Advertisement

ಜಿಮ್‌ ಜಿಮ್‌ ಜಿಮ್‌

11:49 AM May 25, 2019 | mahesh |

ಆರೋಗ್ಯ ಕಾಪಾಡಲು ವ್ಯಾಯಾಮ, ಕಸರತ್ತು, ಯೋಗ, ಧ್ಯಾನ, ನೃತ್ಯ, ಸಮರ ಕಲೆಗಳು- ಇತ್ಯಾದಿಯನ್ನು ಕಲಿಯುತ್ತಾರೆ. ಅಭ್ಯಾಸ ಮಾಡುತ್ತಾರೆ. ಅದಕ್ಕೆಂದು ತರಗತಿಗೆ ತೊಡುವ ಸಮವಸ್ತ್ರ ಅಥವಾ ಉಡುಪೇ ಫ್ಯಾಷನ್‌ ಆಗಿಬಿಟ್ಟರೆ? ಈಗ ಜಿಮ್‌ಗೆ ತೊಡುವ ಉಡುಗೆ ಟ್ರೆಂಡ್‌ ಆಗುತ್ತಿದೆ. ಇದಕ್ಕೆ ಕಾರಣ, ಜಿಮ್‌ ಉಡುಗೆಯಲ್ಲಿ ಕಾಣಿಸಿಕೊಳ್ಳುತ್ತಿರುವ ಚಿತ್ರನಟಿಯರು.

Advertisement

ಹತ್ತಿ, ಸ್ಪ್ಯಾಂಡೆಕ್ಸ್‌ , ಖಾದಿ ಇತ್ಯಾದಿ ಬಟ್ಟೆಗಳಿಂದ ತಯಾರಿಸಲಾದ ಹಗುರವಾದ ಜಿಮ್‌ ಉಡುಗೆ ತಾರೆಯರ ಅಚ್ಚುಮೆಚ್ಚಿನ ಆಯ್ಕೆ. ಈ ಉಡುಗೆಯಲ್ಲಿ ಮೈಕಟ್ಟು ಎದ್ದು ಕಾಣುವುದರಿಂದ, ತಾವೆಷ್ಟು ಗಟ್ಟಿಮುಟ್ಟಾಗಿದ್ದೇವೆ ಎಂದು “ಶೋ ಆಫ್’ ಮಾಡಿಕೊಳ್ಳಲೂಬಹುದು!

ಜಿಮ್‌ವೇರ್‌ ಏಕಿಷ್ಟ?
ಹಾಲಿವುಡ್‌ ನಟಿಯರಿಂದ ಪ್ರೇರಣೆ ಪಡೆದ ಬಾಲಿವುಡ್‌ ನಟಿಯರು ಜಿಮ್‌ ನಿಂದ ಹೊರ ಬಂದಾಗಲೂ ಅದೇ ಉಡುಪಿನಲ್ಲಿ ಕಾಣಿಸಿಕೊಳ್ಳಲು ಶುರು ಮಾಡಿದರು. ಬೆವರು ಹೀರುವ, ಮೈಗಂಟದಿರುವ, ವ್ಯಾಯಾಮ ಮಾಡಲು ಆರಾಮದಾಯಕ ಆಗಿರುವ, ಸ್ಟ್ರೆಚ್‌ ಆಗುವ ಬಟ್ಟೆಯಿಂದ ಈ ಉಡುಗೆಯನ್ನು ತಯಾರಿಸಲಾಗುತ್ತದೆ. ಹತ್ತಿ, ಸ್ಪ್ಯಾಂಡೆಕ್ಸ್‌ , ಖಾದಿ ಇತ್ಯಾದಿ ಬಟ್ಟೆಗಳಿಂದ ತಯಾರಿಸಲಾದ ಜಿಮ್‌ ಉಡುಗೆ ತಾರೆಯರ ಅಚ್ಚುಮೆಚ್ಚಿನ ಆಯ್ಕೆ.

ಸ್ಟೈಲ್‌ ಮತ್ತು ಕಂಫ‌ರ್ಟ್‌
ಅಂತಾರಾಷ್ಟ್ರೀಯ ಬ್ರಾಂಡ್‌ಗಳ ಜಿಮ್‌ವೇರ್‌ನಲ್ಲಿ ನಟಿಯರು ಕಾಣಿಸಿಕೊಳ್ಳುವುದರಿಂದ ಬ್ರಾಂಡ್‌ಗಳ ಪ್ರಚಾರವೂ ಆಗುತ್ತದೆ. ಅಂತೆಯೇ ತಮ್ಮ ರಾಯಭಾರಿಯಾಗಲು, ಬ್ರಾಂಡ್‌ಗಳು, ನಟಿಯರನ್ನು ಕೇಳಿಕೊಳ್ಳುತ್ತವೆ. ಹೀಗಾಗಿ ಇಬ್ಬರಿಗೂ ಲಾಭವಿದೆ. ಕೇವಲ ಸ್ಟೈಲ್‌ಗಾಗಿ ಅಲ್ಲದೆ, ಆರಾಮಕ್ಕಾಗಿಯೂ ಇದು ಉಪಯೋಗ ಆಗುವ ಕಾರಣ, ಜಿಮ್‌ವೇರ್‌ ಅನ್ನು ಮಹಿಳೆಯರು ವಾಕಿಂಗ್‌, ಜಾಗಿಂಗ್‌ ಮತ್ತು ಸಂತೆ, ಶಾಪಿಂಗ್‌, ವಿಮಾನ ನಿಲ್ದಾಣ ಹಾಗೂ ಆಫೀಸ್‌ಗೂ ತೊಟ್ಟು ಬರುತ್ತಾರೆ!

