Advertisement

ರೇವಣ್ಣಗೆ ಎಚ್ಚರಿಕೆ ಗಂಟೆ ಬಾರಿಸಿದ ಫ‌ಲಿತಾಂಶ!

03:31 PM May 14, 2023 | Team Udayavani |

ಹಾಸನ: ಜಿಲ್ಲೆಯ ದಳಪತಿ ಎಚ್‌.ಡಿ.ರೇವಣ್ಣ ಅವರು ಕೇವಲ 3152 ಮತಗಳ ಅಂತರದಲ್ಲಿ ಪ್ರಯಾಸದ ಗೆಲುವು ಸಾಧಿಸಿರುವುದ ರೊಂದಿಗೆ ಜಿಲ್ಲೆಯಲ್ಲಿ ಜೆಡಿಎಸ್‌ 2 ಕ್ಷೇತ್ರಗಳನ್ನು ಕಳೆದು ಕೊಂಡಿರುವುದು ಜೆಡಿಎಸ್‌ಗೆ ಎಚ್ಚರಿಕೆಯ ಗಂಟೆ.

Advertisement

ಜಿಲ್ಲೆಯ ಎಲ್ಲ 7 ಕ್ಷೇತ್ರಗಳನ್ನು ಗೆದ್ದು ಜೆಡಿಎಸ್‌ಭದ್ರಕೋಟೆ ಮತ್ತಷ್ಟು ಬಲಪಡಿಸಬೇಕು ಎಂಬ ಉತ್ಸಾಹದಲ್ಲಿದ್ದ ರೇವಣ್ಣ ಅವರಿಗೆ ಹೊಳೆನರಸೀಪುರ ಕ್ಷೇತ್ರದ ಕೂದಲೆಳೆ ಅಂತರದ ಗೆಲುವು ಸೋಲಿಗಿಂತ ತೀವ್ರ ಆಘಾತವನ್ನೇ ನೀಡಿದೆ.

ಹೊಳೆನರಸೀಪುರ ಕ್ಷೇತ್ರದಲ್ಲಿ ರೇವಣ್ಣ ಅವರು ತಮ್ಮ ಕುಟುಂಬದ ಸಾಂಪ್ರದಾಯಿಕ ರಾಜಕೀಯ ಶತ್ರು ಜಿ.ಪುಟ್ಟಸ್ವಾಮಿಗೌಡ ಅವರೆದುರು 1994ರ ಚುನಾವಣೆಯಲ್ಲಿ ಕೇವಲ 22ಮತಗಳ ಅಂತರದಿಂದ ಗೆದ್ದು ಮೊದಲ ಬಾರಿಗೆ ವಿಧಾನಸಭೆ ಪ್ರವೇಶಿಸಿದ್ದರು. ಅಂದು ದೇವೇಗೌಡರು ಮುಖ್ಯಮಂತ್ರಿಯಾದರು. ಆನಂತರ ದೇವೇಗೌಡರು ಪ್ರಧಾನಿಯಾದರು. ಆಗ ರೇವಣ್ಣ ಅವರು ಮಂತ್ರಿಯಾದರು. ಆನಂತರ 1999ರಲ್ಲಿ ಜಿಲ್ಲೆಯ ಎಲ್ಲ ಕ್ಷೇತ್ರಗಳಲ್ಲೂ ಜೆಡಿಎಸ್‌ ಸೋತು ಹೋಗಿತ್ತು. ಆನಂತರ 2004 ವಿಧಾನಸಭಾ ಚುನಾವಣೆಯಲ್ಲಿ ಜಿಲ್ಲೆಯ 5 ಕ್ಷೇತ್ರಗಳಲ್ಲಿ ಗೆದ್ದ ನಂತರ ಪ್ರತಿ ಚುನಾವಣೆಯಲ್ಲೂ ಜೆಡಿಎಸ್‌ ಪ್ರಾಬಲ್ಯ ಮೆರೆಯುತ್ತಲೇ ಹೋಗಿತ್ತು. ಆದರೆ, ಈ ಬಾರಿ ಚುನಾವಣೆಯಲ್ಲಿ ತಮ್ಮ ಕುಟುಂಬದ ಸಾಂಪ್ರದಾಯಿಕ ರಾಜಕೀಯ ಶತ್ರು ಜಿ.ಪುಟ್ಟಸ್ವಾಮಿಗೌಡರ ಮೊಮ್ಮಗನ ಎದುರು ಸೋಲಿನಂಚಿಗೆ ಬಂದು ನಿಂತು ಕೂದಲೆಳೆಯಲ್ಲಿ ಬಚಾವಾಗಿದ್ದರ ಬಗ್ಗೆ ರೇವಣ್ಣ ಅವರು ಆತ್ಮಾವಲೋಕನ ಮಾಡಿಕೊಳ್ಳಬೇಕೆಂಬುದನ್ನು ಸೂಚಿಸಿದಂತಿದೆ.

