Advertisement
ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಲ್ಲಿ ರೇವಣ್ಣ ಪರ ಹಿರಿಯ ವಕೀಲ ಸಿ.ವಿ.ನಾಗೇಶ್ ಒಂದೂವರೆ ಗಂಟೆಗಳ ಕಾಲ ವಾದ ಮಂಡಿಸಿದರೆ, ಎಸ್‌ಐಟಿ ಪರ ವಕೀಲರಾದ ಜಾಯ್ನಾ ಕೊಥಾರಿ 45 ನಿಮಿಷಗಳ ಕಾಲ ವಾದ ಮಂಡಿಸಿದರು. ಒಟ್ಟಾರೆ ಎರಡೂವರೆ ಗಂಟೆಗಳ ಕಾಲ ವಾದ ಮಂಡನೆ ಬಳಿಕ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಸಂತೋಷ್ ಗಜಾನನ ಭಟ್ ಅವರು ವಿಚಾರಣೆಯನ್ನು ಮೇ 13ಕ್ಕೆ ಮುಂದೂಡಿದ್ದಾರೆ.
ರೇವಣ್ಣ ಜಾಮೀನು ಅರ್ಜಿಗೆ ಲಿಖೀತ ಆಕ್ಷೇಪಣೆ ಸಲ್ಲಿಸಿದ್ದೇವೆ. ಇದು ಗಂಭೀರ ಪ್ರಕರಣ ಆಗಿರುವುದರಿಂದ ವಾದಮಂಡನೆಗೆ ಕಾಲಾವಕಾಶ ಬೇಕು ಎಂದು ಎಸ್‌ಐಟಿ ಪರ ವಕೀಲರಾದ ಜಾಯ್ನಾ ಕೊಥಾರಿ ಕೇಳಿಕೊಂಡರು. ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಾಧೀಶರು, ನೀವು ಹಿರಿಯ ವಕೀಲರು. ಜಾಮೀನು ಪ್ರಕರಣಗಳಲ್ಲಿ ವಿಳಂಬ ಮಾಡುವಂತಿಲ್ಲವೆಂದು ಸುಪ್ರೀಂಕೋರ್ಟ್ ಸ್ಪಷ್ಟಪಡಿಸಿದೆ. ಎಸ್‌ಐಟಿ ಮನವಿ ಯಂತೆ ಮೊದಲು ಮೇ 7ಕ್ಕೆ ಬಳಿಕ, ಮೇ 8ಕ್ಕೆ, ಆ ಮೇಲೆ ಗುರುವಾರಕ್ಕೆ ವಿಚಾರಣೆ ನಿಗದಿಯಾಗಿದೆ. ಹೀಗಾಗಿ ವಾದ ಮಂಡಿಸುವಂತೆ ಕೇಳುತ್ತಿದ್ದೇನೆ ಎಂದರು. ತನಿಖಾಧಿಕಾರಿ ವರದಿ ಸಲ್ಲಿಸಿಲ್ಲ
ವಿಚಾರಣೆ ಮುಂದೂಡಿದ ಬಳಿಕ ನ್ಯಾಯಾಧೀಶರು, ಸಾಮಾನ್ಯವಾಗಿ ಇಂತಹ ಪ್ರಕರಣಗಳಲ್ಲಿ ತನಿಖಾಧಿಕಾರಿ ತನ್ನ ವರದಿಯನ್ನು ಕೋರ್ಟ್‌ಗೆ ಸಲ್ಲಿಸಬೇಕು. ಈ ಕೇಸ್‌ನಲ್ಲಿ ಎಸ್‌ಐಟಿ ತನಿಖೆಯ ವರದಿಯನ್ನು ಯಾಕೆ ಸಲ್ಲಿಸಿಲ್ಲ ಎಂದು ಪ್ರಶ್ನಿಸಿದರು.
