Advertisement

ಸದ್ಗುರುವಿನಲ್ಲಿ ಶ್ರದ್ಧೆ ಇದ್ದರೆ ಗುರು ಕೃಪೆ

11:34 AM Dec 04, 2018 | Team Udayavani |

ಬೀದರ: ಸಿದ್ಧಾರೂಢ ಮಠದ ಶಿವಕುಮಾರ ಮಹಾಸ್ವಾಮಿಗಳ 74ನೇ ಜನ್ಮದಿನ ಮಹೋತ್ಸವ ಸಡಗರ ಸಂಭ್ರಮದಿಂದ ನಡೆಯಿತು. ತನ್ನಿಮಿತ್ತ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ಶಿವಕುಮಾರ ಶ್ರೀಗಳು ಭಕ್ತರನ್ನುದ್ದೇಶಿಸಿ ಮಾತನಾಡಿ, ವಸ್ತು ಫಲ ಕೊಡುವುದಿಲ್ಲ ನಂಬಿಕೆ ಫಲ ಕೊಡುತ್ತದೆ. ಸದ್ಗುರುವಿನಲ್ಲಿ ಶ್ರದ್ಧೆ ಇದ್ದರೆ ಮಾತ್ರ ಗುರು ಕೃಪೆಯಾಗುತ್ತದೆ. ದೇವರ ಸೃಷ್ಟಿಯಲ್ಲಿ ದುಃಖವೇ ಇಲ್ಲ. ಮನುಷ್ಯ ಹುಟ್ಟಿದ್ದು ಸುಖದಲ್ಲಿ, ಬದುಕಿದ್ದು ಸುಖದಲ್ಲಿ, ಸಾಯುವುದೂ ಸುಖಕ್ಕಾಗಿಯೆ ಎಂದರು.

Advertisement

ನಾಗಪುರದ ಮನಿಶಾತಾಯಿ ಮಾತನಾಡಿ, ಪರಬ್ರಹ್ಮ ತತ್ವ ಬೋಧನೆ ಮಾಡಿ ಶಿಷ್ಯರ ಕಲ್ಯಾಣಕ್ಕಾಗಿ ಜೀವನ ಮುಡುಪಾಗಿಟ್ಟ ಮಹಾನ್‌ ಗುರು. ಸದ್ಗುರು ಚರಣಕ್ಕೆ ತನು-ಮನ- ಧನ ಸಮೇತ ಗುರುವಿಗೆ ಶರಣಾಗತನಾದ ಭಕ್ತನ ಜೀವನ ಧನ್ಯ ಎಂದರು.

ಗುರು ದೇವಾಶ್ರಮದ ಶ್ರೀ ಗಣೇಶಾನಂದ ಮಹಾರಾಜ ಮಾತನಾಡಿ, ಜೀವನದ ಉದ್ದೇಶ ಪೂರ್ಣಗೊಳ್ಳಬೇಕೆಂದರೆ ಪರಮಾರ್ಥ ಮಾರ್ಗದಲ್ಲಿ ಸಾಗುವುದು ಅತಿ ಅವಷ್ಯಕ. ಮಾನವ ಜನ್ಮ ಶ್ರೆಷ್ಠ. ಅದನ್ನು ಹಾಳುಮಾಡಿಕೊಳ್ಳಬೇಡಿ ಎಂದು ಸಂದೇಶ ನೀಡಿದರು. ಇದೇ ವೇಳೆ ಶ್ರೀಗಳಿಗೆ ನಾಣ್ಯಗಳಿಂದ ತುಲಾಭಾರ ಸೇವೆ ನೆರವೇರಿಸಲಾಯಿತು. ನಂತರ ಮಂಗಳಾರತಿ ಮಾಡಿ ಶ್ರೀಗಳಿಗೆ ಅಭಿನಂದನೆ ಸಲ್ಲಿಸಲಾಯಿತು. ಕಲಬರ್ಗಿಯ ಮಾತಾ ಲಕ್ಷ್ಮೀ ದೇವಿ, ಶಂಕರಾನಂದ ಸ್ವಾಮಿ, ದಯಾನಂದ ಸ್ವಾಮಿ, ಅದ್ವೈತಾನಂದ ಸ್ವಾಮಿ, ಸದ್ರುಪಾನಂದ ಸ್ವಾಮಿ, ಮಾತಾ ಸಿದ್ದೇಶ್ವರಿ, ಆನಂದಮಯಿ ತಾಯಿ, ಸುಶಾಂತ ತಾಯಿ, ಜ್ಞಾನೇಶ್ವರಿ ತಾಯಿ, ವಿದ್ಯಾವತಿ ತಾಯಿ, ಸಂಗೀತಾ ತಾಯಿ, ಗೋಪಾಲ ಶಾಸ್ತ್ರಿಗಳು, ಸಂಸ್ಥೆಯ ಆಡಳಿತ ಮಂಡಳಿ ಸದಸ್ಯ ಡಾ| ಚನ್ನಬಸಪ್ಪ ಹಾಲಹಳ್ಳಿ, ಬಸವರಾಜ ಜಾಬಶೆಟ್ಟಿ, ಬಿ.ಜಿ.ಶೆಟಕಾರ, ಮಡಿವಾಳಪ್ಪ ಗಂಗಶೆಟ್ಟಿ, ಪ್ರಭುಶೆಟ್ಟಿ ಮುದ್ದಾ, ಶಿವಶರಣಪ್ಪ ಸಾವಳಿಗಿ, ಶರಣಪ್ಪ ತಿರ್ಲಾಪುರೆ, ಕರಬಸಪ್ಪಾ ಮುಸ್ತಾಪುರ, ಉದಯಭಾನು ಹಲವಾಯಿ, ಸುಭಾಷ ಪಾಟಿಲ, ಸುಭಾಷ ಉಪ್ಪೆ, ಭಾರತಿಬಾಯಿ ಕಣಜಿ,
ಡಾ| ವಿ.ಎಸ್‌. ಪಾಟೀಲ, ಡಾ| ಹಾವಗಿರಾವ ಮೈಲಾರೆ, ಡಾ| ಮುಲಿಮನಿ, ಅಮರನಾಥ ಕಣಜಿ, ಸಹಜಾನಂದ ಕಂದಗೊಳ್‌, ಸಿದ್ಧಾರೂಢ ಕಂದಗೊಳ್‌, ಗುರುಲಿಂಗಪ್ಪ ಮಂಠಾಳೆ, ಡಾ|ಚಂದ್ರಪ್ಪ ಭತಮುರ್ಗೆ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next