Advertisement

ಗುರುವ ನಾಯ್ಕರು ಕಾಯುತಿಹರು ವೃದ್ಧಾಪ್ಯ ವೇತನ ಹೆಚ್ಚಳಕ್ಕಾಗಿ

08:35 PM Jan 09, 2019 | Team Udayavani |

ಉಡುಪಿ: ವೃದ್ಧಾಪ್ಯ ವೇತನವನ್ನು ರಾಜ್ಯ ಸರಕಾರ 600 ರೂ.ನಿಂದ 1 ಸಾವಿರ ರೂ.ಗೇರಿದೆ. ಆದರೆ ಹೆರ್ಗ ಗ್ರಾಮದ ಸರಳೆಬೆಟ್ಟಿನ ನಿವಾಸಿ ಗುರುವ ನಾಯ್ಕರಿಗೆ ಮಾತ್ರ 600 ರೂ. ಸಂದಾಯವಾಗಿದೆ. ಉಳಿದವರಿಗೆ 1,000 ರೂ. ಪಾವತಿಯಾದರೂ ಗುರುವ ನಾಯ್ಕರ ಬ್ಯಾಂಕ್‌ ಖಾತೆಗೆ 600 ರೂ. ಜಮೆಯಾಗಿದೆ. ಗುರುವ ನಾಯ್ಕರು ಆರ್ಥಿಕವಾಗಿ ಬಡವರಾದರೂ ಆರೋಗ್ಯದಲ್ಲಿ ಸಿರಿವಂತರು. 80ರ ಇಳಿವಯಸ್ಸಿನಲ್ಲಿಯೂ ತೆಂಗಿನ ಕಟ್ಟೆ ಕಟ್ಟುವುದು, ತೆಂಗಿನ ಕಾಯಿ ಒಣಗಿಸುವುದು, ನಡೆದುಕೊಂಡು ಹೋಗುವುದು ಇತ್ಯಾದಿಗಳನ್ನು ಸಲೀಸಾಗಿ ಮಾಡುತ್ತಾರೆ.

Advertisement

ಇವರೀಗ 1 ಸಾವಿರ ರೂ. ಎಂದು ಬರುವುದೆಂದು ಕಾತರದಿಂದ ಕಾಯುತ್ತಿದ್ದಾರೆ. ‘ನಾನು ಕೂಲಿನಾಲಿ ಮಾಡಿ ಬದುಕುವುದು. ಹೆಚ್ಚಳವಾದ ವೃದ್ಧಾಪ್ಯ ವೇತನ ನನಗೂ ಬರಬೇಕು’ ಎನ್ನುತ್ತಾರೆ ಗುರುವ ನಾಯ್ಕ.

Advertisement

Udayavani is now on Telegram. Click here to join our channel and stay updated with the latest news.

Next