Related Articles
ಎಚ್.ಡಿ.ರೇವಣ್ಣ ಪರ ಹಿರಿಯ ವಕೀಲ ಸಿ.ವಿ.ನಾಗೇಶ್ ವಾದ ಮಂಡಿಸಿ, 364ಎ ಯಾರನ್ನಾದರೂ ಅಪಹರಿಸಿ ಒತ್ತೆಯಾಗಿಟ್ಟುಕೊಂಡು ಬೇಡಿಕೆ ಇಟ್ಟ ಕೆಲಸ ಮಾಡದಿದ್ದರೆ ಕೊಲ್ಲುವುದು ಅಥವಾ ಗಾಯಗೊಳಿಸುವುದಾಗಿದೆ. ಉಗ್ರರು ಇಂಡಿಯನ್ ಏರ್ ಲೈನ್ಸ್ ವಿಮಾನ ಅಪಹರಿಸಿ ಒತ್ತೆಯಾಳುಗಳನ್ನು ಬಿಡಲು ಬಿಡುಗಡೆ ಕೋರಿದ್ದರು. ಈ ಘಟನೆ ಬಳಿಕವೇ ಐಪಿಸಿಗೆ ಸೆ.364ಎ ಸೇರಿಸಲಾಯಿತು. ಆದರೆ ಇಲ್ಲಿ ಇಂತಹ ದುಷ್ಕೃತ್ಯ ನಡೆದಿಲ್ಲ. ಅಪಹರಣಕ್ಕೊಳಗಾದ ಮಹಿಳೆ ಅಪ್ರಾಪ್ತ ವಯಸ್ಕಳಲ್ಲ. ನನಗೆ ಸುಳ್ಳು ಹೇಳಿ ನನ್ನ ತಾಯಿಯನ್ನು ಕರೆದೊಯ್ದರೆಂದು ಮಗ ದೂರು ನೀಡಿ¨ªಾನೆ. ಆದರೆ ತಾಯಿಗೆ ಸುಳ್ಳು ಹೇಳಿ ವಂಚಿಸಿ ಎಳೆದೊಯ್ದ ಆರೋಪವಿಲ್ಲ. ರೇವಣ್ಣ ಸಾಹೇಬರು ಹೇಳಿ¨ªಾರೆಂದು ಕರೆದೊಯ್ದರೆಂದು ದೂರಿನಲ್ಲಿದೆ. ಹಾಗಿದ್ದರೆ ಸಿಎಂ ಹೇಳಿ¨ªಾರೆಂದು ಯಾರನ್ನಾದರೂ ಕರೆದೊಯ್ದರೆ ಸಿಎಂರನ್ನೇ ಬಂಧಿಸುತ್ತಾರೆಯೇ? ಬಲಪ್ರಯೋಗವಿಲ್ಲ, ಮೋಸವಿಲ್ಲ. ಆದರೂ 1ನೇ ಆರೋಪಿಯಾಗಿ ರೇವಣ್ಣರನ್ನು ಹೆಸರಿಸಿ¨ªಾರೆ ಎಂದು ಆಕ್ಷೇಪಿಸಿದರು.
Advertisement
ಸಾಕ್ಷಿಗಳ ಹೇಳಿಕೆಯಲ್ಲಿ ರೇವಣ್ಣ ಹೆಸರು ಉಲ್ಲೇಖ: ಜಾಯ್ನಾಎಸ್ಐಟಿ ಪರ ಹಿರಿಯ ವಕೀಲೆ ಜಾಯ್ನಾ ಕೊಥಾರಿ ವಾದ ಮಂಡಿಸಿ ಅತ್ಯಾಚಾರ ತನಿಖೆಯ ಹಾದಿ ತಪ್ಪಿಸಲು ಅಪಹರಿಸಲಾಗಿದೆ. ರೇವಣ್ಣ ಸೂಚನೆ ಮೇರೆಗೆ ಈ ಅಪಹರಣ ನಡೆದಿದೆ ಎಂದು ದೂರಿನಲ್ಲಿದೆ. ಪ್ರಜ್ವಲ್ ರೇವಣ್ಣ ಭಾಗಿಯಾದ ಅಶ್ಲೀಲ ವೀಡಿಯೋವೊಂದರಲ್ಲಿ ಸಂತ್ರಸ್ತ ಮಹಿಳೆಯೂ ಇ¨ªಾರೆ. ಆಕೆ ದೂರು ನೀಡದಂತೆ ತಡೆಯಲು ಅಪಹರಿಸಲಾಗಿದೆ. ಸಿಆರ್‌ಪಿಸಿ 161 ಅಡಿ ಸಾಕ್ಷಿಗಳ ಹೇಳಿಕೆ ಪಡೆಯಲಾಗಿದೆ. ಸಾಕ್ಷಿಗಳ ಹೇಳಿಕೆಯಲ್ಲಿ ರೇವಣ್ಣ ಹೆಸರು ಉಲ್ಲೇಖವಾಗಿದೆ. ಸೆ.364 ಎ ರೇವಣ್ಣರಿಗೂ ಅನ್ವಯವಾಗುತ್ತದೆ.ಇದು ಜೀವಾವಧಿ, ಮರಣದಂಡನೆ ಶಿಕ್ಷೆ ವಿಧಿಸಬಹುದಾದಂತಹ ಪ್ರಕರಣವಾಗಿರುವುದರಿಂದ ಇದರಲ್ಲಿ ಜಾಮೀನು ನೀಡಬಾರದು. ಜಾಮೀನು ನೀಡಿದರೆ ಸಾಕ್ಷಿಗಳ ಮೇಲೆ ಪ್ರಭಾವ ಬೀರುವ ಸಾಧ್ಯತೆ ಇದೆ. ಸಾಕ್ಷಿಗಳು, ಸಂತ್ರಸ್ತೆಯರನ್ನು ಸುಮ್ಮನಿರಿಸುವ ಯತ್ನಗಳಾಗಬಹುದು. ಎಚ್.ಡಿ.ರೇವಣ್ಣ ವಿರುದ್ಧ ಈಗಾಗಲೇ ಹೊಳೆನರಸೀಪುರದಲ್ಲಿ ಲೈಂಗಿಕ ದೌರ್ಜನ್ಯದ ಕೇಸ್ ದಾಖಲಾಗಿದೆ. ಈ ಹಿನ್ನೆಲೆಯಲ್ಲಿ ಆರೋಪಿಗೆ ಕ್ರಿಮಿನಲ್ ಹಿನ್ನೆಲೆ ಇದೆ.