿಗೆ ಪ್ರಾರಂಭಿಸಿದ ದಿನದಿಂದಲೂ ಈವರೆಗೂ ಅವರ ಹತ್ತಿರ ಒಂದು ರೂಪಾಯಿ ಹಣ ಇಲ್ಲ. ಕೈಯಲ್ಲಿ ಕಾಸಿಲ್ಲದೇ ಇದ್ದರೂ ಕಾಲ್ನಡಿಗೆಯ ಮೂಲಕ ಜಾಗೃತಿ ಮೂಡಿಸುವ ಅವರ ಉತ್ಸಾಹವು ಕುಗ್ಗಿಲ್ಲ. ಏಕೆಂದರೇ ಕಾಲ್ನಡಿಗೆಯಲ್ಲಿ ಸಾಗುತ್ತಿರುವ ಪ್ರತಿ ಊರು, ಗ್ರಾಮಗಳಲ್ಲಿ ಜನರು, ಸಾಹಿತಿ ಮಿತ್ರರು, ಯುವಜನರು ಆಹಾರ,ವಸತಿ ವ್ಯವಸ್ಥೆಯನ್ನು ವಿವೇಕಾನಂದರಿಗೆ ಮಾಡುತ್ತಾರೆ. ಇದರಿಂದ ಈವರೆಗೂ ಒಂದು ದಿನವೂ ಕಾಲ್ನಡೆಯಲ್ಲಿ ಉಪವಾಸ ಎನ್ನುವುದು ಅವರಿಗೆ ಬಾಧಿಸಿಲ್ಲ
ಇತಿಹಾಸ ಸ್ನಾತಕೋತ್ತರ ಪದವೀಧರ, ವಿಶ್ವ ಇತಿಹಾಸ ಓದಿಕೊಂಡಿದ್ದೇನೆ. ಶಿಕ್ಷಕನ ಮಗನಾಗಿ ಸಾಮಾಜಿಕ ಸಮಸ್ಯೆ ಅರಿಯುವ, ಕುಸಿಯುತ್ತಿರುವ ಮಾನವೀಯ ಮೌಲ್ಯಗಳು ಉಳಿಸುವ ನಿಟ್ಟಿನಲ್ಲಿ ನನ್ನದೊಂದು ಪ್ರಯತ್ನ ಅಷ್ಟೆ. ಯಾವುದೇಜಾತಿ, ಧರ್ಮ, ಸಿದ್ಧಾಂತಕ್ಕೆ ಅಂಟಿಕೊಳ್ಳದೇ ಕುಸಿಯುತ್ತಿರುವಮಾನವೀಯ ಮೌಲ್ಯಗಳ ಜಾಗೃತಿ ಮೂಡಿಸುವ, ಅರಿವಿನ ಪಯಣದಲ್ಲಿ ಸಾಗುವ ಪುಟ್ಟ ಹೆಜ್ಜೆ ಈ ಅರಿವಿನ ಪಯಣ. –
ಎಚ್.ಕೆ. ವಿವೇಕಾನಂದ, ಯುವ ಸಾಹಿತಿ
–ಹು.ಬಾ.ವಡ್ಡಟ್ಟಿ.