ಪುಣೆ: ಶ್ರೀ ಗುರುದೇವ ಸೇವಾ ಬಳಗ ಮತ್ತು ಶ್ರೀ ವಜ್ರಮಾತಾ ಮಹಿಳಾ ವಿಕಾಸ ಕೇಂದ್ರ ಪುಣೆ ಇದರ ವತಿಯಿಂದ ಜು. 27 ರಂದು ಗುರು ಪೂರ್ಣಿಮೆ ಆಚರಣೆಯು ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಜರಗಿತು.
ಪುಣೆ ಬಳಗದ ಸಲಹೆಗಾರ, ಮಾಜಿ ಅಧ್ಯಕ್ಷ ಉಷಾ ಕುಮಾರ್ ಶೆಟ್ಟಿ ಅವರ ನೇತೃತ್ವದಲ್ಲಿ ನಗರದ ಬೀಬೆವಾಡಿಯ ಸರ್ಗಮ್ ಅಪಾಟೆ¾ìಂಟ್‌ನಲ್ಲಿ ನಡೆದ ಕಾರ್ಯಕ್ರಮವು ಪ್ರಾರ್ಥನೆಯ ಮೂಲಕ ಪ್ರಾರಂಭಗೊಂಡಿತು. ಆನಂತರ ಶ್ರೀ ವಜ್ರಮಾತ ಮಹಿಳಾ ವಿಕಾಸ ಕೇಂದ್ರದ ಸದೆಸ್ಯೆಯರು ಹಾಗು ಬಳಗದ ಸದಸ್ಯರಿಂದ, ಬಳಗದ ಭಜನಾ ಮಂಡಳಿಯ ಗುರುಗಳಾದ ದಾಮೋದರ ಬಂಗೇರ ಅವರ ಮುಂದಾಳತ್ವದಲ್ಲಿ ಭಜನಾ ಕಾರ್ಯಕ್ರಮ ನಡೆಯಿತು. ಕೊನೆಯಲ್ಲಿ ಮಹಾಮಂಗಳಾರತಿ, ಪ್ರಸಾದ ವಿತರಣೆಯನ್ನು ಆಯೋಜಿಸಲಾಗಿತ್ತು. ಉಷಾ ಕುಮಾರ್ ಶೆಟ್ಟಿ, ಶೋಭಾ ಯು. ಶೆಟ್ಟಿ ದಂಪತಿ, ಪುಣೆ ಬಳಗದ ಅಧ್ಯಕ್ಷ ಸದಾನಂದ ಕೆ. ಶೆಟ್ಟಿ, ವಜ್ರಮಾತ ಮಹಿಳಾ ವಿಕಾಸ ಕೇಂದ್ರದ ಅಧ್ಯಕ್ಷೆ ಪ್ರೇಮಾ ಎಸ್. ಶೆಟ್ಟಿ ಹಾಗು ಸೇರಿದ ಗುರು ಭಕ್ತರೆಲ್ಲರೂ ಗುರುದೇವರ ಫೋಟೋಗೆ ಆರತಿ ಬೆಳಗುವುದರ ಮೂಲಕ ಗುರುವಂದನೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಪುಣೆ ಬಳಗದ ಅಧ್ಯಕ್ಷ ಸದಾನಂದ ಕೆ. ಶೆಟ್ಟಿ ಅವರು, ನಮ್ಮ ಜೀವನದ ಸಾರ್ಥಕತೆಗೆ ಉತ್ತಮ ಸಂಸ್ಕಾರ, ಸತ್ಯ ಧರ್ಮ, ಶಾಂತಿ ಸ್ನೇಹಮಯ ಜೀವನ ಬಹುಮುಖ್ಯವಾಗಿದೆ. ಅಂತಹ ಸುಸಂಸ್ಕೃತಿಯು ಗುರುವಿನ ಮುಖಾಂತರ ಸಿಗಲು ಸಾಧ್ಯ. ಸಮಾಜದಲ್ಲಿ ಉತ್ತಮ ವ್ಯಕ್ತಿಯಾಗಿ ರೂಪುಗೊಳ್ಳಲು