ನವದೆಹಲಿ: ಕೋವಿಡ್ ನಿಂದ ರಕ್ಷಿಸಿಕೊಳ್ಳಲು ತಾಯಿಯೊಬ್ಬಳು ತನ್ನ 10 ವರ್ಷದ ಮಗನೊಂದಿಗೆ ಮನೆಯಲ್ಲೇ ಸ್ವಯಂ ದಿಗ್ಬಂಧನ ಮಾಡಿಕೊಂಡು ವಾಸಿಸುತ್ತಿದ್ದ ಘಟನೆ ಗುರುಗ್ರಾಮದಲ್ಲಿ ಬೆಳಕಿಗೆ ಬಂದಿದೆ.
ಘಟನೆ ಹಿನ್ನೆಲೆ:
ಕೋವಿಡ್ ಮೊದಲ ಅಲೆಯ ವೇಳೆ 35 ವರ್ಷದ ಮಹಿಳೆ, ಕೋವಿಡ್ ಹರಡುತ್ತಿರುವ ವೇಗದ ಭೀತಿಯಿಂದ ತನ್ನ 10 ವರ್ಷದ ಮಗನೊಂದಿಗ ಮನೆಯಲ್ಲೇ ವಾಸುತ್ತಿದ್ದರು. ಗಂಡ ಕೂಡ ತನ್ನ ಪತ್ನಿ,ಮಗನೊಂದಿಗೆ ಮನೆಯಲ್ಲೇ ವಾಸುತ್ತಿದ್ದರು. ಇದಾದ ಬಳಿಕ ಎರಡನೇ ಅಲೆಯ ವೇಳೆ ಗಂಡ ಕೆಲಸಕ್ಕೆ ಹೋದ ಮೇಲೆ ಮನೆಗೆ ವಾಪಾಸ್ ಬರುವಾಗ, ಪತ್ನಿ ಮನೆಯ ಎಲ್ಲಾ ಬಾಗಿಲುಗಳನ್ನು ಬಂದ್ ಮಾಡಿ, ಗಂಡ ಮನೆಯ ಒಳಗೆ ಬಾರದಂತೆ ಮಾಡಿದ್ದರು. ಈ ಕಾರಣದಿಂದ ಗಂಡ ಪಕ್ಕದಲ್ಲೇ ಬೇರೆ ಮನೆಯೊಂದನ್ನು ಬಾಡಿಗೆ ಪಡೆದು ಒಂದೂವರೆ ವರ್ಷ ಅಲ್ಲೇ ವಾಸುತ್ತಿದ್ದರು.
ಈ ಸಂಬಂಧ ಪೊಲೀಸರಿಗೆ ಮಾಹಿತಿ ನೀಡಿದ್ದರೂ, ಆ ವೇಳೆಗೆ ಪೊಲೀಸರು ಇದು ಕೌಟುಂಬಿಕ ವಿಷಯವೆಂದು ಹೇಳಿ ಪ್ರಕರಣವನ್ನು ಅಲ್ಲಿಗೆ ಕೈ ಬಿಟ್ಟಿದ್ದರು. ಇದಾದ ಕೆಲ ಸಮಯದ ಬಳಿಕ ಮತ್ತೆ ಪೊಲೀಸರಿಗೆ ಈ ಬಗ್ಗೆ ಮಾಹಿತಿ ನೀಡಿದ್ದರು. ಪೊಲೀಸರು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿಗಳ ಸಹಾಯದಿಂದ ಸ್ವಯಂ ಬಂಧಿಯಾಗಿದ್ದ ತಾಯಿ ಮಗನನ್ನು ಮನೆಯಿಂದ ಹೊರಕ್ಕೆ ತಂದು ಆಸ್ಪತ್ರೆಗೆ ದಾಖಲಿಸಿದ್ದಾರೆ.
ಮೂರು ವರ್ಷದಿಂದ ಮನೆಯೊಳಗಿದ್ದ ಗಲೀಜು, ಕಸವನ್ನು ನೋಡಿ ಪೊಲೀಸರು ಬೆಚ್ಚಿ ಬಿಚ್ಚಿದ್ದಾರೆ. ತನ್ನ ಪತ್ನಿ ಮಾನಸಿಕವಾಗಿ ಅಸ್ವಸ್ಥತೆಯಾಗಿದ್ದಾಳೆ ಎಂದು ಗಂಡ ಪೊಲೀಸರಿಗೆ ಹೇಳಿದ್ದಾರೆ.
ರಕ್ಷಣಾ ಕಾರ್ಯಚರಣೆ ವೇಳೆ ಮಹಿಳೆ,ನಮ್ಮನ್ನು ಹೊರಗೆ ತಂದರೆ ನಾನು ಮಗನನ್ನು ಕೊಲ್ಲುತ್ತೇನೆ ಎಂದು ಬೆದರಿಸಿದ್ದರು ಎಂದು ಪೊಲೀಸರು ಹೇಳಿದ್ದಾರೆ.