ಕೊಳ್ಳೇಗಾಲ: ಇಲ್ಲಿನ ಶೈಕ್ಷಣಿಕ ಪರಿಸರವನ್ನು ನೋಡಿದರೆ ನಗರ, ಪಟ್ಟಣಗಳಲ್ಲಿ ಅತ್ಯಾಧುನಿಕಸೌಲಭ್ಯಗಳನ್ನು ಹೊಂದಿರುವ ಪ್ರತಿಷ್ಟಿತ ಕಾನ್ವೆಂಟ್‌ಗೆ ಬಂದಂತೆ ಭಾಸವಾಗುತ್ತದೆ.
ಇದು ಗಡಿಭಾಗದ ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ತಾಲೂಕಿನಿಂದ 16 ಕಿ.ಮೀ.ದೂರದಲ್ಲಿರುವ ದೊಡ್ಡಿಂದುವಾಡಿ ಗ್ರಾಮದಲ್ಲಿರುವ ಸರ್ಕಾರ ಪ್ರೌಢಶಾಲೆಯಾಗಿದೆ. ಕಾನ್ವೆಂಟ್‌ಗಳನ್ನು ಮೀರಿಸುವಂತೆ ಅತ್ಯಾಧುನಿಕ ಸೌಲಭ್ಯಗಳನ್ನು ಕಲ್ಪಿಸಲಾಗಿದೆ. ಸಾಕಷ್ಟು ಗಿಡಮರಗಳು, ಆಯುರ್ವೇದ ಸಸಿಗಳು, ಹೂವಿನ ಸಸಿಗಳು ಇರುವುದರಿಂದ ಈ ಶಾಲೆಯು ಕಾಡಿನ ಮಧ್ಯದಲ್ಲಿರುವಂತೆ ಕಾಣುತ್ತದೆ. ಅಚ್ಚ ಹಸಿರಿನ ಚಪ್ಪರ ಹೊದಿಸಿದಂತಿರುವ ಈ ಶಾಲೆಯನ್ನು ನೋಡುವುದೇ ಒಂದು ಆನಂದ.
ಸುಸಜ್ಜತ ಕಟ್ಟಡ: ಸುಸಜ್ಜಿತ ಕಟ್ಟಡ, ಕಂಪ್ಯೂಟರ್ ವಿಭಾಗ, ಪ್ರಯೋಗಾಲಯ, ಗ್ರಂಥಾಲಯ, ಮನತಣಿಸುವ ಆಕರ್ಷ ಉದ್ಯಾನ, ಬಣ್ಣಗಳ ಚಿತ್ತಾರದಿಂದ ಕೂಡಿರುವ ಗೋಡೆ, ಕಾಂಪೌಂಡ್, ಸ್ವಾಗತ ಕೋರುವಂತೆ ರಸ್ತೆಬದಿಯಲ್ಲಿ ಮರಗಳನ್ನು ಬೆಳೆಸಿರುವುದು, ಯೋಗ ತರಬೇತಿ ಮತ್ತಿತರ ವ್ಯವಸ್ಥೆಗಳು ಈ ಸರ್ಕಾರಿ ಶಾಲೆಯಲ್ಲಿವೆ.ಹನೂರು ಕ್ಷೇತ್ರದ ಶಾಸಕರಾಗಿರುವ ಎನ್. ನರೇಂದ್ರ ಅವರ ತವರು ಗ್ರಾಮವಾದ ದೊಡ್ಡಿಂದು ವಾಡಿಯಲ್ಲಿ ಅವರ ತಂದೆ ಜಿ.ರಾಜೂಗೌಡ ಅವರು ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದಾಗ ಜಿ.ವಿ.ಗೌಡ ಸ್ಮಾರಕ ಶಿಕ್ಷಣ ಸಂಸ್ಥೆಯನ್ನು ತೆರೆದು ಸುಸಜ್ಜಿತ ಕಟ್ಟಡ ನಿರ್ಮಿಸಿದ್ದರು. 2001ರಲ್ಲಿ ಪ್ರಾರಂಭವಾದ ಈ ಸರ್ಕಾರಿ ಪ್ರೌಢಶಾಲೆಗೆ ಹಾಲಿ ಶಾಸಕ ನರೇಂದ್ರ ಅವರು ಎಲ್ಲಾ ರೀತಿಯ ಸೌಲಭ್ಯ ಕಲ್ಪಿಸಿಕೊಟ್ಟಿದ್ದಾರೆ.
