ಬೆಂಗಳೂರು: ಗೋವಾ ಮತ್ತು ಪಂಜಾಬಿನಲ್ಲಿ ಸರಕಾರ ರಚನೆ ಮಾಡುತ್ತೇವೆ, ಶಾಸಕರ ರಕ್ಷಣೆ ಮಾಡುತ್ತೇವೆ ಎಂದು ಇಲ್ಲಿಂದ ಹೋಗಿಲ್ಲವಾ ? ನೋಡೋಣ ಏನು ಮಾಡುತ್ತಾರೆ ಎಂದು ಡಿ.ಕೆ.ಶಿವಕುಮಾರ್ ವಿರುದ್ಧ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ವ್ಯಂಗ್ಯವಾಡಿದ್ದಾರೆ.
ಸುದ್ದಿಗಾರರಿಗೆ ಪ್ರತಿಕ್ರಿಯೆ ನೀಡಿದ ಅವರು, ಮೊನ್ನೆ ಎಕ್ಸಿಟ್ ಪೋಲ್ ಬಿಡುಗಡೆಯಾಗಿತ್ತು. ಅದೇ ರೀತಿ ಫಲಿತಾಂಶ ಕಾಣಿಸುತ್ತಿದೆ. ನೂರಾರು ವರ್ಷ ಇತಿಹಾಸವಿದೆಯೆಂದು ಏನ್ ಕಾಂಗ್ರೆಸ್ ಹೇಳುತ್ತೆ? ಎಂದು ಪ್ರಶ್ನಿಸಿದರು.
ಕರ್ನಾಟಕದಲ್ಲಿ ಮೇಲಿದ್ದಾರೆ ಅಲ್ವಾ (ಸಿದ್ದರಾಮಯ್ಯ, ಡಿಕೆಶಿ ) ಅವರಿಗೆ ಜ್ಞಾನೋದಯ ಆಗಬೇಕು. ಪ್ರಾದೇಶಿಕ ಪಕ್ಷ ಮುಗಿಸುತ್ತೇವೆಂದು ಹೇಳುತ್ತಾ ಇದ್ದಾರಲ್ಲ. ದೇಶದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಬೇಕೆಂದರೆ ಪ್ರಾದೇಶಿಕ ಪಕ್ಷಗಳ ಅವಶ್ಯಕತೆಯಿದೆ ಎಂದು ಕಂಡು ಬರುತ್ತಿದೆ ಎಂದರು.
ಇದನ್ನೂ ಓದಿ:ಪಂಜಾಬ್ ಹಾಗೂ ರಾಜ್ಯದಲ್ಲಿ ಕಾಂಗ್ರೆಸ್ ನಾಶ ಮಾಡಿದ ಸಿದ್ದು!: ಶೆಟ್ಟರ್ ವ್ಯಂಗ್ಯ
ರಾಜ್ಯದಲ್ಲಿ ನೀರಾವರಿ ಸಮಸ್ಯಗಳಿವೆ. ಮುಂದಿನ ಒಂದು ವರ್ಷ ನೀರಾವರಿಗಾಗಿ ಕಾರ್ಯಕ್ರಮ ಮಾಡುತ್ತಿದ್ದೇವೆ. ಪಂಜಾಬ್, ಪಶ್ಚಿಮ ಬಂಗಾಳದ ಫಲಿತಾಂಶ ನಮಗೆ ಸ್ಪೂರ್ತಿ. ಐದು ರಾಜ್ಯಗಳ ಫಲಿತಾಂಶವೇ ಬೇರೆ. ಅಲ್ಲಿನ ಪರಿಸ್ಥಿತಿಗಳೇ ಬೇರೆ. ನಮ್ಮ ರಾಜ್ಯದ ಪರಿಸ್ಥಿತಿಯೇ ಬೇರೆ. ನಮ್ಮ ಚುನಾವಣೆಗೆ ಇನ್ನೂ ಒಂದು ವರ್ಷವಿದೆ, ನೋಡೋಣ ಏನೆಲ್ಲಾ ಆಗುತ್ತದೆ ಎಂದು ಕುಮಾರಸ್ವಾಮಿ ಹೇಳಿದರು.