Advertisement

ಜಿಮ್ನಾಸ್ಟ್‌ ಅರುಣಾ:ವಿಶ್ವ ಕಪ್‌ ಪದಕ ವಿಜೇತ ಮೊದಲ ಭಾರತೀಯ ವನಿತೆ

07:27 PM Feb 24, 2018 | Team Udayavani |

ಮೆಲ್ಬೋರ್ನ್: ಮಹಿಳೆಯರ ವೈಯಕ್ತಿಕ ವಿಭಾಗದಲ್ಲಿ ಕಂಚನ್ನು ಗೆಲ್ಲುವ ಮೂಲಕ ವಿಶ್ವ ಕಪ್‌ ಜಿಮ್ನಾಸ್ಟಿಕ್ಸ್‌ ನಲ್ಲಿ  ಪದಕ ಗೆದ್ದ ಮೊದಲ ಭಾರತೀಯ ವನಿತಾ ಜಿಮ್ನಾಸ್ಟ್‌ ಆಗಿ ಅರುಣಾ ಬುಡ್ಡ ರೆಡ್ಡಿ ಮಹೋನ್ನತ ಐತಿಹಾಸಿಕ ಸಾಧನೆ ಮಾಡಿದ್ದಾರೆ. 

Advertisement

22ರ ಹರೆಯದ ರೆಡ್ಡಿ ಅವರು ಹೈದರಾಬಾದ್‌ನವರು. ಹೀಸೆನ್ಸ್‌ ಅರೇನಾದಲ್ಲಿ ಇವರು 13.649 ಸರಾಸರಿ ಅಂಕಗಳನ್ನು ಸಾಧಿಸುವ ಮೂಲಕ ಕಂಚಿನ ಪದಕ ಗೆದ್ದರು. 

ಸ್ಲೊವಾನಿಯಾದ  ತಾಸಾ ಕೈಸೆಲ್ಫ್ ಅವರು 13.800 ಅಂಕ ಗಳಿಸಿ ಚಿನ್ನದ ಪದಕ ಗೆದ್ದರು. ಆಸ್ಟ್ರೇಲಿಯದ ಎಮಿಲಿ ವೈಟ್‌ಹೆಡ್‌ ಅವರು 13.699 ಅಂಕ ಗಳಿಸಿ ಬೆಳ್ಳಿ ಪದಕ ಗೆದ್ದರು. 

ಅಂತಿಮ ಸುತ್ತಿಗೆ ತೇರ್ಗಡೆಯಾಗಿ ಬಂದಿದ್ದ ಇನ್ನೋರ್ವ ಭಾರತೀಯ ಮಹಿಳೆ, ಪ್ರಣತೀ ನಾಯಕ್‌ ಅವರು 13.416 ಅಂಕ ಗಳಿಸಿ ಆರನೇ ಸ್ಥಾನಿಯಾದರು. 

ವಿಶ್ವ ಕಪ್‌ ಜಿಮ್ನಾಸ್ಟ್‌ನಲ್ಲಿ ಪದಕ ಗೆದ್ದ ಮೊತ್ತ ಮೊದಲ ಭಾರತೀಯ ಮಹಿಳೆಯಾಗಿ ಅರುಣಾ ರೆಡ್ಡಿ ಐತಿಹಾಸಿಕ ಸಾಧನೆ ಮಾಡಿರುವುದು ನಮಗೆಲ್ಲ ಹೆಮ್ಮೆಯ ಸಂಗತಿ ಎಂದು ಭಾರತದ ಜಿಮ್ನಾಸ್ಟಿಕ್ಸ್‌ ಒಕ್ಕೂಟದ ಕಾರ್ಯದರ್ಶಿಯಾಗಿರುವ ಶಾಂತಿ ಕುಮಾರ್‌ ಸಿಂಗ್‌ ಹೇಳಿದ್ದಾರೆ. 

Advertisement

2016ರ ರಯೋ ಒಲಿಂಪಿಕ್ಸ್‌ನಲ್ಲಿ ವನಿತೆಯರ ವೋಲ್ಟ್ ವಿಭಾಗದಲ್ಲಿ ನಾಲ್ಕನೇ ಸ್ಥಾನಿಯಾಗಿದ್ದ ದೀಪಾ ಕರ್ಮಾಕರ್‌ ಅವರು ಏಶ್ಯನ್‌ ಚಾಂಪ್ಯನ್‌ಶಿಪ್‌ನಲ್ಲಿ ಮತ್ತು  2014ರ ಕಾಮನ್ವೆಲ್ತ್‌ ಗೇಮ್ಸ್‌ನಲ್ಲಿ ಕಂಚಿನ ಪದಕ ಗೆದ್ದಿದರು; ಆದರೆ ವಿಶ್ವ ಕಪ್‌ ಮಟ್ಟದಲ್ಲಿ ಯಾವುದೇ ಸಾಧನೆ ಮಾಡಿರಲಿಲ್ಲ. 

Advertisement

Udayavani is now on Telegram. Click here to join our channel and stay updated with the latest news.

Next