ನನ್ನ ಪ್ರಕಾರ ಎಸ್ ಪಿ ಬಾಲಸುಬ್ರಹ್ಮಣ್ಯಂ ನಿಧನದಿಂದ ಒಂದು ಯುಗಾಂತ್ಯವಾಗಿದೆ. ಎಸ್‌ಪಿಬಿ ಇಲ್ಲದ ಭಾರತೀಯ ಚಿತ್ರರಂಗವನ್ನ ಅದರಲ್ಲೂ ದಕ್ಷಿಣ ಭಾರತದ ಚಿತ್ರರಂಗವನ್ನ ಕಲ್ಪಿಸಿಕೊಳ್ಳುವುದೂ ಕಷ್ಟ. ಒಂದು ತಲೆಮಾರು ಸಿನಿಮಾ ಸಂಗೀತದಲ್ಲಿ ಅನಭಿಷಕ್ತ ದೊರೆಯಾಗಿ ಬದುಕಿದ್ದವರು ಎಸ್‌ಪಿಬಿಯವರು. ಯಾವುದೇ ಥರದ ಸಂಗೀತ ಶೈಲಿಗೂ ತನ್ನನ್ನು ತೆರೆದುಕೊಳ್ಳುವ ಗಾಯಕ. ಕೇವಲ ಹಾಡಷ್ಟೇ ಅಲ್ಲ, ನಟನೆ, ಡಬ್ಬಿಂಗ್ ಹೀಗೆ ಹತ್ತಾರು ಪ್ರತಿಭೆಗಳನ್ನು ತನ್ನೊಡಲಲ್ಲಿ ಇಟ್ಟುಕೊಂಡಿದ್ದ ಕಲಾವಿದ. ಆರಂಭದಲ್ಲಿ ಸ್ಟೇಜ್ ಶೋಗಳಲ್ಲಿ ಎಸ್‌ಪಿಬಿ ಅವರನ್ನು ದೂರದಿಂದ ನೋಡುತ್ತಿದ್ದೆ. ಆನಂತರ ವಿ. ಮನೋಹರ್ ಅವರಿಂದ ಎಸ್‌ಪಿಬಿ ಪರಿಚಯವಾಯ್ತು.
ಇದನ್ನೂ ಓದಿ: ‘ಪ್ರೇಮದ ಹೂಗಾರ ಈ ಹಾಡುಗಾರ… ಹೂ ನೀಡುತಾನೆ.. ಮುಳು ಬೇಡುತಾನೆ..’: ಹೋಗಿ ಬನ್ನಿ SPB
ನನ್ನ ಸಂಗೀತ ನಿರ್ದೇಶನದ ಮೊದಲ ಸಿನಿಮಾ ‘ಎ’ ದಲ್ಲಿ ‘ಮಾರಿಕಣ್ಣು ಹೋರಿ ಮ್ಯಾಾಗೆ…’ ಹಾಡನ್ನು ಎಸ್‌ಪಿಬಿ ಹಾಡಿದ್ದರು. ಆ ಹಾಡು ರಾತ್ರೋರಾತ್ರಿ ಸೂಪರ್ ಹಿಟ್ ಆಯ್ತು. ಬಳಿಕ ನನ್ನ ಅವರ ನಡುವಿನ ಸಂಬಂಧ ಗಾಢವಾಯ್ತು. ಆನಂತರ ನಾನು ಸಂಗೀತ ನೀಡಿದ ಅನೇಕ ಹಾಡುಗಳಿಗೆ ಎಸ್‌ಪಿಬಿ ಧ್ವನಿಯಾದರು. ಕಲೆಗೆ ಕೊಡುತ್ತಿದ್ದ ಗೌರವ, ಸಿಂಪ್ಲಿಸಿಟಿ ವಿಷಯದಲ್ಲಿ ಎಸ್‌ಪಿಬಿ ಇಂದಿನ ಅದೆಷ್ಟೋ ಕಲಾವಿದರಿಗೆ ಮಾದರಿ.
– ಗುರುಕಿರಣ್, ಸಂಗೀತ ನಿರ್ದೇಶಕ
ಇದನ್ನೂ ಓದಿ: ಕನ್ನಡ ಹಾಡುಗಳು ಅಂದರೆ ಎಸ್‌ಪಿಬಿ ಎನ್ನುವಷ್ಟು ಹುಚ್ಚು ಹಿಡಿಸಿದ್ದ ಅವರೂಪದ ಗಾಯಕ: ಕವಿರಾಜ್