Advertisement

ಅಗತ್ಯತೆಗೆ ಅನುಗುಣವಾಗಿ ಎಚ್‌1 ಬಿ ವೀಸಾ ಬಳಕೆ ಆಗುತ್ತಿಲ್ಲ

09:31 PM Jun 16, 2022 | Team Udayavani |

ವಾಷಿಂಗ್ಟನ್‌: ಅಮೆರಿಕ ವಲಸೆ ವ್ಯವಸ್ಥೆಯ ಪ್ರಮುಖ ಭಾಗವಾದ ಎಚ್‌-1 ಬಿ ವೀಸಾದ ಕಾರ್ಯಾಚರಣೆ ಮತ್ತು ಅನುಷ್ಠಾನವನ್ನು ದೇಶದ ಅಗತ್ಯತೆಗೆ ಅನುಗುಣವಾಗಿ ಮಾಡಲಾಗುತ್ತಿಲ್ಲ ಎಂದು ಅಮೆರಿಕದ ರಾಜಕೀಯ ವಿಶ್ಲೇಷಕ ಮಿಯಾ ಲವ್‌ ಹೇಳಿದ್ದಾರೆ.

Advertisement

2005ರಲ್ಲಿ 85 ಸಾವಿರದಷ್ಟು ಎಚ್‌-1ಬಿ ವೀಸಾಗಳು ಲಭ್ಯವಿದ್ದವು. ಈಗಲೂ ಅಂದರೆ 20 ವರ್ಷಗಳು ಕಳೆದ ಬಳಿಕವೂ 85 ಸಾವಿರ ವೀಸಾಗಳು ಲಭ್ಯ ಇವೆ. ಕೌಶಲ್ಯಭರಿತ ವಲಸೆಯನ್ನು ವಿಸ್ತರಿಸಲು ಹಲವಾರು ಆಯ್ಕೆಗಳಿದ್ದರೂ ಅದನ್ನು ನಾವು ಬಳಸುತ್ತಿಲ್ಲ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ದೇಶದಲ್ಲಿ ಇಂದು ಹಣದುಬ್ಬರ ದಾಖಲೆ ಮಟ್ಟದಲ್ಲಿ ಹೆಚ್ಚಲು ಉದ್ಯೋಗಿಗಳ ಕೊರತೆಯೂ ಕಾರಣ ಎಂದೂ ರಿಪಬ್ಲಿಕನ್‌ ಪಕ್ಷದ ಮಾಜಿ ಸಂಸದೆಯೂ ಆಗಿರುವ ಮಿಯಾ ಅಭಿಪ್ರಾಯಪಟ್ಟಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next