ಬೆಂಗಳೂರು: ನಮ್ಮಸರ್ಕಾರ ಬಿದ್ದ ಮೇಲೆ ಯಡಿಯೂರಪ್ಪ ಸರ್ಕಾರವನ್ನು ಬೀಳಿಸುತ್ತೇವೆ ಎಂದು ನಾನು ಹೇಳಿಲ್ಲ. ನನಗೆ ನಮ್ಮ ಪಕ್ಷ ಕಟ್ಟುವುದು ಮುಖ್ಯ. 2023ರಲ್ಲಿ ಪಕ್ಷ ಸ್ವತಂತ್ರವಾಗಿ ಅಧಿಕಾರಕ್ಕೆ ಬರಬೇಕು ಎಂದು ಜೆಡಿಎಸ್ ವರಿಷ್ಠ ಎಚ್ ಡಿ ದೇವೇಗೌಡ ಹೇಳಿದರು.
ಜೆಡಿಎಸ್ ಸಭೆಯಲ್ಲಿ ಮಾತನಾಡಿದ ಅವರು, ಯಡಿಯೂರಪ್ಪ ಸರ್ಕಾರದ ಬಗ್ಗೆ ಚರ್ಚೆ ಅನಗತ್ಯ. ಅದರ ಬಗ್ಗೆ ಮಾತನ್ನಾಡಲು ಹಲವರಿದ್ದಾರೆ. ನಮಗೆ ಮುಂದಿನ ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್ ಚುನಾವಣೆ ಮುಖ್ಯ. ಅದರ ಕಡೆ ಹೆಚ್ಚು ಗಮನ ಕೊಡೋಣ ಎಂದರು.
ಗ್ರಾ.ಪಂ ಚುನಾವಣೆಯಲ್ಲಿ ನಾವು ಮೂರನೇ ಸ್ಥಾನ ಪಡೆದಿದ್ದೇವೆ ಎಂದು ಹೇಳುತ್ತಾರೆ. ಆದರೆ ನಾವು ಕಾಂಗ್ರೆಸ್ ಸಮೀಪದಲ್ಲೇ ಇದ್ದೇವೆ. ನಮ್ಮ ನಡುವೆ ಎರಡ್ಮೂರು ಸಾವಿರ ಅಂತರ ಇರಬಹುದು ಅಷ್ಟೇ ಎಂದರು.
ಇದನ್ನೂ ಓದಿ:ಸಿಎಂ ಬದಲಾವಣೆ ಖಚಿತ ಎನ್ನುವ ಸಿದ್ದರಾಮಯ್ಯ ಜ್ಯೋತಿಷಿಯಾಗಿದ್ದು ಯಾವಾಗ? ಸಚಿವ ಬಿ ಎ. ಬಸವರಾಜ
ಎಲ್ಲಾ ಜಿಲ್ಲೆಗಳಲ್ಲೂ ನಮ್ಮ ಕಾರ್ಯಕರ್ತರಿದ್ದಾರೆ. ಈಗಲೂ ಹೋರಾಟ ಮಾಡುವ ಕಾರ್ಯಕರ್ತರಿದ್ದಾರೆ. ನಾವು ಕೆಲವು ಕಡೆ ಮೂರನೇ ಸ್ಥಾನ ಇರಬಹುದು ಆದರೂ ಹಲವೆಡೆ ಮೊದಲನೇ ಸ್ಥಾನದಲ್ಲೇ ಇದ್ದೇವೆ. ಮಂಡ್ಯ, ಮೈಸೂರು, ಹಾಸನ ಸೇರಿದಂತೆ ಹಲವೆಡೆ ಮೊದಲ ಸ್ಥಾನದಲ್ಲಿ ಇದ್ದೇವೆ ಎಂದು ದೇವೇಗೌಡರು ಹೇಳಿದರು.