Advertisement

Guwahati ಬ್ಯಾಡ್ಮಿಂಟನ್‌: ಅಶ್ವಿ‌ನಿ-ತನಿಷಾ ಜೋಡಿಗೆ ಪ್ರಶಸ್ತಿ

11:15 PM Dec 10, 2023 | Team Udayavani |

ಗುವಾಹಟಿ: ಅಶ್ವಿ‌ನಿ ಪೊನ್ನಪ್ಪ ತನಿಷಾ ಕ್ರಾಸ್ಟೊ “ಗುವಾಹಟಿ ಮಾಸ್ಟರ್ ಸೂಪರ್‌ 100′ ಬ್ಯಾಡ್ಮಿಂಟನ್‌ ಪಂದ್ಯಾವಳಿಯಲ್ಲಿ ವನಿತಾ ಡಬಲ್ಸ್‌ ಪ್ರಶಸ್ತಿ ಜಯಿಸಿದ್ದಾರೆ. ರವಿವಾರ ಸಾಗಿದ 40 ನಿಮಿಷಗಳ ಫೈನಲ್‌ನಲ್ಲಿ ಭಾರತದ ಜೋಡಿ ಚೈನೀಸ್‌ ತೈಪೆಯ ಸುಂಗ್‌ ಶುವೊ ಯುನ್‌ ಯು ಚೀನ್‌ ಹುಯಿ ವಿರುದ್ಧ 21 13, 21 19 ಅಂತರದ ಗೆಲುವು ಸಾಧಿಸಿತು. ಇದಕ್ಕೂ ಮೊದಲು ನಡೆದ “ಸಯ್ಯದ್‌ ಮೋದಿ ಇಂಟರ್‌ನ್ಯಾಶನಲ್‌ ಸೂಪರ್‌ 300′ ಪಂದ್ಯಾವಳಿಯಲ್ಲಿ ಅಶ್ವಿ‌ನಿ ತನಿಷ್ಕಾ ರನ್ನರ್ ಅಪ್‌ ಆಗಿದ್ದರು. ಈ ವರ್ಷ ಅಶ್ವಿ‌ನಿ ತನಿಷಾ ಜೋಡಿಗೆ ಒಲಿದ 3ನೇ ಪ್ರಶಸ್ತಿ. ಇದಕ್ಕೂ ಮುನ್ನ ಅಬುಧಾಬಿ ಮಾಸ್ಟರ್ ಸೂಪರ್‌ 100 ಮತ್ತು ನೇಟ್ಸ್‌ ಇಂಟರ್‌ನ್ಯಾಶನಲ್‌ ಚಾಲೆಂಜ್‌ ಟೂರ್ನಿಯಲ್ಲಿ ಚಾಂಪಿಯನ್‌ ಆಗಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next