ಸಿಂದಗಿ : ರೈತರು ನನ್ನ ಜೀವಾಳ, ಅವರ ಬದುಕು ನಮ್ಮ ಬದುಕಾಗಿದೆ, ಅವರ ಕಷ್ಟವೇ ನಮ್ಮ ಕಷ್ಟವಾಗಿದೆ ಶಿಘ್ರದಲ್ಲಿ ಗುತ್ತಿಬಸವಣ್ಣ ಏತ ನೀರಾವರಿ ಯೋಜನೆಯ ಕಾಲುವೆಯ ನೀರು ಆ. 15ರೊಳಗಾಗಿ ರೈತರ ಜಮೀನುಗಳಿಗೆ ಹರಿಸಲಾಗುವುದು ಎಂದು ಶಾಸಕ ರಮೇಶ ಭೂಸನೂರ ಹೇಳಿದರು.
ರವಿವಾರ ಕೆಂಬಾವಿಯಲ್ಲಿನ ಗುತ್ತಿಬಸವಣ್ಣ ಏತ ನೀರಾವರಿ ಯೋಜನೆಯ ಪಂಪಹೌಸ್‌ಗೆ ಭೇಟಿ ನೀಡಿ ಅಲ್ಲಿ ನಡೆಯುತ್ತಿರುವ ಮೋಟರ್ ಅಳವಡಿಕೆ ಸೇರಿದಂತೆ ಹೂಳೆತ್ತುವ ಕಾಮಗಾರಿಯನ್ನು ವಿಕ್ಷಣೆ ಮಾಡಿ ಅವರು ಮಾತನಾಡಿದರು.
ಗುತ್ತಿ ಬಸವಣ್ಣ ಏತ ನೀರಾವರಿ ಯೋಜನೆಯ ಕಾಲುವೆಗೆ ನೀರು ಹರಿಸುವ ಪಂಪ್ ಹೌಸಿಗೆ ಭೇಟಿ ನೀಡಿ ಅಲ್ಲಿ ನಡೆಯುತ್ತಿರುವ ಪಂಪ್ ರಿಪೇರಿ ಸೇರಿದಂತೆ ಇನ್ನುಳಿದ ಕಾಮಗಾರಿಯನ್ನು ವಿಕ್ಷಣೆ ಮಾಡಲಾಗಿದೆ. ಆ.15 ರೊಳಗಾಗಿ ಗುತ್ತಿ ಬಸವಣ್ಣ ಯೋಜನೆಯ ಕಾಲುವೆಯ ಮೂಲಕ ರೈತರ ಜಮೀನುಗಳಿಗೆ ನೀರು ಹರಿಲಾಗುವುದು. ಯಾವುದೋ, ಯಾರದೋ ಉಡಾಫೆ ಮಾತುಗಳಿಗೆ ಕಿವಿಗೊಡಬೇಡಿ ಎಂದು ರೈತರಿಗೆ ಮನವಿ ಮಾಡಿಕೊಂಡರು.
