ಗ್ವಾದರ್ : ಪಾಕಿಸ್ತಾನದ ಬಂದರು ನಗರವಾದ ಗ್ವಾದರ್ ನಲ್ಲಿ ಮೂಲಸೌಕರ್ಯ ಯೋಜನೆಗಳಲ್ಲಿ ಕೆಲಸ ಮಾಡುತ್ತಿರುವ ಚೀನಾದ ಇಂಜಿನಿಯರ್ ಗಳ ಬೆಂಗಾವಲು ಪಡೆ ಮೇಲೆ ಇಂದು ಇಬ್ಬರು ಬಲೂಚ್ ಉಗ್ರರು ದಾಳಿ ಮಾಡಿದ್ದಾರೆ.
ದಾಳಿ ಮಾಡಿದ ಇಬ್ಬರು ಉಗ್ರರನ್ನು ಹೊಡೆದುರುಳಿಸಲಾಗಿದ್ದು, ಚೀನಾದ ಯಾವುದೇ ಎಂಜಿನಿಯರ್ ಅಥವಾ ಇತರ ಪಾಕಿಸ್ತಾನಿ ನಾಗರಿಕರು ಗಾಯಗೊಂಡಿಲ್ಲ ಎಂದು ವರದಿಗಳು ತಿಳಿಸಿವೆ.
ಚೀನಾ-ಪಾಕಿಸ್ತಾನ್ ಆರ್ಥಿಕ ಕಾರಿಡಾರ್ ಅಥವಾ ಸಿಪಿಇಸಿ ಎಂದು ಕರೆಯಲ್ಪಡುವ 60 ಶತಕೋಟಿ ಡಾಲರ್ ಪ್ರಾಜೆಕ್ಟ್ ನ ಭಾಗವಾಗಿ ಚೀನಾದ ಕ್ಸಿನ್‌ಜಿಯಾಂಗ್ ಪ್ರಾಂತ್ಯಕ್ಕೆ ಲಿಂಕ್ ಮಾಡಲಾದ ಬಲೂಚಿಸ್ತಾನ್ ಪ್ರಾಂತ್ಯದ ಬಂದರಿನ ಗ್ವಾದರ್ ನಲ್ಲಿ ಹೆಚ್ಚಿನ ಸಂಖ್ಯೆಯ ಚೀನಿಯರು ಪ್ರಸ್ತುತ ಕೆಲಸ ಮಾಡುತ್ತಿದ್ದಾರೆ. ಇಲ್ಲಿ ದಾಳಿ ಮಾಡಲಾಗಿದೆ.
ಇದನ್ನೂ ಓದಿ:ಡಿಕೆಶಿ ತಪ್ಪೇ ಮಾಡಿಲ್ಲ ಅಂದ್ರೆ ಅಜ್ಜಯ್ಯನ ಮಠಕ್ಕೆ ಹೋಗಿ ಪ್ರಮಾಣ ಮಾಡಲಿ: CT Ravi
ದಿ ಬಲೂಚಿಸ್ತಾನ್ ಲಿಬರೇಶನ್ ಆರ್ಮಿಯು ಈ ದಾಳಿಯ ಹೊಣೆ ಹೊತ್ತಿಕೊಂಡಿದೆ. ಈ ಪ್ರದೇಶದಲ್ಲಿ ಚೀನಾದ ಹೂಡಿಕೆಗಳನ್ನು ವಿರೋಧಿಸುತ್ತೇವೆ, ಯಾಕೆಂದರೆ ಇದರಿಂದ ಸ್ಥಳೀಯ ಜನರಿಗೆ ಪ್ರಯೋಜನವನ್ನು ಇಲ್ಲ ಎಂದು ಅದು ಹೇಳಿದೆ. ಈ ಹಿಂದೆಯೂ CPEC-ಸಂಯೋಜಿತ ಯೋಜನೆಗಳ ಮೇಲೆ ಬಲೂಚಿಸ್ತಾನ್ ಲಿಬರೇಶನ್ ಆರ್ಮಿ ದಾಳಿ ಮಾಡಿತ್ತು.