Advertisement
ರೆಸಾರ್ಟ್ ಬಳಿ ರಸ್ತೆಯಲ್ಲಿ ನಿಂತು ಚಿತ್ರೀಕರಣ ನಡೆಸುತ್ತಿದ್ದಾಗ ಅವರ ಜತೆಗೆ ವಾಗ್ವಾದಕ್ಕಿಳಿದ ಪೋಲಿಸ್ ಅಧಿಕಾರಿ ಕೆಮರಾಮ್ಯಾನ್‌ನ್ನು ತಳ್ಳಿದ್ದು,ಮತ್ತೋರ್ವ ಅಧಿಕಾರಿ ಮಾಧ್ಯಮದವರನ್ನು ನಿಂದಿಸುತ್ತಿರುವುದು ಟ್ರೋಲ್ ಆಗಿದೆ.
ಸಿಎಂ ಮತ್ತು ಮಾಜಿ ಪಿಎಂಗೆ ಚಿಕಿತ್ಸೆ ನೀಡುತ್ತಿರುವ ಹಿನ್ನೆಲೆಯಲ್ಲಿ ರೆಸಾರ್ಟ್‌ನೊಳಗೆ ಮಾಧ್ಯಮ ಪ್ರವೇಶಕ್ಕೆ ನಿರ್ಬಂಧ ವಿಧಿಸಲಾಗಿದೆ. ಜತೆಗೆ ರೆಸಾರ್ಟ್‌ನ ಹೊರಗಿನ 100 ಮೀ. ವ್ಯಾಪ್ತಿಯೊಳಗೂ ಮಾಧ್ಯಮದವರು ವಿಡೀಯೋ ಚಿತ್ರೀಕರಣ ನಡೆಸದಂತೆ ಪೊಲೀಸರು ತಡೆಯೊಡ್ಡಿದ್ದಾರೆ. ನಿವಾಸಿಗಳಿಗೂ ತೊಂದರೆ?
ರೆಸಾರ್ಟ್ ಬಳಿಯ ಮನೆ ಅಂಗಳದಲ್ಲಿ ನಿಂತು ಚಿತ್ರೀಕರಣ ನಡೆಸುತ್ತಿದ್ದ ವೇಳೆ ಅಲ್ಲಿಗೆ ಆಗಮಿಸಿದ ಪೊಲೀಸರು ಮನೆಯವರಿಗೂ ಬೆದರಿಕೆ ಹಾಕಿದ್ದಾರೆಂದು ಹೇಳಲಾಗಿದೆ.
ಕೆಟ್ಟ ಪದ ಪ್ರಯೋಗ ಆರೋಪಸ್ಥಳದಲ್ಲಿ ಕರ್ತವ್ಯದಲ್ಲಿದ್ದ ಶಿರ್ವ ಎಸ್‌ಐ ಅಬ್ದುಲ್ ಖಾದರ್ ಮತ್ತುಕಾಪು ಎಸ್‌ಐ ನವೀನ್ ನಾಯಕ್ ಮತ್ತಿತರ ಅಧಿಕಾರಿಗಳು ಮಾಧ್ಯಮದವರೊಂದಿಗೆ ಉಢಾಪೆಯಾಗಿ ಮಾತನಾಡಿದ್ದು, ಚಿತ್ರೀಕರಣ ನಡೆಸದಂತೆ ತಡೆದಿದ್ದಾರೆ. ಕೆಮರಾಮ್ಯಾನ್ ಓರ್ವರನ್ನು ದೂಡಿದ್ದಾರೆ. ಕೆಟ್ಟ ಪದ ಪ್ರಯೋಗ ಮಾಡಿದ್ದಾರೆ ಎಂದು ವರದಿಗಾರರು ಆರೋಪಿಸಿದ್ದಾರೆ.
Related Articles
ಈ ಬಗ್ಗೆ ಮಾಧ್ಯಮ ಪ್ರತಿನಿಧಿಗಳು ಉಡುಪಿ ಎಸ್ಪಿಗೆ ದೂರು ನೀಡಿದ್ದಾರೆ.ಈ ಹಿನ್ನೆಲೆಯಲ್ಲಿ ಹೆಚ್ಚುವರಿ ಎಸ್ಪಿಕುಮಾರಚಂದ್ರ ಮತ್ತು ಎಎಸ್ಪಿ ಕೃಷ್ಣಕಾಂತ್ ಅವರು ಸ್ಥಳಕ್ಕೆ ಭೇಟಿ ನೀಡಿದ್ದು, ಪೊಲೀಸರು ಮತ್ತು ಮಾಧ್ಯಮದವ ರೊಂದಿಗೆ ಮಾತುಕತೆ ನಡೆಸಿದ್ದಾರೆ. ಪರಿಸ್ಥಿತಿ ತಿಳಿಗೊಳಿಸಿ ಮಾಧ್ಯಮದವ ರೊಂದಿಗೆ ಅನುಚಿತವಾಗಿ ವರ್ತನೆ ಗೈದ ಅಧಿಕಾರಿಗಳ ವಿರುದ್ಧ ಲಿಖೀತ ದೂರು ಬಂದರೆ ಪರಿಶೀಲಿಸುವು ದಾಗಿ ಭರವಸೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.ಮುಂದುವರಿದ ಚಿಕಿತ್ಸೆರೆಸಾರ್ಟ್ ಹೊರಗೆ ರವಿವಾರ ದಿಂದಲೂ ಹಲವು ರೀತಿಯ ಗೊಂದಲಗಳಿದ್ದರೂ ಕುಮಾರಸ್ವಾಮಿ ಮತ್ತು ದೇವೇಗೌಡ ಅವರು ತಮ್ಮಷ್ಟಕ್ಕೆ ಆಯುರ್ವೇದ ಪಂಚಕರ್ಮ ಚಿಕಿತ್ಸೆಯನ್ನು ಮುಂದುವರಿಸಿದ್ದಾರೆ.
Advertisement
ಬ್ರಹ್ಮಕಲಶದ ಭೋಜನ ಸವಿದ ದೇವೇಗೌಡ
ದೇವೇಗೌಡ ಅವರಿಗೆ ಮಂಗಳ ವಾರ ಮಧ್ಯಾಹ್ನ ಜಲಂಚಾರು ಶ್ರೀ ಮಹಾಲಿಂಗೇಶ್ವರ – ಮಹಾಗಣಪತಿ ದೇವಸ್ಥಾನದ ಬ್ರಹ್ಮಕಲಶದ ಊಟ ಕಳುಹಿಸಲಾಗಿತ್ತು. ಭರ್ಜರಿ ಭೋಜನ ಸವಿದ ಅವರು ದೇಗುಲದ ಕಥೆಯನ್ನು ಕೇಳಿದ್ದು, ದೇಗುಲಕ್ಕೆ ಭೇಟಿ ನೀಡುವ ಭರವಸೆಯನ್ನೂ ನೀಡಿದ್ದಾರೆ ಎಂದು ತಿಳಿದು ಬಂದಿದೆ.