Advertisement
ಮಂಗಳವಾರ ಎಡಪದವು ಶ್ರೀ ಪಟ್ಟಾಭಿರಾಮ ಕಲ್ಯಾಣ ಮಂಟಪ ಶ್ರೀ ರಾಮ ಮಂದಿರದಲ್ಲಿ ಮಂಗಳೂರು ಉತ್ತರ ವಿಧಾನ ಸಭಾ ಕ್ಷೇತ್ರದ ಗುರುಪುರ ಹೋಬಳಿ ಮಟ್ಟದ ಜನಸ್ಪಂದನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿ, ಎಂಸಿಎಫ್ ಕಂಪೆನಿಯು ಅಂಗವಿಕಲರಿಗೆ ವೀಲ್‌ಚೇರ್ ಮತ್ತಿತರ ಪರಿಕರ ಒದಗಿಸಿದೆ. ಸುರತ್ಕಲ್ ಹೋಬಳಿ ಮಟ್ಟದಲ್ಲಿ ಎರಡನೇ ಜನಸ್ಪಂದನ ಹಮ್ಮಿಕೊಳ್ಳಲಾಗುವುದು ಎಂದು ಅವರು ಹೇಳಿದರು.
Related Articles
ಸರಕಾರದ ಎಲ್ಲ ಇಲಾಖೆಗಳಿಂದ ಸಾರ್ವಜನಿಕರ ಅರ್ಜಿ ಸ್ವೀಕಾರ, ಫಲಾನುಭವಿಗಳಿಗೆ ಮಾಹಿತಿ ಪತ್ರ ವಿತರಣೆ, ಕಂದಾಯ ಇಲಾಖೆಯಿಂದ ಹಕ್ಕು ಪತ್ರ ವಿತರಣೆ, ಆರೋಗ್ಯ ಇಲಾಖೆಯಿಂದ ವಿಕಲಚೇತನರಿಗೆ ಸವಲತ್ತು ವಿತರಣೆ, ಗುರುತಿನ ಚೀಟಿ ವಿತರಣೆ, ಕೃಷಿ ಇಲಾಖೆಯಿಂದ ಸವಲ ತ್ತುಗಳ ವಿತರಣೆ, ಪಂಚಾಯತ್‌ಗಳಿಂದ ವಿವಿಧ ಸೌಲಭ್ಯಗಳ ಅರ್ಜಿ ಸ್ವೀಕಾರ, ಫಲಾನುಭವಿಗಳಿಗೆ ಮಾರ್ಗ ದಶ ರ್ನ ನೀಡಿದರು. ತಾ.ಪಂ. ಕಾರ್ಯನಿರ್ವಹಣಾಧಿಕಾರಿ ರಘು ನೋಡಲ್ ಅಧಿಕಾರಿಯಾಗಿದ್ದರು.
Advertisement
ಸವಲತ್ತುಗಳ ವಿತರಣೆಸುಮಾರು 2,500ಕ್ಕೂ ಅಧಿಕ ಮಂದಿ ವಿವಿಧ ಸೌಲಭ್ಯಗಳನ್ನು ಪಡೆಯಲು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಕಾರ್ಯಕ್ರಮ ದಲ್ಲಿ 600 ಹಕ್ಕು ಪತ್ರ, 300 ಮಾಸಾಶನ, 25 ವೀಲ್‌ಚೇರ್, 28 ಅಲೆಮಾರಿ ಕುಟುಂಬಗಳಿಗೆ ಹಕ್ಕು ಪತ್ರ, ಉಜ್ವಲ ಯೋಜನೆ ಯಡಿ 300 ಮಂದಿಗೆ ಗ್ಯಾಸ್ ಕಿಟ್ ವಿತರಣೆ, 161 ಮಂದಿ ವಿಕಲಚೇತನರಿಗೆ ಪ್ರಮಾಣ ಪತ್ರ ವಿತರಣೆ ನಡೆಯಿತು. ಉತ್ತಮ ಸ್ಪಂದನೆ
ಜನಸ್ಪಂದನ ಕಾರ್ಯಕ್ರಮಕ್ಕೆ ಉತ್ತಮ ಸ್ಪಂದನೆ ವ್ಯಕ್ತವಾಗಿದೆ. ಕಾರ್ಯಕ್ರಮಕ್ಕೆ ಆಗಮಿಸಿದ್ದ ಎಲ್ಲರಿಗೂ ಊಟದ ವ್ಯವಸ್ಥೆ ಕಲ್ಪಿಸಲಾಗಿತ್ತು. ಗಂಜಿಮಠದ ಹರೀಶ್ ಕಾಮತ್ ಅವರು ಉಚಿತ ಜೆರಾಕ್ಸ್ ವ್ಯವಸ್ಥೆ ಕಲ್ಪಿಸಿದರು. ಛಾಯಾಚಿತ್ರ ಸೇರಿ ಹಲವು ವ್ಯವಸ್ಥೆ ಮಾಡಲಾಗಿತ್ತು.