Advertisement

ಗಾಯನ ಗಂಗೆ ಹರಿಸಿದ ಗುರುನಾಥ ನಾತು

03:13 PM Feb 02, 2018 | |

ಕಳೆದ 18 ವರ್ಷಗಳಿಂದ ಉಜಿರೆಯ ಸಂಗೀತ ಸೌರಭ ಸಂಸ್ಥೆಯು ಹಿಂದೂಸ್ಥಾನಿ ಸಂಗೀತವನ್ನು ಪ್ರಚುರಪಡಿಸುವ ಉದ್ದೇಶದಿಂದ ಉಜಿರೆ ಜಾತ್ರೆಯ ಸಂದರ್ಭ ಹಿಂದೂಸ್ಥಾನಿ ಸಂಗೀತ ಸಾಧಕರನ್ನು ಪರಿಚಯಿಸುತ್ತಾ ಬಂದಿದೆ.

Advertisement

ಈ ಬಾರಿ ಜ. 19 ರಂದು ಪಂ| ಗುರುನಾಥ ನಾತು ಸವಣಾಲು ಇವರ ಹಿಂದೂಸ್ಥಾನಿ ಶಾಸ್ತ್ರೀಯ ಸಂಗೀತ ಉಜಿರೆ ಶಾರದಾ ಮಂಟಪದಲ್ಲಿ ಪ್ರಸ್ತುತಗೊಂಡಿತು. ನಾತು ಜಯಪುರ್‌ ವಾಲೆಘರಾಣೆಯನ್ನು ಕರಗತ ಮಾಡಿಕೊಂಡವರು. ಕಛೇರಿಯನ್ನು ರಾಗ ಜಯಜಯವಂತಿಯ ಆಲಿ ಮೇರೋ ಪಿಯಾ ಎಂಬ ಖಯಾಲ್‌ನ್ನು ವಿಲಂಬಿತ ಏಕತಾಲ್‌ನಲ್ಲಿ ಆರಂಭಿಸಿ ಕೈಸೇ ಕಟೀ ಹೆ ದಿನ ರೈನಾ‰.. ಎಂಬ ಕೃತಿಯನ್ನು ಧತ್‌ತೀನ್‌ತಾಲ್‌ನಲ್ಲಿ ಕೊನೆಗೊಳಿಸಿದರು. ಬಳಿಕ ಅವರು ಆಯ್ದುಕೊಂಡದ್ದು ಭಜನ್‌ಗಳನ್ನು. ದರುಶನ ದೀ ಜೋ ಆಯಾ (ಮೀರಾ ಭಜನ್‌) ತಂಬೂರ ಮೀಟಿದವ ಭವಾಬ್ದಿದಾಟಿದವ‰.., ಎಂದು ಕಾಂಬೆನು ನಂದಗೋಪನ., ಭಲೆ ಬುರೇ ಸೋತೆರೆ ಹಮ್‌., ನಾನೇಕೆ ಪರದೇಶಿ ನಾನೇಕೆ ಬಡವನೋ‰., ಈ ಪರಿಯ ಸೊಬಗಾವ ದೇವರಲಿ ನಾ ಕಾಣೆ, ಹಾಗೂ ಕೊನೆಯಲ್ಲಿ ಭೆ„ರವಿ ರಾಗದಲ್ಲಿನ ಭವಾನಿ ದಯಾನಿ ..

ಈ ಪೈಕಿ ತಂಬೂರ ಮೀಟಿದವ ಹಾಗೂ ಎಂದು ಕಾಂಬೆನು ಕೃತಿಗಳನು °ಭಾವಪೂರ್ಣತೆಯಿಂದ ಹಾಡಿದಾಗ ಶ್ರೋತಗಳಲ್ಲೂ ಭಕ್ತಿಭಾವದ ತರಂಗಗಳನ್ನು ಉಂಟುಮಾಡಿತು. ಗಾಯನಕ್ಕೆ ಹಾರ್ಮೋನಿಯಂನಲ್ಲಿ ಕೈಚಳಕ ತೋರಿದವರು ಕುಮಟಾದ ಗಂಧರ್ವ ಕಲಾ ಕೇಂದ್ರದ ನಿರ್ದೇಶಕ ವಾಸುದೇವತಾಮನ್ಕಾರ್‌ ಹಾಗೂ ತಬಲಾದಲ್ಲಿ ಉಜಿರೆ ಎಸ್‌ಡಿಎಂ ಕಾಲೇಜಿನ ಪ್ರಾಧ್ಯಾಪಕ ಗಣೇಶ್‌ ಶೆಂಡೆ ಇವರು. ಇವರಿಬ್ಬರೂ ನಾತು ಅವರ ಶಿಷ್ಯರು. ಇಬ್ಬರ ಸಾಥ್‌ ಗಾಯನಕ್ಕೆ ಸರಿಸಾಟಿಯಾಗಿ ಹಾಗೂ ಹೊಂದಾಣಿಕೆಯಿಂದ ಕೂಡಿತ್ತು.                      

ದೀಪಕ್‌ ಆಠವಳೆ

Advertisement

Udayavani is now on Telegram. Click here to join our channel and stay updated with the latest news.

Next