Advertisement

ಗುರುಮಠಕಲ್‌ ಪುರಸಭೆ ಗದ್ದುಗೆ ಯಾರಿಗೆ?

04:49 PM Nov 02, 2020 | Suhan S |

ಯಾದಗಿರಿ: ಕಾಂಗ್ರೆಸ್‌ ಭದ್ರಕೋಟೆಯನ್ನುಛಿದ್ರಗೊಳಿಸಿದ ಗುರುಮಠಕಲ್‌ ಮತಕ್ಷೇತ್ರವನ್ನು ತನ್ನ ತೆಕ್ಕೆಗೆ ಪಡೆದಿರುವ ಜೆಡಿಎಸ್‌ಗೆ ಗುರುಮಠಕಲ್‌ಪುರಸಭೆ ಅಧ್ಯಕ್ಷ, ಉಪಾಧ್ಯಕ್ಷ ಗದ್ದುಗೆಯೂವಶವಾದಿತೇ?. ಇದೀಗ ಜೆಡಿಎಸ್‌ ಮತ್ತು ಕಾಂಗ್ರೆಸ್‌ಗೆ ಗದ್ದುಗೆ ಹಿಡಿಯುವುದು ಪ್ರತಿಷ್ಠೆಯ ಮಾತಾಗಿದೆ.

Advertisement

ಗುರುಮಠಕಲ್‌ ಪುರಸಭೆಗೆ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಆಯ್ಕೆಗೆ ನ.2ರಂದು ದಿನಾಂಕ ನಿಗದಿಯಾಗಿದ್ದು, ಕಾಂಗ್ರೆಸ್‌ನ ಮೂವರು ಸದಸ್ಯರು ಕೆಲವು ದಿನಗಳಿಂದ ಯಾರ ಸಂಪರ್ಕಕ್ಕೂ ಸಿಗದೇಅಜ್ಞಾತವಾಸದಲ್ಲಿದ್ದು, ರಾಜಕೀಯವಾಗಿ ಸಾಕಷ್ಟು ಸಂಚಲನ ಮೂಡಿಸಿದೆ.

23 ಸದಸ್ಯರ ಬಲ ಹೊಂದಿರುವ ಪುರಸಭೆಯಲ್ಲಿ ಕಾಂಗ್ರೆಸ್‌ 12 ಸದಸ್ಯರ ಬಲ ಹೊಂದಿದ್ದರೆ, ಜೆಡಿಎಸ್‌ 8, ಬಿಜೆಪಿ 2 ಹಾಗೂ ಒಬ್ಬ ಪಕ್ಷೇತರ ಸದಸ್ಯರಿದ್ದಾರೆ.ಪ್ರಸ್ತುತ ದಳಪತಿಗಳ ಬಳಿ 8 ಸದಸ್ಯರು ಮತ್ತು ಶಾಸಕರ ಮತ ಸೇರಿ 9ಕ್ಕೆ ಏರಿಕೆಯಾಗಲಿದ್ದು, ಪ್ರಮುಖವಾಗಿ ಕಾಂಗ್ರೆಸ್‌ 12 ಸದಸ್ಯರಲ್ಲಿ ಅಶೋಕ ಕಲಾಲ್‌, ಆಶನ್ನ ಬುದ್ಧ ಹಾಗೂ ಪವಿತ್ರ ಮನ್ನೆ ಅಜ್ಞಾತ ಸ್ಥಳಕ್ಕೆ ತೆರಳಿರುವುದು ಕಾಂಗ್ರೆಸ್‌ಗೆ ನುಂಗಲಾರದ ಬಿಸಿ ತುಪ್ಪವಾಗಿ ಪರಿಣಮಿಸಿದೆ.

ಈಗಾಗಲೇ ಕಾಂಗ್ರೆಸ್‌ ಎಲ್ಲಾ ಸದಸ್ಯರಿಗೆ ವಿಪ್‌ ಜಾರಿಗೊಳಿಸಿ ಪಕ್ಷದ ಅಧಿಕೃತ ಅಭ್ಯರ್ಥಿ ಪರ ಮತ ಚಲಾಯಿಸದಿದ್ದರೆ ಸೂಕ್ತ ಕ್ರಮದ ಎಚ್ಚರಿಕೆಯೂ ನೀಡಿದೆ. ರಾಜಕೀಯದಲ್ಲಿ ಯಾವಾಗ ಏನಾಗುತ್ತದೆ ಎನ್ನುವುದು ಹೇಳಲಾಗಲ್ಲ ಎನ್ನುವಂತೆ ಒಂದು ವೇಳೆ ಮೂವರು ಸದಸ್ಯರು ಜೆಡಿಎಸ್‌ಗೆ ಬೆಂಬಲಿಸಿದರೆ ಅಧ್ಯಕ್ಷ ಗಾದಿಗೆ ಬೇಕಿರುವ 12ರ ಬಲ ಸಿಕ್ಕು ಗದ್ದುಗೆ ತನ್ನದಾಗಿಸುವ ತಂತ್ರಗಾರಿಕೆ ಹೂಡಲಾಗಿದೆ ಎನ್ನುವ ಮಾತುಗಳು ರಾಜಕೀಯ ವಲಯದಲ್ಲಿ ಸದ್ದು ಮಾಡಿದೆ.

