Advertisement
ಹುಲ್ಲಿನ ಛಾವಣಿಯಲ್ಲಿ ಆರಂಭವಾದ ಶಾಲೆ 1927ರಲ್ಲಿ ಹೆಂಚಿನ ಕಟ್ಟಡಕ್ಕೆ ಸ್ಥಳಾಂತರ ಗೊಂಡಿತು. 1969- 90ರವರೆಗೆ ಬೋರ್ಡ್ ಶಾಲೆಯಾಗಿ ಪರಿಗಣಿಸ ಲ್ಪಟ್ಟಿದ್ದು, ಅನಂತರ ಸರಕಾರಿ ಶಾಲೆಯಾಗಿ ಪರಿವರ್ತನೆಗೊಂಡಿತ್ತು. 1968-69ರಲ್ಲಿ ಹಿ.ಪ್ರಾ. ಶಾಲೆಯಾಗಿ ಮೇಲ್ದರ್ಜೆಗೇರಿಸಿದ ಬಳಿಕ ಪ್ರಸಕ್ತ ಶಿಕ್ಷಕರ ಕೊರತೆ ಸೇರಿದಂತೆ ಕೆಲವು ಸಮಸ್ಯೆ ಕಾಡುತ್ತಿದೆ.
ರಾಜ್ಯದ ಪ್ರಾಥಮಿಕ ಶಾಲೆಗಳಿಗೆ ಸರಕಾರದ ನಿರೀಕ್ಷಿತ ಅನುದಾನ ದಕ್ಕುತ್ತಿಲ್ಲ. ಹೀಗಾಗಿ ಅಗತ್ಯ ಸೌಲಭ್ಯ ಕಲ್ಪಿಸುವಲ್ಲಿ ಪ್ರಾಥಮಿಕ ಶಾಲೆಗಳು ಸೊರಗಿವೆ. ಶಾಲಾಭಿವೃದ್ಧಿ ಸಮಿತಿ, ದಾನಿಗಳು, ಹಳೇ ವಿದ್ಯಾರ್ಥಿಗಳ ಅನುದಾನದಿಂದಲೇ ಶಾಲೆಗಳು ಇಂದು ಸ್ವಲ್ಪಮಟ್ಟಿಗಾದರು ಉಳಿದುಕೊಂಡಿದೆ. ಗುರುವಾಯನಕೆರೆ ಶಾಲೆಯದ್ದೂ ಇದೇ ಪರಿಸ್ಥಿತಿ. ಇರುವ ಪೀಠೊಪಕರಣ, ಬೆಂಚ್, ಡೆಸ್ಕ್ಗಳು ಹಳೆಯದಾಗಿವೆ. ಮಕ್ಕಳನ್ನು ಆಕರ್ಷಿಸಲು ಸುಧಾರಿತ ಪೀಠೊಪಕರಣ ಶಾಲೆ ಸೇರುತ್ತಿಲ್ಲ. ಮುಖ್ಯಶಿಕ್ಷರಿಗೆ ಕೊಠಡಿ ಇಲ್ಲ. 1,000ಕ್ಕೂ ಅಧಿಕ ಪುಸ್ತಕಗಳಿವೆ. ಗ್ರಂಥಾಲಯ ನಿರ್ಮಿಸಿ, ಪುಸ್ತಕಗಳನ್ನು ಜೋಪಾನವಾಗಿಡಲು ಕಪಾಟುಗಳೇ ಇಲ್ಲ. ಶಾಲೆಯ ಸುತ್ತ 1.11 ಎಕ್ರೆ ಜಾಗವಿದೆ. ಆದರೆ 150 ಮೀಟರ್ ತಡೆಗೋಡೆ ನಿರ್ಮಾಣದ ಅಗತ್ಯವಿದೆ. ಸ್ಮಾರ್ಟ್ ಕ್ಲಾಸ್ ಆರಂಭದ ಯೋಜನೆಗಳು ಉದ್ಘಾಟನೆಗಷ್ಟೇ ಸೀಮಿತ. ಕಲಿಕಾ ಸಾಮರ್ಥ್ಯ ಹೆಚ್ಚಿಸಲು ಪ್ರೊಜೆಕ್ಟರ್, ಜೆರಾಕ್ಸ್ ಯಂತ್ರ ಆವಶ್ಯಕತೆ ಇಲ್ಲಿನದಾಗಿದೆ.
Related Articles
Advertisement
ಕಾಯಕಲ್ಪ ಎಂದು?ಶಿಥಿಲಾವಸ್ಥೆಯಲ್ಲಿರುವ, 115 ವರ್ಷಗಳ ಹಿಂದಿನ ಈ ಶಾಲೆಯ ಕಟ್ಟಡಕ್ಕೆ ಕಾಯಕಲ್ಪ ನೀಡಲು ಇನ್ನೆಷ್ಟು ವರ್ಷಗಳು ಬೇಕೋ? ಸರಕಾರಗಳು ಮೂಲಸೌಕರ್ಯ ಒದಗಿಸಿದಲ್ಲಿ ಸರಕಾರಿ ಶಾಲೆಗಳ ಶಿಕ್ಷಣದ ಗುಣಮಟ್ಟ ಖಾಸಗಿ ಶಾಲೆಗಳಿಗೆ ಪೈಪೋಟಿ ನೀಡುವ ಮಟ್ಟಕ್ಕೆ ಬೆಳೆಯಲಿದೆ. ಸರಕಾರ ಮಕ್ಕಳ ಸಂಖ್ಯೆ ಏರಿಕೆಯ ಒತ್ತಡ ಹೇರುತ್ತಿದೆ. ಮೂಲಸೌಕರ್ಯ ಒದಗಿಸಿದಲ್ಲಿ ಸರಕಾರಿ ಶಾಲೆಗಳಲ್ಲೂ ಮಕ್ಕಳ ಕಲರವ ಹೆಚ್ಚಬಹುದು. ಅಭಿವೃದ್ಧಿಗೆ ಯತ್ನ
ಶಾಲಾ ಮೇಲುಸ್ತುವಾರಿ ಸಮಿತಿ ಹಿರಿಯ ವಿದ್ಯಾರ್ಥಿಗಳು, ವಿವಿಧ ಸಂಘಟನೆಗಳು, ಊರವರು, ಶಾಸಕರು, ಎಂ.ಎಲ್.ಸಿ., ಗ್ರಾ.ಪಂ., ಜಿ.ಪಂ., ತಾ.ಪಂ. ನೆರವಿನಿಂದ ಹಾಗೂ ಶಿಕ್ಷಣ ಇಲಾಖೆಯ ಮಾರ್ಗದರ್ಶನದಿಂದ ಶಾಲೆಯ ಸರ್ವತೋಮುಖ ಅಭಿವೃದ್ಧಿಗೆ ಪ್ರಯತ್ನಿಸಲಾಗುತ್ತಿದೆ. ಆದರೂ ಇನ್ನೂ ಹೆಚ್ಚಿನ ಅವಶ್ಯಕತೆಗಳು ನಮ್ಮ ಶಾಲೆಗಿದೆ.
-ಸಿಸಿಲಿಯಾ ಪಾಯ್ಸ್,
ಪ್ರಭಾರ ಮುಖ್ಯ ಶಿಕ್ಷಕಿ -ಚೈತ್ರೇಶ್ ಇಳಂತಿಲ