Advertisement

Narayana Guru; ಉಡುಪಿಯಲ್ಲಿ “ಗುರು ಸಂದೇಶದ ಸಾಮರಸ್ಯ ಜಾಥಾ’

10:55 PM Sep 03, 2023 | Team Udayavani |

ಉಡುಪಿ: ಸಮಾಜ ಸುಧಾರಣೆಯ ಸಂತ ಬ್ರಹ್ಮಶ್ರೀ ನಾರಾಯಣ ಗುರುಗಳು ಸಾರಿದ ಸಂದೇಶವನ್ನು ಜನಸಾಮಾನ್ಯರಿಗೆ ತಿಳಿಸಿ ಜಾಗೃತಿ ಮೂಡಿಸುವ ಸದುದ್ದೇಶದಿಂದ ಗುರುಗಳ 169ನೇ ಜನ್ಮದಿನದ ಪ್ರಯುಕ್ತ ಜಿಲ್ಲಾ ಬಿಲ್ಲವ ಯುವ ವೇದಿಕೆ ವತಿಯಿಂದ “ಗುರು ಸಂದೇಶದ ಸಾಮರಸ್ಯ ಜಾಥಾ’ವು ರವಿವಾರ ಬನ್ನಂಜೆ ಬಿಲ್ಲವ ಸೇವಾ ಸಂಘದಿಂದ ಆರಂಭಗೊಂಡು ಕಟಪಾಡಿ ಶ್ರೀ ವಿಶ್ವನಾಥ ಕ್ಷೇತ್ರದವರೆಗೂ ನಡೆಯಿತು.

Advertisement

ಕಲ್ಯಾಣಪುರ ಪಕ್ಕಿಬೆಟ್ಟು ಶ್ರೀ ಬ್ರಹ್ಮಬೈದರ್ಕಳ ಗರೋಡಿ ಅಧ್ಯಕ್ಷ ವಿಟಲ ಪೂಜಾರಿ, ನಗರಸಭೆ ಮಾಜಿ ಅಧ್ಯಕ್ಷೆ ಆನಂದಿ, ಸಮಾಜ ಸೇವಕರಾದ ಈಶ್ವರ ಮಲ್ಪೆ, ಸತೀಶ ಸುವರ್ಣ ಅವರು ನಾರಾಯಣಗುರುಗಳ ಮೂರ್ತಿಯಿರುವ ಸಂದೇಶ ಸಾರುವ ವಾಹನಕ್ಕೆ ಪ್ರದಕ್ಷಿಣೆ ಬಂದು ತೆಂಗಿನಕಾಯಿ ಒಡೆದು, ಹಳದಿ ಬಾವುಟ ತೋರಿಸುವ ಮೂಲಕ ಚಾಲನೆ ನೀಡಿದರು.

ಗುರುಗಳ ಮೂರ್ತಿಗೆ ಮಾಲಾರ್ಪಣೆಗೈದ ಮಾಜಿ ಸಚಿವ ಪ್ರಮೋದ್‌ ಮಧ್ವರಾಜ್‌ ಮಾತನಾಡಿ, ಗುರುಗಳ ಬೋಧನೆಯು ಏಕತೆ, ಸಹಾನುಭೂತಿ ಮತ್ತು ತಾರತಮ್ಯದ ತತ್ತ್ವಗಳ ಮೇಲೆ ಕೇಂದ್ರೀಕೃತವಾಗಿವೆ. ಜಾತಿ ಮತ್ತು ಧರ್ಮದ ಅಡೆತಡೆಗಳನ್ನು ಮೀರಿದ ಮಾನವೀಯತೆಯ ಏಕತೆಯನ್ನು ಸಾರಿದ್ದರು. ಸಮಾನತೆ ಮತ್ತು ಏಕತೆಯ ತತ್ತ್ವವನ್ನು ಜನಮಾನಸಕ್ಕೆ ನೀಡಿದ ಗುರುಗಳ ಸಂದೇಶವನ್ನು ಅಳವಡಿಸಿಕೊಂಡು ಬದುಕು ಸಾಗಿಸಬೇಕಾದ ಕರ್ತವ್ಯ ನಮ್ಮ ಮೇಲಿದೆ ಎಂದರು.

