ಕಲಬುರಗಿ: ರಾಜ್ಯದಲ್ಲಿ ಬಿಜೆಪಿ ಆಡಳಿತದಲ್ಲಿ ಏನು ಉಳಿದುಕೊಂಡಿಲ್ಲ. ಬರೀ ಜಾತಿ ವಿವಾದಗಳು, ಹಗರಣಗಳೇ ಪ್ರಮುಖವಾಗಿವೆ. “ನನಗೇನು ಚಡ್ಡಿ ವಿಚಾರ ಬೇಕಿಲ್ಲ” ಯಾರೂ ಬೇಕಾದರೂ ಚಡ್ಡಿ ಬಿಚ್ಚಿಕೊಳ್ಳಲಿ. ಆದರೆ, ಜನರಿಗೆ ಮಾತ್ರ ಚಡ್ಡಿ ತೊಡಿಸುವ ದುಸ್ಸಾಹಸ ಸರಕಾರ ಮಾಡದಿದ್ದರೆ ಸಾಕು ಎಂದು ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ ಸಂಘ-ಪರವಾರದ ಮುಖಂಡರನ್ನು ತರಾಟೆಗೆ ತೆಗೆದುಕೊಂಡರು.
ನಗರದ ಮಣ್ಣೂರು ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಸೋಮವಾರ ಪತ್ರಕರ್ತರ ಆರೋಗ್ಯ ಚಿಕಿತ್ಸಾ ಶಿಬಿರಕ್ಕೆ ಚಾಲನೆ ನೀಡಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು. “ಯಾರು ಯಾರು ಕಿತ್ತಾಡಿಕೊಂಡು ಚಡ್ಡಿ ಬಿಚ್ಚಿಕೊಳ್ಳುತ್ತಾರೋ ನನಗೆ ಗೊತ್ತಿಲ್ಲ. ನನಗೆ ಚಡ್ಡಿ ರಾಜಕಾರಣ ಬೇಕಾಗಿಲ್ಲ” ಎಂದು ಛೇಡಿಸಿದರು.
ಈಗ ನಾನೇನು ಮಾತನಾಡುವುದಿಲ್ಲ. ರಾಜ್ಯ ಸಭೆಯ ಚುನಾವಣೆಗಳ ಬಳಿಕ ಮಾತನಾಡುತ್ತೇನೆ. ಸದ್ಯಕ್ಕೆ ಮೂರು ಪಕ್ಷಗಳಲ್ಲಿ ತಮ್ಮದೇ ಆಗಿರುವ ತಂತ್ರಗಳಿವೆ. ಲೆಕ್ಕಾಚಾರಗಳಿವೆ. ಬಹುತೇಕ ಅಡ್ಡ ಮತದಾನ ಸಾಧ್ಯವಾಗಲಿದೆ ಎನ್ನುವ ಲೆಕ್ಕಾಚಾರವೇ ಇಂದಿನ ದಿನಗಳ ಚರ್ಚೆಯೂ ಆಗಿದೆ. ಆದ್ದರಿಂದ ಈಗಲೇ ಏನೂ ಮಾತನಾಡುವಂತಿಲ್ಲ ಎಂದರು.
ಊಂಡು- ಕೊಂಡು ಹೋದರು
ಜೆಡಿಎಸ್ ನಲ್ಲಿ ಎಲ್ಲವನ್ನೂ ಪಡೆದು ಈಗ ಬಿಟ್ಟು ಹೋದವರು ಗೆಲುವಿಗಾಗಿ ಏನೇನು ಮಾಡುತ್ತಿದ್ದಾರೆ ನನಗೂ ಗೊತ್ತಿಲ್ಲ. ಆ ವಿಚಾರ ಮಾತನಾಡಲಾರೆ. ಈಗ ಉದ್ದುದ್ದ ಮಾತನಾಡುವವರು 40 ವರ್ಷ ನಮ್ಮ ಪಕ್ಷದಲ್ಲೇ ಇದ್ದರಲ್ಲಾ ಆವಾಗ ಏನು ಮಾಡಿದ್ದೀರಿ. ನಾನು ಮುಖ್ಯಮಂತ್ರಿಯಾಗಿದ್ದಾಗ ನಿಮಗೆ ರಾಜ್ಯದಲ್ಲಿ ಎಷ್ಟು ಕಾಲೇಜುಗಳಿದ್ದವು. ನಿಮ್ಮ ಭಾಗದಲ್ಲಿ ಏನು ಆಗುತ್ತಿದೆ ಎನ್ನುವುದು ಗೊತ್ತಿರಲಿಲ್ಲ. ಈಗಲೂ ನೀವು ಗೆಲುವಿಗಾಗಿ ಮ್ಯಾಚ್ ಫಿಕ್ಸಿಂಗ್ ಮಾಡಿಕೊಂಡಿರುವುದು ಗೊತ್ತಿಲ್ಲವೇನು? ನಾನು ಇದ್ದಾಗೆ ನಾನೇ ಬ್ಯಾಟಿಂಗ್, ಫಿಲ್ಡಿಂಗ್, ಬೌಲಿಂಗ್ ಮಾಡಿದ್ದೇನೆ. ಅವರು ನಮಗೇನು ಮಾಡಿಲ್ಲ, ನಮ್ಮಲ್ಲಿಯೇ ಉಂಡು, ಕೊಂಡು ಹೋಗಿದ್ದಾರೆ ಎಂದು ಹೊರಟ್ಟಿ ಅವರ ನಡೆಯನ್ನು ಟೀಕಿಸಿದರು.
ಇದನ್ನೂ ಓದಿ:ಕಾರ್ಕಳ: ರಸ್ತೆಗೆ ನಾಥೂರಾಮ್ ಗೋಡ್ಸೆ ಹೆಸರು; ಸ್ಪಷ್ಟನೆ ನೀಡಿದ ಸಚಿವ ಸುನೀಲ್ ಕುಮಾರ್
ಸಂಸದೆ ಸುಮಲತಾ ಅಂಬರೀಷ ಅವರ ಬಗ್ಗೆ ನಾನೇನು ಮಾತನಾಡುವುದಿಲ್ಲ. ಅವರ ಕ್ರೆಡಿಟ್ ಪಾಲಿಟಿಕ್ಸ್ ವಿಚಾರ. ಅವರು ಚೆನ್ನಾಗಿ ಕೆಲಸ ಮಾಡುತ್ತಿದ್ದಾರೆ. ಮಾಡಲಿ ಬಿಡಿ ಎಂದರು.