ಶಿವು ಸರಳೇಬೆಟ್ಟು ಅವರು ಕಥೆ, ಚಿತ್ರಕಥೆ ಬರೆದು ನಿರ್ದೇಶಿಸಿದ ಜೀವನ ಯಜ್ಞ ಚಿತ್ರ ನವೆಂಬರ್ 2 ರಂದು ರಾಜ್ಯಾಧ್ಯಂತ ತೆರೆಗೆ ಬರಲಿದೆ.
ಚಿತ್ರದಲ್ಲಿ ಬೆಳ್ಳಿತೆರೆ ಮತ್ತು ಕಿರುತೆರೆಯ 40ಕ್ಕೂ ಹೆಚ್ಚು ಕಲಾವಿದರು ಬಣ್ಣ ಹಚ್ಚಿದ್ದಾರೆ. ಆಶ್ಲೇ ಮೈಕಲ್ ಸಂಗೀತ ಸಂಯೋಜಿಸಿರುವ ಜೀವನ ಯಜ್ಞ ಚಿತ್ರದಲಲಿ 9 ವಿಭಿನ್ನ ಹಾಡುಗಳಿದ್ದು ಈಗಾಗಲೇ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.
ವಿಜಯ್ ಪ್ರಕಾಶ್ ಹಾಡಿರುವ ಶಂಭೋ ಶಂಕರಾ, ಸದ್ದೇ ಇಲ್ಲದೇ, ಬಹಳ ದಿನಗಳ ನಂತರ, ವಿನಾಕಾರಣ ಹಾಡುಗಳು ಯೂಟ್ಯೂಬ್ ನಲ್ಲಿ ಸದ್ದು ಮಾಡತೊಡಗಿದೆ.
ಶೈನ್ ಶೆಟ್ಟಿ ,ಮನೋಜ್ ಪುತ್ತೂರು,ಆದ್ಯ ಆರಾಧನ್, ಅನ್ವಿತಾ ಸಾಗರ್ ,ಸಂದೀಪ್ ಶೆಟ್ಟಿ ರಾಯೀ ,ಪ್ರವೀಣ್ ಮರ್ಕಮೆ ,ವಸಂತ್ ಮುನಿಯಾಲ್ ಮುಖ್ಯ ಭೂಮಿಕೆಯಲ್ಲಿ, ಹಿರಿಯ ನಟರಾದ ರಮೇಶ್ ಭಟ್ ,ಬಿ ಜಯಶ್ರೀ ,ಎಂ. ಕೆ. ಮಠ ಹಾಗೂ ಕರಾವಳಿಯ ಪ್ರಬುದ್ಧ ಕಲಾವಿದರ ದಂಡು ಚಿತ್ರದಲ್ಲಿದೆ.
ಮೇಕಿಂಗ್ ಮತ್ತು ಹಾಡುಗಳ ಮೂಲಕ ಈಗಾಗಲೇ ಗಮನ ಸೆಳೆದಿರುವ ಕರಾವಳಿ ಪ್ರತಿಭೆಗಳ ವಿಭಿನ್ನ ಚಿತ್ರ ಜೀವನದ ಕುರಿತಾಗಿ ಸಂದೇಶ ತರುವ ಒಂದೋಳ್ಳೆ ಧೂಮವನ್ನು ಹೊರ ಸೂಸಲಿದೆ.