ಈ ಶಾಲೆಯಲ್ಲಿ 5ರಿಂದ 10ನೇ ತರಗತಿವರೆಗೆ ಕಳೆದ ವರ್ಷ 168 ವಿದ್ಯಾರ್ಥಿಗಳಿದ್ದರು. ಈ ವರ್ಷ 179 ವಿದ್ಯಾ ರ್ಥಿಗಳು ದಾಖಲಾಗಿದ್ದಾರೆ. ಕೋವಿಡ್ ವೈರಸ್‌ಭೀತಿ ಹಿನ್ನೆಲೆಯಲ್ಲಿ ಮಕ್ಕಳು ಕಾನ್ವೆಂಟ್ ತೊರೆದು ಈ ಸರ್ಕಾರಿ ಶಾಲೆಗೆ ದಾಖಲಾಗುತ್ತಿದ್ದಾರೆ. ವಿದ್ಯಾರ್ಥಿಗಳ ಸಂಖ್ಯೆ ಮತ್ತಷ್ಟು ಏರಿಕೆಯಾಗುವ ನಿರೀಕ್ಷೆ ಇದೆ. ದೂರದೂರಿನ ಖಾಸಗಿ ಶಾಲೆಗಿಂತ ಸರ್ಕಾರಿ ಶಾಲೆಯೇ ಮೇಲು ಎಂದು ವಿದ್ಯಾರ್ಥಿಗಳು ಸರ್ಕಾರಿ ಶಾಲೆಯತ್ತ ಮುಖಮಾಡಿರುವುದು ವಿಶೇಷವಾಗಿದೆ.
ನುರಿತ ಶಿಕ್ಷಕರು: ಶಾಲೆಯಲ್ಲಿ8 ಮಂದಿ ಸಹ ಶಿಕ್ಷಕರು ಇದ್ದು, ಇಲ್ಲಿ ಎಲ್ಲಾ ವಿಭಾಗದ ಶಿಕ್ಷ ಕರು ಇದ್ದು, ಮಕ್ಕಳಿಗೆ ಯಾವುದೇ ವಿಷಯಗಳ ಪಠ್ಯದ ಕೊರತೆ ಪಾಠ ಪ್ರವಚನ, ಯೋಗ ಮತ್ತಿತರ ಪಠ್ಯೇತರ ಚಟುವಟಿಕೆಗಳನ್ನು ಕಲಿಸಲಾಗುತ್ತಿದೆ.
ಅತ್ಯುತ್ತಮ ಶೈಕ್ಷಣಿಕ ವಾತಾವರಣ: ದೊಡ್ಡಿಂದು ವಾಡಿ ಗ್ರಾಮದ ಸರ್ಕಾರಿ ಜಿ.ವಿ.ಗೌಡ ಪ್ರೌಢ ಶಾಲೆಯಲ್ಲಿ ಅತ್ಯುತ್ತಮ ಶೈಕ್ಷಣಿಕ ವಾತಾವರಣ ಕಲ್ಪಿಸಲಾಗಿದೆ. ಮಕ್ಕಳಿಗೆ ಭೌತಿಕವಾಗಿ ಬೆಳೆಯಲು ಶಾಲೆ ಸಹಕಾರಿಯಾಗಿದೆ ಎಂದು ಶಾಲೆ ಮುಖ್ಯ ಶಿಕ್ಷಕ ಚಿಕ್ಕರಾಜು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಶೇ.100 ರಷ್ಟು ಫಲಿತಾಂಶ: ಮಾಜಿ ಸಚಿವ ದಿ.ರಾಜುಗೌಡ ಅವರು ತಮ್ಮ ಅಣ್ಣ ಜಿ.ವಿ.ಗೌಡ ಅವರ ಹೆಸರಿನಲ್ಲಿ ಶಾಲೆಯನ್ನು ಆರಂಭಿಸಿ ಸರ್ಕಾರಕ್ಕೆ ಹಸ್ತಾಂ ತರಿಸಿದರು. ಇದೀಗ ಅವರ ಪುತ್ರ ಹನೂರು ಶಾಸಕ ಆರ್.ನರೇಂದ್ರ ಅವರು ಶಾಲೆ ಬಗ್ಗೆ ವಿಶೇಷ ಕಾಳಜಿವಹಿಸುತ್ತಿರುವುದರಿಂದ ಉತ್ತಮ ಶಾಲೆಯಾಗಿ ರೂಪುಗೊಂಡಿದೆ. ಶಿಕ್ಷಕರು ಮತ್ತು ಮುಖ್ಯ ಶಿಕ್ಷಕರ ಪರಿಶ್ರ ಮವದಿಂದ ಶಾಲೆಯು ಅಂದ ಚೆಂದವಾಗಿದೆ. ಇಲ್ಲಿನ ವಿದ್ಯಾರ್ಥಿಗಳಿಗೆ ಎಲ್ಲಾ ಭಾಷೆಗಳನ್ನು ಕಲಿಸಲಾಗುತ್ತಿದೆ. ಶೇ.100 ರಷ್ಟು ಫಲಿತಾಂಶ ಬಂದಿರುವುದರಿಂದ ಶಾಲೆಗೆ ಮತ್ತಷ್ಟು ಕೀರ್ತಿ ಲಭಿಸಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಚಂದ್ರಪಾಟೀಲ್ ತಿಳಿಸಿದ್ದಾರೆ.
