ಬೆಂಗಳೂರು: ಜಿಂದಾಲ್ ಕಂಪೆನಿ ಗೆ ಭೂಮಿ ನೀಡುವ ವಿಚಾರವಾಗಿ ಸರ್ಕಾರದ ವಿರುದ್ಧ ಸಮರ ಸಾರಿದ್ದ ಶಾಸಕ ಎಚ್. ಕೆ. ಪಾಟೀಲ್ ಅವರು ಸರ್ಕಾರಕ್ಕೆ ಇನ್ನೊಂದು ಪತ್ರ ಬರೆದು ಚಾಟಿ ಬೀಸಿದ್ದಾರೆ.
ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮತ್ತು ಗ್ರಾಮೀಣಾಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಅವರಿಗೆ ಪತ್ರ ಬರೆದಿದ್ದು, ಆಕ್ರೋಶ ಕ್ಕೆ ಹೊರ ಹಾಕಿದ್ದಾರೆ ಮಾತ್ರವಲ್ಲದೆ ಟ್ವೀಟ್‌ಗೆ ಪತ್ರವನ್ನು ಲಗತ್ತಿಸಿದ್ದಾರೆ.
ರಾಜ್ಯದ ಬಡ ಜನರಿಗೆ ಶುದ್ಧ ಕುಡಿಯುವ ನೀರು ಪೂರೈಸುವುದು ಸರ್ಕಾರದ ಜವಾಬ್ದಾರಿ , ಸರ್ಕಾರ ಪ್ರತೀ ಲೀಟರ್ ನೀರಿಗೆ ೧೦ ಪೈಸೆಯಂತೆ ಶುದ್ಧಕುಡಿಯುವ ನೀರು ನೀಡುತ್ತಿದೆ ಆದರೆ ನೀರಿನ ದರವನ್ನು ಪ್ರತಿ ಲೀಟರ್ ಗೆ 25 ಪೈಸೆಗೆ ಹೆಚ್ಚಿಸಲು ಮುಂದಾಗಿರುವು ದು ಸರಿಯಲ್ಲ ಎಂದು ಅಸಮಾಧಾನ ಹೊರ ಹಾಕಿದ್ದಾರೆ.
ಕಾಂಗ್ರೆಸ್ ಸರ್ಕಾರ ತಂದ ಅನ್ನ ಭಾಗ್ಯ ಅಕ್ಕಿ ರೀತಿ ನೀರನ್ನೂ ಕಡಿಮೆ ದರದಲ್ಲಿ ನೀಡಬೇಕು ಎಂದು ಆಗ್ರಹಿಸಿದ್ದಾರೆ.
ನೀರಿನ ದರ ಏರಿಕೆ ಕಾಂಗ್ರೆಸ್ ಪಕ್ಷದ ಸಿದ್ಧಾಂತಕ್ಕೆ ತದ್ವಿರುದ್ಧವಾದದ್ದು ಎಂದು ಅಸಮಾಧಾನ ಹೊರ ಹಾಕಿದಾದರೆ.