ನಗರಸಭೆ ಮಾಜಿ ಅಧ್ಯಕ್ಷೆ ಆನಂದಿ, ಸೌಹಾರ್ದದಿಂದ ಬದುಕಿ ಸಮಾಜದ ಅಭಿವೃದ್ಧಿಗೆ ಸಹಕಾರಿಯಾಗುವ ಮೂಲಕ ಗುರುಗಳ ಸಂದೇಶಕ್ಕೆ ಬದ್ಧರಾಗೋಣ ಎಂದರು.ಗುರುಗಳ ಸಂದೇಶವನ್ನು ಚಾಚು ತಪ್ಪದೆ ಪಾಲಿಸಿದರೆ ಬದುಕು ಸಾರ್ಥಕವಾಗುವುದು ಎಂದು ಈಶ್ವರ ಮಲ್ಪೆ ತಿಳಿಸಿದರು.

ಜಿಲ್ಲಾ ಬಿಲ್ಲವ ವೇದಿಕೆ ಅಧ್ಯಕ್ಷ ಪ್ರವೀಣ್‌ ಎಂ. ಪೂಜಾರಿ, ಬಿಲ್ಲವರ ಸೇವಾ ಸಂಘ ಬನ್ನಂಜೆ ಅಧ್ಯಕ್ಷ ಮಾಧವ ಬನ್ನಂಜೆ, ಉದ್ಯಮಿಗಳಾದ ಚಂದ್ರಶೇಖರ ಸುವರ್ಣ, ಭಾಸ್ಕರ ಜತ್ತನ್‌, ಪ್ರಭಾಕರ ಪೂಜಾರಿ, ಸಂಘದ ಗೌರವಾಧ್ಯಕ್ಷ ದಿವಾಕರ ಸನಿಲ್‌, ಸಂಘಟನ ಕಾರ್ಯದರ್ಶಿ ಶರತ್‌ ಕಲ್ಯಾಣಪುರ, ಉಪಾಧ್ಯಕ್ಷ ಮಹೇಶ ಕುಮಾರ ಮಲ್ಪೆ, ವಿವಿಧ ಭಾಗದ ಬಿಲ್ಲವರ ಸೇವಾ ಸಂಘಗಳ ಅಧ್ಯಕ್ಷರು, ಪದಾಧಿಕಾರಿಗಳು ಮೊದಲಾದವರು ಉಪಸ್ಥಿತರಿದ್ದರು.
ಕಟಪಾಡಿ ಕ್ಷೇತ್ರದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಬಿ.ಎನ್‌. ಶಂಕರ ಪೂಜಾರಿ ನೇತೃತ್ವದಲ್ಲಿ ಜಾಥಾ ಸಮಾಪನಗೊಂಡಿತು. ಜಿ.ಪಂ. ಮಾಜಿ ಸದಸ್ಯೆ ಗೀತಾಂಜಲಿ ಸುವರ್ಣ ಮೊದಲಾದವರು ಭಾಗವಹಿಸಿದ್ದರು. ದಯಾನಂದ ಕರ್ಕೇರ ಉಗ್ಗೇಲ್‌ಬೆಟ್ಟು ನಿರೂಪಿಸಿದರು. ಕಾರ್ಯದರ್ಶಿ ವಿಶ್ವನಾಥ ಕಲ್ಮಾಡಿ ವಂದಿಸಿದರು.

Advertisement

ಸಾಮರಸ್ಯ ಮೆರೆದ ಜಾಥಾ
ಗುರು ಸಂದೇಶದ ಸಾಮರಸ್ಯ ಜಾಥಾವು ಸರ್ವಧರ್ಮಗಳ ಸಾಮರಸ್ಯವನ್ನು ಸಾರುವಂತಿತ್ತು. ಹೂಡೆಯಲ್ಲಿ ಮುಸ್ಲಿಮರು ಮತ್ತು ಕ್ರೈಸ್ತರು ಶುಭ ಹಾರೈಕೆಯ ಬ್ಯಾನರ್‌ ಕಟ್ಟಿ, ಉಪಾಹಾರ, ತಂಪು ಪಾನೀಯ ವ್ಯವಸ್ಥೆ ಮಾಡಿದ್ದರು. ಜಾಥಾ ಬರುವ ದಾರಿಯಲ್ಲಿ ಗುರು ಮಂದಿರದ ವತಿಯಿಂದ ಸ್ವಾಗತಿಸಿ, ಗುರುಪೂಜೆ ನಡೆಸಿದರು.

Advertisement

Udayavani is now on Telegram. Click here to join our channel and stay updated with the latest news.

Next