ಶಾಲೆ ಸೌಂದರ್ಯ ಹೆಚ್ಚಿಸಿದ ಗಿಡಮರಗಳು : ಶಾಲೆಯ ಸುತ್ತಮುತ್ತ ಸಾಕಷ್ಟು ಗಿಡಮರಗಳನ್ನು ಬೆಳೆಸಿರುವುದರಿಂದ ಶಾಲೆಯುಕಾಡಿನ ಮಧ್ಯೆದಲ್ಲಿ ಇದೆ ಎಂಬಂತೆ ಭಾಸವಾಗುತ್ತದೆ. ಶಾಲೆ ಆವರಣದಲ್ಲಿ ಮಾವು, ಸಪೋಟ, ನಿಂಬೇಹಣ್ಣು, ನೆಲ್ಲಿಕಾಯಿ, ತೆಂಗಿನಮರ, ಹೊಂಗೆಮರ, ಗಸಗಸೆ ಮರ, ತುಳಸಿ ಸೇರಿದಂತೆ ಆಯುರ್ವೇದ ಸಸಿಗಳು ಹಾಗೂ ಎಲ್ಲಾ ರೀತಿಯ ಹೂವಿಗಳ ಗಿಡಗಳನ್ನು ಬೆಳೆಸಲಾಗಿದೆ. ಈ ಕೈತೋಟವನ್ನುನೋಡುವುದೇ ಒಂದು ಆನಂದವಾಗಿದ್ದು, ಇದು ಶಾಲೆಯ ಸೌಂದರ್ಯವನ್ನು ಮತ್ತಷ್ಟು ಹೆಚ್ಚಿಸಿದೆ.
ಶಾಲೆಗೆ ಸೇರಿಬೇಕೆಂದರೆ ಸಸಿ ನೆಡುವುದು ಕಡ್ಡಾಯ : ಈ ಸರ್ಕಾರಿ ಶಾಲೆಗೆ ದಾಖಲಾಗಬೇಕಾದರೆ ಸಸಿ ನೆಡುವುದು ಕಡ್ಡಾಯವಾಗಿದೆ. ಪ್ರತಿವರ್ಷ ಹೊಸದಾಗಿ ದಾಖಲಾಗುವ ವಿದ್ಯಾರ್ಥಿಗ ಳಿಂದ ಹೊಸ ಹೊಸ ಮಾದರಿಯ ಸಸಿಗ ಳನ್ನು ನೆಡುವುದು ಈ ಶಾಲೆಯ ಸಂಪ್ರದಾಯವಾಗಿದೆ. ಸರ್ಕಾರಿ ಶಾಲೆ ಆವರಣದಲ್ಲಿ ವಿದ್ಯಾರ್ಥಿಗ ಳೇ ಆಕರ್ಷಕಕೈತೋಟವನ್ನು ನಿರ್ಮಿಸಿದ್ದಾರೆ. ಅನೇಕ ರೀತಿಯ ಹೂವುಗಳ ಗಿಡ ಮತ್ತು ಇನ್ನಿತರ ತರಕಾರಿ ಗಿಡ ಗ ಳನ್ನು ಬೆಳೆಸಿದ್ದಾರೆ. ಕೈತೋಟದಲ್ಲಿ ಬೆಳೆದ ತರಕಾರಿಗಳನ್ನು ಬಿಸಿಯೂಟಕ್ಕೆ ಬಳಸಲಾಗುತ್ತಿದೆ. ಮಕ್ಕಳೇ ಬೆಳೆದ ತರಕಾರಿಯನ್ನು ಮಕ್ಕಳಿಗೆ ನೀಡುವ ದಾಸೋಹ ಇಲ್ಲಿ ಇ¨.
–ಡಿ.ನಟರಾಜು