ಕುಂದಾಪುರ: ಗುರುಕುಲ ಪಬ್ಲಿಕ್ ಸ್ಕೂಲ್‌ನ ಆವರಣದಲ್ಲಿ ಕುಂದಾಪುರ ತಾಲೂಕಿನ ಉಪ ಅರಣ್ಯ ವಿಭಾಗದ ಅಧಿಕಾರಿ ಎಂ.ವಿ.ಅಮರನಾಥ್ ಅವರ ಉಪಸ್ಥಿತಿಯಲ್ಲಿ ಹಸಿರು ಹಬ್ಬ ವನಮಹೋತ್ಸವ ಜರಗಿತು.
ಗುರುಕುಲ ಪಬ್ಲಿಕ್ ಶಾಲೆಯಲ್ಲಿ 400 ಕ್ಕೂ ಹೆಚ್ಚು ಮೆಡಿಸಿನ್‌ಯುಕ್ತ ಸಸ್ಯಗಳು ಇರುವುದನ್ನು ತಿಳಿದು ಅರಣ್ಯಾಧಿಕಾರಿಗಳು ಸಂತಸ ವ್ಯಕ್ತ ಪಡಿಸಿದರು.
ಹಸಿರಿನ ಹಬ್ಬಕ್ಕೆ ಚಾಲನೆ ನೀಡಿದ ಎಂ.ವಿ.ಅಮರನಾಥ ಅವರು ಪರಿಸರದಲ್ಲಿ ಅಸಮತೋಲನ ಉಂಟಾದರೆ ಪ್ರಾಕೃತಿಕ ವಿಕೋಪಗಳಿಗೆ ಹಾಗೂ ರೋಗರುಜಿನಗಳಿಗೆ ಕಾರಣವಾಗಲಿದೆ. ಆದ್ದರಿಂದ ಪ್ರತಿಯೊಬ್ಬರೂ ಪರಿಸರ ಕಾಳಜಿಯನ್ನು ಬೆಳೆಸಿಕೊಂಡು ಪರಿಸರ ಸಂರಕ್ಷಣೆಗೆ ಹಾಗು ಅಭಿವೃದ್ಧಿಗೆ ಶ್ರಮಿಸಬೇಕಿದೆ. ಹಸಿರು ಮಕ್ಕಳ ಉಸಿರು ಎಂಬಂತೆ ಪರಿಸರ ಜಾಗƒತಿ ನನ್ನಲ್ಲಿ ಇನ್ನಿಲ್ಲದ ಉತ್ಸಾಹ ಸಂತೋಷ ತಂದಿದೆ. ಪರಿಸರ ಸಂರಕ್ಷಣೆಯಲ್ಲಿ ವಿದ್ಯಾರ್ಥಿಗಳು ಭಾಗವಹಿಸಿರುವುದು ಉತ್ತಮ ಸಂದೇಶ ನೀಡುತ್ತದೆ. ಹಾಗೆಯೇ ವಿದ್ಯಾರ್ಥಿಗಳು ಮುಂದಾಳತ್ವ ವಹಿಸಿ ತಮ್ಮ ಮನೆ ಶಾಲೆ ಓಣಿಗಳಲ್ಲಿ ಸ್ವತ್ಛತೆ ಮತ್ತು ಪರಿಸರ ಸ್ನೇಹಿ ಕೆಲಸಕ್ಕೆ ಮುಂದಾಗುವಂತೆ ಮಾರ್ಗದರ್ಶನ ನೀಡಿದರು.
ಶಾಲಾಮಕ್ಕಳು ಪರಿಸರ ಸಂರಕ್ಷಣೆ ಕುರಿತಾದ ಕಿರು ನಾಟಕ ಪ್ರದರ್ಶಿಸಿದ್ದು, ಹಸಿರು ಹಬ್ಬದ ದಿನದ ವಿಶೇಷವಾಗಿತ್ತು.
ಈ ಕಾರ್ಯಕ್ರಮದಲ್ಲಿ ಬಾಂಡ್ಯ ಶಿಕ್ಷಣ ಸಂಸ್ಥೆಯ ಜಂಟಿ-ಕಾರ್ಯನಿರ್ವಾಹಕ ಸುಭಾಶ್ಚಂದ್ರ ಶೆಟ್ಟಿ ಮತ್ತು ಅನುಪಮಾ ಎಸ್. ಶೆಟ್ಟಿ ಉಪಸ್ಥಿತರಿದ್ದರು.
ಗುರುಕುಲ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಸನ್ನಿ ಪಿ.ಜಾನ್, ಗುರುಕುಲ ಪಬ್ಲಿಕ್ ಶಾಲಾ ಪ್ರಾಂಶುಪಾಲ ಶಾಯಿಜು ಕೆ.ಆರ್. ನಾಯರ್ ಉಪಸ್ಥಿತರಿದ್ದರು.