Advertisement

ಗುರು ನಾನಕ್‌ ಮಹಾನ್‌ ಆಧ್ಯಾತ್ಮ ಚಿಂತಕ

12:17 AM Nov 13, 2019 | Lakshmi GovindaRaju |

ಬೆಂಗಳೂರು: ಗುರುನಾನಕ್‌ ಭ್ರಾತೃತ್ವ ಹಾಗೂ ದೇಶ ಭಕ್ತಿಯ ಮೌಲ್ಯಗಳನ್ನು ಸಾರಿದ ಮಹಾನ್‌ ಆಧ್ಯಾತ್ಮ ಚಿಂತಕ ಎಂದು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ತಿಳಿಸಿದರು. ಹಲಸೂರಿನ ಸಿಖ್‌ ಗುರುದ್ವಾರ ಮಂದಿರದಲ್ಲಿ ಮಂಗಳವಾರ ನಡೆದ ಸಿಖ್‌ ಧರ್ಮಗುರು ಗುರುನಾನಕ್‌ ಅವರ 550 ನೇ ಜಯಂತಿ ಕಾರ್ಯಕ್ರಮದಲ್ಲಿ ಸಿಖ್‌ ಸಮುದಾಯಕ್ಕೆ ಶುಭಾಶಯ ಕೋರಿ ಮಾತನಾಡಿದರು.

Advertisement

ಪ್ರೀತಿ, ಶಾಂತಿ, ಸತ್ಯದ ಕುರಿತು ಬೋಧಿಸಿದ ಗುರುನಾನಕ್‌ ಅವರು ಮಾನವನ ನಡುವೆ ಸದ್ಭಾವನೆ ಹಾಗೂ ವಿಶ್ವಾಸ ಉಳಿಸಿಕೊಂಡು ಹೋಗುವಂತೆ ತಿಳಿಸಿದ್ದಾರೆ. ಧರ್ಮ ಸಮನ್ವಯ ಸಾರಿದ ಗುರುನಾನಕರು ಭ್ರಾತೃತ್ವ ಹಾಗೂ ದೇಶ ಭಕ್ತಿಯ ಮೌಲ್ಯಗಳನ್ನು ಎಲ್ಲರಲ್ಲಿ ತುಂಬಿ ಸಹೋದರತೆ, ಸರ್ವಧರ್ಮ ಸಮಾನತೆ ಸಂದೇಶ ಸಾರಿದರು ಎಂದು ತಿಳಿಸಿದರು.

ಲಿಂಗಾಯತ ಧರ್ಮದಿಂದ ಪ್ರೇರಿತರಾಗಿ ದಾಸೋಹ ತತ್ವವನ್ನು ಅನುರಿಸುವಂತೆ ಎಲ್ಲರನ್ನು ಪ್ರೇರೇಪಿಸಿದ್ದರು. ಅಸ್ಪೃಶ್ಯತೆ ಖಂಡಿಸಿದ ಗುರುನಾನಕ್‌ ಅವರು ಗುರುದ್ವಾರದಲ್ಲಿ ಎಲ್ಲಾ ಜಾತಿಯವರಿಗೂ ಬೋಧನೆ, ಭೋಜನ ವ್ಯವಸ್ಥೆ ಕಲ್ಪಿಸಿದ್ದರು. ಅವರ ಈ ಸಮಾನತೆ ಸಂದೇಶ ಹಾಗೂ ಬಡವರ ಬಗ್ಗೆ ಕಾಳಜಿ ಎಲ್ಲರಿಗೂ ಆದರ್ಶವಾಗಬೇಕು. ಕವಿ, ಗಾಯಕ, ಸಮಾಜ ಸುಧಾರಕ, ಆಧ್ಯಾತ್ಮ ಚಿಂತಕವಾಗಿ ಸಮಾಜಕ್ಕೆ ಸಾಕಷ್ಟು ಕೊಡುಗೆ ನೀಡಿದ್ದಾರೆ.

ಇಂತಹ ಮಹಾಚೇತನಕ್ಕೆ ನಮಿಸೋಣ ಶಾಂತಿ ಸಹಬಾಳ್ವೆ ದಾರಿಯಲ್ಲಿ ಎಲ್ಲರೂ ಒಟ್ಟಾಗಿ ನಡೆಯೋಣ. ಇಂದು ಸಿಖ್‌ ಸಮುದಾಯ ಭಕ್ತಿ ಭಾವದಿಂದ ಭಾಗವಹಿಸಿದ್ದು, ಎಲ್ಲರಿಗೂ ಗುರು ನಾನಕರ ಆಶಿರ್ವಾದ ಲಭಿಸಲಿ ಎಂದರು. ಕಾರ್ಯಕ್ರಮಕ್ಕೆ ಆಗಮಿಸಿದ ಮುಖ್ಯಮಂತ್ರಿಗಳು ತಲೆಗೆ ಕೇಸರಿ ಬಣ್ಣದ ಪಟಕಾ ತೊಟ್ಟು, ಧರ್ಮದ ಹಿರಿಯರೊಟ್ಟಿಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗಿಯಾದರು.

Advertisement

Udayavani is now on Telegram. Click here to join our channel and stay updated with the latest news.

Next