ಯಾವ ಲೋಪವಾಗಿದೆ: ಅಭಿವೃದ್ಧಿ ವಿಷಯದಲ್ಲಿ ಎಚ್‌.ಡಿ.ರೇವಣ್ಣ ಅವರ ನಡೆ ಪ್ರಶ್ನಾತೀತ. ಹೊಳೆನರಸೀಪುರ ಅಷ್ಟೇ ಅಲ್ಲ. ಹಾಸನ ಜಿಲ್ಲೆಯ ಅಭಿವೃದ್ಧಿ ಹರಿಕಾರ ಎಂದೇ ಜನರು ಗುರ್ತಿಸುತ್ತಾರೆ. ವಿಶೇಷವಾಗಿ ಡೇರಿ ಅಭಿವೃದ್ಧಿಯಲ್ಲಿ ಅವರ ಸಾಧನೆಗೆ ರಾಜ್ಯದಲ್ಲಿಯೇ ಮೆಚ್ಚುಗೆಗೆ ಪಾತ್ರವಾಗಿದೆ. ಇಷ್ಟೆಲ್ಲಾ ಸಾಧನೆ ಮಾಡಿದರೂ ರೇವಣ್ಣ ಅವರು ಪ್ರಯಾಸದ ಜಯ ಸಾಧಿಸಬೇಕಾದ ಹಾಗೂ ಜಿಲ್ಲೆಯಲ್ಲಿ ಜೆಡಿಎಸ್‌ ಸ್ಥಾನಗಳನ್ನು ಕಳೆದು ಕೊಳ್ಳಬೇಕಾದ ಪರಿಸ್ಥಿತಿ ನಿರ್ಮಾಣವಾಗಿರುವುದರ ಹಿಂದೆ ಆಗಿರುವ ಲೋಪಗಳನ್ನು ರೇವಣ್ಣ ಅವರು ಗುರ್ತಿಸಿಕೊಳ್ಳಬೇಕಾಗಿದೆ.

ಅಧಿಕಾರ ಕೇಂದ್ರೀಕರಣ ವಿರುದ್ಧ ಸಂದೇಶ: ರೇವಣ್ಣ ಅವರು ಅಭಿವೃದ್ಧಿ ಮಾಡಿದರೂ ಜನರಿಗೆ ಆಕ್ರೋಶ ಇರುವುದು ಕುಟುಂಬ ರಾಜಕಾರಣ ಎಂಬುದು ಸಾಮಾನ್ಯ ಆರೋಪ. ಆದರೆ, ರಾಜ್ಯದಲ್ಲಿ ಕುಟುಂಬ ರಾಜಕಾರಣ ಎಲ್ಲ ಪಕ್ಷಗಳಲೂ, ಹಲವು ಜಿಲ್ಲೆಗಳಲ್ಲಿದೆ. ಆದರೆ, ನಾಯಕತ್ವದಲ್ಲಿ ಅಧಿಕಾರ ಕೇಂದ್ರೀಕರಣ ಮಾಡಿಕೊಳ್ಳದೇ ಕಾರ್ಯಕರ್ತರನ್ನು ನಾಯಕರನ್ನಾಗಿ ಬೆಳೆಸಿ ವಿಸ್ತರಿಸಬೇಕಿದೆ. ಮತ್ತು ಜನರೊಂದಿಗೆ ಇಟ್ಟುಕೊಳ್ಳಬೇಕಾದ ಸಂಬಂಧಗಳೂ ಮುಖ್ಯ. ಅದನ್ನೇ ಈ ಚುನಾವಣೆಯಲ್ಲಿ ಜನರು ಮನವರಿಕೆ ಮಾಡಿಕೊಟ್ಟಂತಿದೆ. ಅದಕ್ಕೆ ಅರಸೀಕೆರೆ ಕ್ಷೇತ್ರದ ಕೆ.ಎಂ. ಶಿವಲಿಂಗೇಗೌಡ ಅವರ ನಡೆ, ಅರಕಲಗೂಡು ಕ್ಷೇತ್ರದ ಎ.ಟಿ.ರಾಮಸ್ವಾಮಿ ಅವರ ನಿರ್ಗಮನವೂ ಉದಾಹರಣೆಯಾದೀತು.