ಗುರು ಮುಖ್ಯ. ಹಾಗೆಯೇ ಆಯಾಯ ಪರಿಸರದಲ್ಲಿ ಸ್ವಾಸ್ಥ ಸಮಾಜ ನಿರ್ಮಾಣಕ್ಕೆ ಗುರುವಿನ ಮಾರ್ಗದರ್ಶನ, ಬದುಕಿನುದ್ದಕ್ಕೂ ಸತ್ಕಾರ್ಮಗಳನ್ನು ಮಾಡಲು ನಮಗೆ ಗುರುವಿನ ಉಪದೇಶ, ಪ್ರೇರಣೆ ಅಗತ್ಯವಾಗಿದೆ. ಸನಾತನ ಧರ್ಮದಲ್ಲಿ ಪುರಾತನ ಕಾಲದಿಂದಲೂ ಗುರುವಿಗೆ ಮಹತ್ವದ ಸ್ಥಾನವನ್ನು ನೀಡಲಾಗಿದೆ. ದಕ್ಷಿಣ ಗಾಣಗಾಪುರ ಓಡಿಯೂರು ಕ್ಷೇತ್ರದ ಗುರುವರ್ಯರಾದ ಶ್ರೀ ಗುರುದೇವಾನಂದ ಸ್ವಾಮೀಜಿಯವರ ಮಾರ್ಗದರ್ಶನದಂತೆ ಪುಣೆ ಶ್ರೀ ಗುರುದೇವ ಸೇವಾ ಬಳಗವು ಧಾರ್ಮಿಕ, ಸಾಮಾಜಿಕ ಕಾರ್ಯಕ್ಷೇತ್ರದಲ್ಲಿ ಸೇವೆಗೈಯುತ್ತಿದೆ. ಪ್ರತಿ ವರ್ಷವೂ ಗುರು ಪೂರ್ಣಿಮೆ ಆಚರಣೆಯನ್ನು ನಾವು ಪುಣೆಯಲ್ಲಿ ಆಯೋಜಿಸಿ ಗುರು ವಂದನೆಯನ್ನು ಸಲ್ಲಿಸುತ್ತೇವೆ. ಇಂದು ಕೂಡ ನಾವೆಲ್ಲ ಒಂದೇ ಕುಟುಂಬದಂತೆ ಇಲ್ಲಿ ಒಂದಾಗಿ ಸೇರಿ ಗುರು ಪೂರ್ಣಿಮೆಯ ಆಚರಿಸಿ ಗುರುಕೃಪೆಗೆ ಪಾತ್ರರಾಗಿದ್ದೇವೆ ಎಂದರು. ಬಳಗದ ಗೌರವ ಕಾರ್ಯದರ್ಶಿ ಎನ್. ರೋಹಿತ್ ಶೆಟ್ಟಿ ಅವರು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿ ಪುಣೆ ಶ್ರೀ ಗುರುದೇವ ಸೇವಾ ಬಳಗದ ಧಾರ್ಮಿಕ ಕಾರ್ಯಕ್ರಮಗಳ ಬಗ್ಗೆ ತಿಳಿಸಿದರು. ಈ ಸಂದರ್ಭದಲ್ಲಿ ಪುಣೆ ಶ್ರೀ ಗುರುದೇವ ಬಳಗದ ಭಜನಾ ಮಂಡಳಿಯ ಗುರು ದಾಮೋದರ ಬಂಗೇರ ಮತ್ತು ಸರೋಜಿನಿ ಬಂಗೇರ ದಂಪತಿಯನ್ನು ಶ್ರೀ ಗುರುದೇವ ಸೇವಾ ಬಳಗ ಮತ್ತು ವಜ್ರಮಾತ ಮಹಿಳಾ ವಿಕಾಸ ಕೇಂದ್ರದ ವತಿಯಿಂದ ಉಷಾ ಕುಮಾರ್ ಶೆಟ್ಟಿ ದಂಪತಿ, ಬಳಗದ ಪದಾಧಿಕಾರಿಗಳು ಶಾಲು ಹೊದೆಸಿ, ಫಲಪುಷ್ಪ ಕಾಣಿಕೆಯನ್ನು ನೀಡಿ ಸತ್ಕರಿಸಿದರು.