ಪಕ್ಷೇತರ ಒಬ್ಬ ಸದಸ್ಯರು ಈಗಾಗಲೇ ತೆನೆಹೊತ್ತ ಮಹಿಳೆಯತ್ತ ವಾಲಿರುವ ಮಾಹಿತಿ ಲಭ್ಯವಾಗಿದ್ದು,ಯಾದಗಿರಿ ನಗರಸಭೆಯಲ್ಲಿ ಬಿಜೆಪಿಗೆ ಜೆಡಿಎಸ್‌ನ ಇಬ್ಬರು ಸದಸ್ಯರು ಬಾಹ್ಯ ಬೆಂಬಲ ನೀಡಿದಂತೆ ಗುರುಮಠಕಲ್‌ನಲ್ಲಿ ಬಿಜೆಪಿಯ ಇಬ್ಬರು ಸದಸ್ಯರು ಜೆಡಿಎಸ್‌ಗೆ ಬೆಂಬಲ ನೀಡಲಿದ್ದಾರೆ ಎನ್ನುವ ಅಂಶವೂ ತೀವ್ರ ಚರ್ಚೆಯಲ್ಲಿದೆ. ಹೀಗಾದಲ್ಲಿ ಜೆಡಿಎಸ್‌ ಅಧಿಕಾರಿ ಹಿಡಿಯುವುದರಲ್ಲಿ ಯಾವುದೇ ಅನುಮಾನವಿಲ್ಲ.

Advertisement

ಕಾಂಗ್ರೆಸ್‌, ಜೆಡಿಎಸ್‌ ನಮ್ಮ ಸಿದ್ಧಾಂತದವಿರೋಧಿ  ಪಕ್ಷಗಳು ಹಾಗಾಗಿ ಗುರುಮಠಕಲ್‌ನಲ್ಲಿ ಪಕ್ಷದ ಇಬ್ಬರು ಸದಸ್ಯರು ಬೆಂಬಲ ನೀಡುವ ಪ್ರಶ್ನೆಯೇ ಇಲ್ಲ. ಯಾದಗಿರಿ ಜೆಡಿಎಸ್‌ನವರಿಗೆ ನಾವು ಬೆಂಬಲ ಕೇಳಿರಲಿಲ್ಲಹಾಗಾಗಿ ಗುರುಮಠಕಲ್‌ನಲ್ಲಿ ಜೆಡಿಎಸ್‌ಗೆ ಬಿಜೆಪಿಯ ಬೆಂಬಲ ನೀಡಲ್ಲ.  -ಡಾ.ಶರಣ ಭೂಪಾಲರೆಡ್ಡಿ ನಾಯ್ಕಲ್‌, ಬಿಜೆಪಿ ಜಿಲ್ಲಾಧ್ಯಕ್ಷರು, ಯಾದಗಿರಿ.

ಪಕ್ಷದ ಮೂವರು ಸದಸ್ಯರು ಸಂಪರ್ಕಕ್ಕೆ ಸಿಕ್ಕಿಲ್ಲ. ಈಗಾಗಲೇ ವಿಪ್‌ ಜಾರಿಗೊಳಿಸಲಾಗಿದೆ. ನಮ್ಮ ಅಧಿ ಕೃತ ಅಭ್ಯರ್ಥಿ ಮೈನೋದ್ದೀನ್‌ ಪರ ಮತ ಚಲಾಯಿಸಲು ಸೂಚಿಸಲಾಗಿದೆ. ಆದೇಶ ಉಲ್ಲಂಘಿಸಿ ವಿರೋಧ ಮತ ಚಲಾಯಿಸಿದಲ್ಲಿ ಅಥವಾ ದೂರ ಉಳಿದಲ್ಲಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು. – ಮಹಿಪಾಲರೆಡ್ಡಿ ಹತ್ತಿಕುಣಿ, ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷರು.

 

-ಅನೀಲ ಬಸೂದೆ

Advertisement

Udayavani is now on Telegram. Click here to join our channel and stay updated with the latest news.

Next