Advertisement

ಕೆಎಂಶಿ ಗೆಲುವು ದಳಕ್ಕೆ ಶಾಕ್‌: ಶಿವಲಿಂಗೇಗೌಡ ಅವರು ದೇವೇಗೌಡರ ಕುಟುಂಬದಿಂದ ಸಹಕಾ ರದಿಂದಲೇ ರಾಜಕಾರಣದಲ್ಲಿ ಬೆಳೆದವರು. ಅವರು ಈ ಬಾರಿ ದೇವೇಗೌಡರ ಕುಟುಂಬದ ಎದುರೇ ಸೆಡ್ಡು ಹೊಡೆದು ಕಾಂಗ್ರೆಸ್‌ನಿಂದ ಸ್ಪರ್ಧೆಗಿಳಿದರೂ ಜಿಲ್ಲೆಯ ಮಟ್ಟಿಗೆ ಭಾರೀ ಅಂತರದ ಗೆಲುವು ಸಾಧಿಸಿದ್ದಾರೆ. ಇದೂ ಕೂಡ ಜೆಡಿಎಸ್‌ಗೆ ವಿಶೇಷವಾಗಿ ದೇವೇಗೌಡರ ಕುಟುಂಬಕ್ಕೆ ನುಂಗಲಾರದ ತುತ್ತು. ಆದರೆ, ಹಾಸನ ಕ್ಷೇತ್ರವನ್ನು ಸವಾಲಾಗಿ ಸ್ವೀಕರಿಸಿ ಗೆದ್ದುಕೊಂಡಿರುವುದು ಈ ಎಲ್ಲ ನೋವುಗಳ ನಡುವೆಯೂ ದೇವೇಗೌಡರು ಹಾಗೂ ರೇವಣ್ಣ ಅವರಿಗೆ ತುಸು ಸಮಾಧಾನ ತಂದಿರಬಹುದು.

ಗೌಡರ ಕುಟುಂಬದ ನಂತರ ಅಪ್ಪ – ಮಕ್ಕಳ ಗೆಲುವು: ಅರಕಲಗೂಡು ಕ್ಷೇತ್ರದಲ್ಲಿ ಎ.ಮಂಜು ಜೆಡಿಎಸ್‌ನಿಂದ , ಅವರ ಪುತ್ರ ಡಾ.ಮಂತರ್‌ಗೌಡ ಪಕ್ಕದ ಕೊಡಗು ಜಿಲ್ಲೆ ಮಡಿಕೇರಿ ಕ್ಷೇತ್ರ ದಿಂದ ಕಾಂಗ್ರೆಸ್‌ನಿಂದ ಸ್ಪರ್ಧೆಗಿಳಿದು ವಿಜಯಿ ಆಗಿದ್ದಾರೆ. ಜಿಲ್ಲೆಯ ರಾಜಕಾರಣಿಗಳ ಪೈಕಿ ದೇವೇಗೌಡರು ಮತ್ತು ರೇವಣ್ಣ ವಿಧಾನಸಭೆಯಲ್ಲಿದ್ದರು. ಈ ಎ.ಮಂಜು ಮತ್ತು ಮಂತರಗೌಡ ವಿಧಾನಸಭೆಯಲ್ಲಿರುವುದು ವಿಶೇಷ.

Advertisement

Udayavani is now on Telegram. Click here to join our channel and stay updated with the latest news.

Next