ಬಳಗದ ಪ್ರಮುಖರಾದ ಮಾಜಿ ಅಧ್ಯಕ್ಷ ನಾರಾಯಣ ಶೆಟ್ಟಿ, ಬಳಗದ ಸಲಹೆಗಾರ ಪದ್ಮನಾಭ ಶೆಟ್ಟಿ, ಉಪಾಧ್ಯಕ್ಷ ಪ್ರಭಾಕರ ಶೆಟ್ಟಿ ತಮನ್ನಾ, ಕೋಶಾಧಿಕಾರಿ ರಂಜಿತ್ ಶೆಟ್ಟಿ, ಕಾರ್ಯಕಾರಿ ಸಮಿತಿಯ ಸದಸ್ಯರುಗಳಾದ ಜಗದೀಶ್ ಹೆಗ್ಡೆ, ಉಮೇಶ್ ಶೆಟ್ಟಿ, ನಾಗರಾಜ ಶೆಟ್ಟಿ, ವಿಟuಲ್ ಶೆಟ್ಟಿ, ಸುರೇಶ್ ಶೆಟ್ಟಿ, ಉಮೇಶ್ ಶೆಟ್ಟಿ, ಬಾಲಕೃಷ್ಣ ಶೆಟ್ಟಿ, ದಿನೇಶ್ ಶೆಟ್ಟಿ, ದಿನೇಶ್ ಶೆಟ್ಟಿ ಬಜಗೋಳಿ, ರಾಜು ಹೆಗ್ಡೆ, ವಸಂತ್ ಶೆಟ್ಟಿ, ಪ್ರಮೋದ್ ರಾವುತ್, ಕೇಂದ್ರದ ಪ್ರಮುಖರಾದ ಉಪಾಧ್ಯಕ್ಷೆ ಜಯಲಕ್ಷ್ಮೀ ಪಿ. ಶೆಟ್ಟಿ, ಕಾರ್ಯದರ್ಶಿ ವೀಣಾ ಡಿ. ಶೆಟ್ಟಿ, ವೀಣಾ ಪಿ. ಶೆಟ್ಟಿ, ಸುಧಾ ಎನ್. ಶೆಟ್ಟಿ, ಸರೋಜಿನಿ ಡಿ. ಬಂಗೇರ, ರಜನಿ ಹೆಗ್ಡೆ, ಲೀಲಾ ಶೆಟ್ಟಿ, ಸುಮನಾ ಎಸ್. ಹೆಗ್ಡೆ, ಸುಜಾತ ಶೆಟ್ಟಿ, ಅಮಿತಾ ಪಿ. ಪೂಜಾರಿ, ಸುವರ್ಣಲತಾ ಜೆ. ಹೆಗ್ಡೆ, ಆಶಾ ವಿ. ಶೆಟ್ಟಿ, ಅರ್ಚನಾ ಶೆಟ್ಟಿ, ಶಾರದಾ ಹೆಗ್ಡೆ, ಗೀತಾ ಶೆಟ್ಟಿ, ನಯನಾ ಶೆಟ್ಟಿ, ಸ್ನೇಹಲತಾ ಅರ್. ಶೆಟ್ಟಿ, ಶ್ವೇತಾ ಎಚ್. ಮೂಡಬಿದ್ರಿ, ಸ್ನೇಹಲ್ ಪಿ. ಶೆಟ್ಟಿ. ಸುಶೀಲಾ ಮೂಲ್ಯ, ಮಮತಾ ಶೆಟ್ಟಿ ಹಾಗು ಹೆಚ್ಚಿನ ಸಂಖ್ಯೆಯ ಗುರು ಭಕ್ತರು ಉಪಸ್ಥಿತರಿದ್ದರು. ಕಾರ್ಯದರ್ಶಿ ರೋಹಿತ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು. ಕೊನೆಯಲ್ಲಿ ಉಪಾಹಾರದ ವ್ಯವಸ್ಥೆಯನ್ನು ಆಯೋಜಿಸಲಾಗಿತ್ತು.
ಚಿತ್ರ-ವರದಿ : ಹರೀಶ್ ಮೂಡಬಿದ್ರೆ