ಮೈಸೂರು: ಶಾಸಕ ಜಿ.ಟಿ.ದೇವೇಗೌಡರನ್ನು ಮತ್ತೆ ಪಕ್ಷಕ್ಕೆ ಕರೆದುಕೊಳ್ಳುವುದಿಲ್ಲ. ಹಳೆಯ ತಪ್ಪು ಮತ್ತೆ ಮರುಕಳಿಸುವಂತೆ ಮಾಡುವುದಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಹೇಳಿದರು.
ಮೈಸೂರಿನಲ್ಲಿ ಮಾತನಾಡಿದ ಅವರು, ಹೆಚ್.ಡಿ.ದೇವೇಗೌಡರಿಗೆ ಅವರ ಮೇಲೆ ಸಾಫ್ಟ್ ಕಾರ್ನರ್ ಇದೆ. ಅವರಿಗೆ ಸಾಕಷ್ಟು ಜನ ತಪ್ಪು ಸಂದೇಶ ನೀಡುತ್ತಿದ್ದಾರೆ. ಈ ಬಾರಿ ನಾನು ಜಿಟಿಡಿ ವಿಚಾರವನ್ನು ಅವರಿಗೆ ಸ್ಪಷ್ಟವಾಗಿ ಹೇಳುತ್ತೇನೆ. ಇಲ್ಲಿ ಕ್ಷಮೆ ನೀಡುವ ಪ್ರಮೇಯವೇ ಇಲ್ಲ ಎಂದರು.
ಇದನ್ನೂ ಓದಿ:ಹೆಚ್ಚುತ್ತಿದೆ ಕೋವಿಡ್ ಪ್ರಕರಣಗಳು: ನೈಟ್ ಕರ್ಫ್ಯೂ ಜಾರಿ ಬಗ್ಗೆ ಮಾಹಿತಿ ನೀಡಿದ ಬೊಮ್ಮಾಯಿ
ಜಿ.ಟಿ.ದೇವೇಗೌಡರು ದೊಡ್ಡ ಆಲದ ಮರ ಎಂದು ಹೇಳಿಕೊಂಡಿದ್ದಾರೆ. ಸಹಕಾರ ಕ್ಷೇತ್ರದಲ್ಲಿ ನನ್ನನ್ನ ಯಾರು ಅಲುಗಾಡಿಸಲು ಸಾಧ್ಯವಿಲ್ಲ ಎಂದಿದ್ದಾರೆ. ನನಗೆ ಸಹಕಾರ ಕ್ಷೇತ್ರ ಗೊತ್ತಿಲ್ಲ. ಆದರೆ ನಾನು ಈ ಬಾರಿ ಚುನಾವಣೆಯಲ್ಲಿ ಯಶಸ್ಸು ಗಳುಸುವ ವಿಶ್ವಾಸವಿದೆ. ಕಾರ್ಯಕರ್ತರಿಗಾಗಿ, ಪಕ್ಷ ಉಳಿಸಿಕೊಳ್ಳಲು ನಾನು ಚುನಾವಣೆಗೆ ಧುಮುಕಿದ್ದೇನೆ ಎಂದರು.
2006ರಲ್ಲೇ ನಾವು ಬುದ್ದಿ ಕಲಿಯಬೇಕಿತ್ತು. ಆಗಲೇ ನಾನು ಚುನಾವಣೆಯಲ್ಲಿ ಗೆಲ್ಲುತ್ತಿದ್ದೆ ಎಂದ ಅವರು ಕೆ.ಮಹದೇವ್ ಸೇರಿದಂತೆ ಯಾರನ್ನೂ ಕಡೆಗಣಿಸಿಲ್ಲ. ಸಾ.ರಾ.ಮಹೇಶ್ ಹೇಳಿದ್ದನೆಲ್ಲ ಕೇಳಲು ನಾನು ಕೋಲೆ ಬಸವ ಅಲ್ಲ ಎಂದರು.
ಇದನ್ನೂ ಓದಿ: ರಾಜ್ಯದಲ್ಲಿ ಎಷ್ಟೋ ಜನ ಮಹಾನ್ ನಾಯಕರಿಲ್ವ, ಡಿಕೆಶಿ ಯಾಕೆ ಅವರ ಹೆಸರೇ ಹೇಳುತ್ತಾರೆ: ಎಚ್ ಡಿಕೆ