Advertisement

ಜಿಮ್ನಾಸ್ಟಿಕ್‌ ವಿಶ್ವ ಕಪ್‌: ದೀಪಾಗೆ 23ನೇ ಸ್ಥಾನ

06:15 AM Nov 25, 2018 | Team Udayavani |

ಹೊಸದಿಲ್ಲಿ: ಜರ್ಮನಿಯಲ್ಲಿ ನಡೆಯುತ್ತಿರುವ ಆರ್ಟಿಸ್ಟಿಕ್‌ ಜಿಮ್ನಾಸ್ಟಿಕ್‌ ವಿಶ್ವಕಪ್‌ನ ಬ್ಯಾಲೆನ್ಸ್‌ ಬೀಮ್‌ ವಿಭಾಗದ ಫೈನಲ್‌ನಲ್ಲಿ ಭಾರತದ ಭರವಸೆಯ ಜಿಮ್ನಾಸ್ಟ್‌ ದೀಪಾ ಕರ್ಮಾಕರ್‌ 23ನೇ ಸ್ಥಾನಕ್ಕೆ ತೃಪ್ತಿಪಡಬೇಕಾಯಿತು.ಶುಕ್ರವಾರ ನಡೆದ ವಾಲ್ಟ್ ಸ್ಪರ್ಧೆಯ ಫೈನಲ್‌ ಪ್ರವೇಶಿಸಿದ್ದ ದೀಪಾ ಬ್ಯಾಲೆನ್ಸ್‌ ಬೀಮ್‌ ವಿಭಾಗದಲ್ಲಿ ಒಟ್ಟು 32 ಸ್ಪರ್ಧಿಗಳಲ್ಲಿ 23ನೇ ಸ್ಥಾನ ಪಡೆದರು.

Advertisement

ಪುರುಷರ ವಿಭಾಗದಲ್ಲಿ ಸ್ಪರ್ಧಿಸಿದ್ದ ರಾಕೇಶ್‌ ಪಾತ್ರ ಪ್ಯಾರಲಲ್‌ ಬಾರ್‌ ಅರ್ಹತಾ ಸುತ್ತಿನಲ್ಲಿ 29 ಸ್ಪರ್ಧಿಗಳ ಪೈಕಿ 16ನೇ ಸ್ಥಾನ ಗಳಿಸಿದರು. ಪುರುಷರ ವಾಲ್ಟ್ ವಿಭಾಗದ ಅರ್ಹತಾ ಸುತ್ತಿನಲ್ಲಿ ಅನೀಶ್‌ ಕುಮಾರ್‌ 27 ಸ್ಪರ್ಧಿಗಳ ಪೈಪೋಟಿಯಲ್ಲಿ 23ನೇ ಸ್ಥಾನ ಸಂಪಾದಿಸಿದರು.

ಈ ಕೂಟ 2020 ಒಲಿಂಪಿಕ್ಸ್‌ಗೆ ಅರ್ಹತಾ ಕೂಟವಾಗಿದ್ದು, ಅಗ್ರ 3 ಸ್ಥಾನ ಪಡೆದ ಸ್ಪರ್ಧಿಗಳು ಒಲಿಂಪಿಕ್ಸ್‌ಗೆ ಅರ್ಹತೆ ಗಿಟ್ಟಿಸಿಕೊಳ್ಳಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next