ಗುತ್ತಿಬಸವಣ್ಣ ಏತ ನೀರಾವರಿ ಯೋಜನೆ ವಿಷಯದಲ್ಲಿ ವಿರೋಧ ಪಕ್ಷದ ನಾಯಕರು ರಾಜಕೀಯ ಮಾಡುತ್ತಿದ್ದಾರೆ. ಇಲ್ಲ ಸಲ್ಲದ ಹೇಳಿಕೆ ನಿಡುತ್ತಿದ್ದಾರೆ. ರೈತರಿಗೆ ತಪ್ಪು ಮಾಹಿತಿ ನೀಡುವ ಮೂಲಕ ಅವರ ದಾರಿ ತಪ್ಪಿಸುತ್ತಿದ್ದಾರೆ. ಅಂಥವರ ಮಾತುಗಳಿಗೆ ರೈತರು ಕಿವಿಗೊಡಬಾರದು. ನೀವು ನನ್ನ ಮೇಲೆ ವಿಶ್ವಾಸವಿಟ್ಟು ಚುನಾಯಿಸಿದ್ದಿರಿ. ನಿಮ್ಮ ವಿಶ್ವಾಸ ಕಳೆದುಕೊಳ್ಳುವುದಿಲ್ಲ. ಗುತ್ತಿ ಬಸವಣ್ಣ ಏತ ನೀರಾವರಿ ಯೋಜನೆಯ ಕಾಲುವೆ ನೀರು ರೈತರ ಜಮೀನುಗಳಿಗೆ ಹರಿಸುವ ಕೆಲಸ ಪ್ರಾಮಾಣಿಕವಾಗಿ ಮಾಡುತ್ತೇನೆ. ನನ್ನ ಮೇಲೆ ನಂಬಿಕೆಯಿಡಿ ಎಂದು ರೈತರಲ್ಲಿ ಮನವಿ ಮಾಡಿಕೊಂಡರು.
ಇದನ್ನೂ ಓದಿ : ಪಾಕಿಸ್ಥಾನ vs ಶ್ರೀಲಂಕಾ ದ್ವಿತೀಯ ಟೆಸ್ಟ್: ಮೊದಲ ದಿನ ಲಂಕಾ ಮೇಲುಗೈ
ಪಂಪ್ ಹೌಸ್‌ನಲ್ಲಿ ಮೋಟಾರ್ ಗಳ ಜೋಡಣೆ ಕಾರ್ಯ ವಿಕ್ಷಣೆ ಮಾಡಿದರು. ಅವುಗಳ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದರು. ನಂತರ ಕಾಲುವೆಯಲ್ಲಿ ಹುದುಗಿರುವ ಹುಳನ್ನು ತೆಗೆಯುತ್ತಿರುವ ಕಾಮಗಾರಿಯನ್ನು ವಿಕ್ಷಣೆ ಮಾಡಿದರು. ನಂತರ ಅಧಿಕಾರಿಗಳೊಂದಿಗೆ ಚರ್ಚೆ ಮಾಡಿ ಆ.೧೫ ರೊಳಗೆ ಕಾಲುವೆಯ ನೀರು ರೈತರ ಜಮೀನುಗಳಲ್ಲಿ ಹರಿಯಬೇಕು ಎಂದು ಹೇಳಿದರು.
ಬಿಜೆಪಿ ಮಂಡಳ ಅಧ್ಯಕ್ಷ ಈರಣ್ಣ ರಾವೂರ, ಪುರಸಭೆ ಸದಸ್ಯ ಭಾಷಾಸಾಬ ತಾಂಬೋಳಿ, ರಾಜಣ್ಣ ನಾರಾಯಣಕರ, ಬಿಜೆಪಿ ಮುಖಂಡ ಸಂತೋಷ ಪಾಟೀಲ, ಶ್ರೀಶೈಲ ಚಳ್ಳಗಿ, ಗೌಡಣ್ಣ ಆಲಮೇಲ, ರವಿ ನಾಯ್ಕೋಡಿ, ಸುದರ್ಶನ ಜಿಂಗಾಣಿ, ಗೋಲ್ಲಾಳಪ್ಪ ನಾಗಣಸೂರ, ರಾಘವೇಂದ್ರ ಕುಲಕರ್ಣಿ, ಸೈಪೋನಸಾಬ ಕೋರವಾರ, ಬಾಗಣ್ಣ ಕೋಟೆಗೋಳ, ಸುದರ್ಶನ ಜಿಂಗಾಣಿ, ಸಿದ್ರಾಯ ಪೂಜಾರಿ, ಹುಸೇನಿ ಅಡಾಡಿ, ಅಮೋಗಿ ಹಿರೇಕುರಬರ, ಮಾರಲಬಾವಿ ಸೇರಿದಂತೆ ರೈತರು ಭಾಗವಹಿಸಿದ್ದರು.