ನಟಿಯರ ಮೆಚ್ಚಿನ ದಿರಿಸು
ಶಾರ್ಟ್ಸ್, ಪ್ಯಾಂಟ್‌, ಜಾಕೆಟ್‌, ಟಿ-ಶರ್ಟ್‌, ಟ್ಯಾಂಕ್‌ಟಾಪ್‌, ಹುಡ್ಡೀ, ನ್ಪೋರ್ಟ್ಸ್ ಬ್ರಾ, ಸಾಕ್ಸ್‌ ಮತ್ತು ಶೂ. ಇವಿಷ್ಟನ್ನು ಜಿವ್‌ವೇರ್‌ ಎಂದು ಪರಿಗಣಿಸಲಾಗುತ್ತದೆ. ಪ್ರತಿಯೊಂದೂ ಒಳ್ಳೆ ಬ್ರಾಂಡ್‌ನ‌ದ್ದಾಗಿರುತ್ತದೆ. ಇಂಥ ಉಡುಗೆಯಲ್ಲಿ ಮೈಕಟ್ಟು ಎದ್ದು ಕಾಣುವುದರಿಂದ, ತಾವೆಷ್ಟು ಗಟ್ಟಿಮುಟ್ಟಾಗಿದ್ದೇವೆ ಎಂದು “ಶೋ ಆಫ್’ ಮಾಡಿಕೊಳ್ಳಲೂಬಹುದು! ಹಿಂದಿ ಚಿತ್ರನಟಿಯರಾದ ಸೋನಾಕ್ಷಿ ಸಿಂಹ, ಸಾರಾ ಅಲಿ ಖಾನ್‌, ಪರಿಣಿತಿ ಚೋಪ್ರಾ, ಮಲೈಕಾ ಅರೋರಾ ಖಾನ್‌, ಕರೀನಾ ಕಪೂರ್‌ ಖಾನ್‌, ಜಾಹ್ನವಿ ಕಪೂರ್‌, ಕತ್ರೀನಾ ಕೈಫ್ ಹಾಗೂ ನಟಿ ಶಾಹಿದ್‌ ಕಪೂರ್‌ ಪತ್ನಿ ಮೀರಾ ರಜಪೂತ್‌ ಕಪೂರ್‌ ಎಲ್ಲರೂ ಆಗಾಗ ಛಾಯಾಚಿತ್ರಕಾರರ ಕಣ್ಣಿಗೆ ಜಿಮ್‌ವೇರ್‌ನಲ್ಲಿ ಕಾಣಿಸಿಕೊಳ್ಳುತ್ತಿರುವ ಕಾರಣ, ಅವರ ಚಿತ್ರಗಳೆಲ್ಲ ಪತ್ರಿಕೆಗಳಲ್ಲಿ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.

Advertisement

ಅಭಿಮಾನಿಗಳು ತಮ್ಮ ನೆಚ್ಚಿನ ನಟಿ ತೊಟ್ಟ ಜಿಮ್‌ವೇರ್‌ ಅನ್ನೇ ಹುಟುಕಾಟ ನಡೆಸುವ ಪ್ರವೃತ್ತಿಯೂ ಬೆಳೆಯುತ್ತಿದೆ. ಹತ್ತಿರದ ಅಂಗಡಿಗಳಲ್ಲಿ ಸಿಗದಿದ್ದರೂ ಆನ್‌ಲೈನ್‌ ಮೂಲಕ ಅವುಗಳನ್ನು ತರಿಸಿಕೊಳ್ಳುತ್ತಿದ್ದಾರೆ. ದರ್ಜಿಗಳ ಬಳಿ ತಮಗೆ ಬೇಕಾದ ವಿನ್ಯಾಸದಲ್ಲಿ ಹೊಲಿಸಿ, ಆಲೆಶನ್‌ ಮಾಡಿಸಿಕೊಳ್ಳುತ್ತಿದ್ದಾರೆ. ಆದ್ದರಿಂದ, ಈ ಜಿಮ್‌ವೇರ್‌ ಫ್ಯಾಷನ್‌ ಟ್ರೆಂಡ್‌ ಬಹುಕಾಲ ಸುದ್ದಿ ಮಾಡಲಿದೆ.

ಅದಿತಿಮಾನಸ ಟಿ.ಎಸ್‌.

Advertisement

Udayavani is now on Telegram. Click here to join our channel and stay updated with the latest news.

Next