Advertisement
ಮಾಜಿ ಪ್ರಧಾನಿ ಎಚ್. ಡಿ. ದೇವೇಗೌಡ ಅವರು ಕಾಪು ಮಾರಿಯಮ್ಮ ದೇವಿಗೆ ಕುಟುಂಬದ ಪರವಾಗಿ ವಿಶೇಷ ಪೂಜೆ ಸಲ್ಲಿಸಿದರು. ನಂತರ ದೇವೇಗೌಡ ಅವರನ್ನು ದೇವಸ್ಥಾನದ ಪರವಾಗಿ ಗೌರವಿಸಲಾಯಿತು. ದೇಗುಲದ ನವೀಕರಣದ ನಕಾಶೆಯನ್ನು ವೀಕ್ಷಿಸಿದ ಅವರು ಬ್ರಹ್ಮಕಲಶೋತ್ಸವಕ್ಕೆ ಆಗಮಿಸುವುದಾಗಿ ಭರವಸೆ ನೀಡಿದರು.
ಮಾರಿಗುಡಿ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಕೆ. ವಾಸುದೇವ ಶೆಟ್ಟಿ, ಕಾರ್ಯದರ್ಶಿ ರಮೇಶ್ ಹೆಗ್ಡೆ ಕಲ್ಯ, ಆಡಳಿತಾಧಿಕಾರಿ ಪ್ರವೀಣ್ ನಾಯಕ್, ಕಾರ್ಯ ನಿರ್ವಹಣಾಧಿಕಾರಿ ಪ್ರಶಾಂತ್ ಕುಮಾರ್ ಶೆಟ್ಟಿ, ಜೆಡಿಎಸ್ ಜಿಲ್ಲಾಧ್ಯಕ್ಷ ಯೋಗೀಶ್ ಶೆಟ್ಟಿ ಬಾಲಾಜಿ, ಗಣ್ಯರಾದ ಡಾ. ದೇವಿಪ್ರಸಾದ್ ಶೆಟ್ಟಿ, ನವೀನ್ ಚಂದ್ರ ಸುವರ್ಣ, ಮಾಧವ ಪಾಲನ್, ಶೇಖರ್ ಸಾಲ್ಯಾನ್ , ಹರೀಶ್ ನಾಯಕ್, ಜಯರಾಮ ಆಚಾರ್ಯ, ಮೊದಲಾದವರು ಉಪಸ್ಥಿತರಿದ್ದರು.