Advertisement

ಜ್ಞಾನವೆಂಬ ಬೆಳಕನ್ನು ನೀಡುವ ಶಕ್ತಿಯೇ ಗುರು: ಪ್ರಭಾಕರ ಶೆಟ್ಟಿ

05:37 PM Jul 27, 2021 | Team Udayavani |

ಪುಣೆ, ಜು. 26: ಶ್ರೀ ಗುರುದೇವ ಸೇವಾ ಬಳಗ ಮತ್ತು ಶ್ರೀ ವಜ್ರಮಾತಾ ಮಹಿಳಾ ವಿಕಾಸ ಕೇಂದ್ರ ಪುಣೆ ವತಿಯಿಂದ ಗುರು ಪೂರ್ಣಿಮೆ ಆಚರಣೆಯು ಜು. 25ರಂದು ಒಡಿಯೂರು ಸಂಸ್ಥಾನದ ಪರಮ ಪೂಜ್ಯ ಶ್ರೀ ಗುರುದೇವಾನಂದ ಸ್ವಾಮೀಜಿ ಅವರ ಶುಭಾಶೀರ್ವಾದದೊಂದಿಗೆ ಪುಣೆ ಶ್ರೀ ಗುರುದೇವ ಸೇವಾ ಬಳಗದ ಅಧ್ಯಕ್ಷ ಪ್ರಭಾಕರ ಶೆಟ್ಟಿ ಅವರ ಆಯೋಜನೆಯಲ್ಲಿ ಪುಣೆಯ ಹಿಂಜೆವಾಡಿಯ ಹೊಟೇಲ್‌ ಗ್ರ್ಯಾಂಡ್ ತಮನ್ನಾದಲ್ಲಿ ಜರಗಿತು.

Advertisement

ಪ್ರಾರ್ಥನೆ ಮತ್ತು ಗುರು ಪೂಜೆಯೊಂದಿಗೆ ಕಾರ್ಯಕ್ರಮವು ಪ್ರಾರಂಭಗೊಂಡಿತು. ಶ್ರೀ ವಜ್ರಮಾತಾ ಮಹಿಳಾ ವಿಕಾಸ ಕೇಂದ್ರದ ಸದಸ್ಯೆಯರು ಹಾಗೂ ಬಳಗದ ಸದಸ್ಯರಿಂದ, ಬಳಗದ ಭಜನ ಮಂಡಳಿಯ ಗುರುಗಳಾದ ದಾಮೋದರ ಬಂಗೇರ ಅವರ ನೇತೃತ್ವದಲ್ಲಿ ಭಜನೆ ನಡೆಯಿತು. ಮಹಾಮಂಗಳಾರತಿ, ಪ್ರಸಾದ ವಿತರಣೆ ನಡೆಯಿತು. ಪ್ರಭಾಕರ ಶೆಟ್ಟಿ ಹಾಗೂ ವೀಣಾ ಪಿ. ಶೆಟ್ಟಿ ದಂಪತಿ, ಪುಣೆ ಬಳಗದ ಮಾಜಿ ಅಧ್ಯಕ್ಷ ಸದಾನಂದ ಕೆ. ಶೆಟ್ಟಿ ಮತ್ತು ಸದಸ್ಯರು ಶ್ರೀ ವಜ್ರಮಾತಾ ಮಹಿಳಾ ವಿಕಾಸ ಕೇಂದ್ರದ ಸದಸ್ಯೆಯರು, ಗುರು ಭಕ್ತರು ಗುರುದೇವರ ಫೋಟೋಗೆ ಆರತಿ ಬೆಳಗುವುದರ ಮೂಲಕ ಗುರುವಂದನೆ ಸಲ್ಲಿಸಿದರು.

ಧಾರ್ಮಿಕ ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಬಳಗದ ಅಧ್ಯಕ್ಷ ಪ್ರಭಾಕರ ಶೆಟ್ಟಿ ಮಾತನಾಡಿ, ಒಡಿಯೂರು ಶ್ರೀಗಳ ಷಷ್ಠ್ಯಬ್ದ ಸಂಭ್ರಮದಲ್ಲಿ ಬಳಗದ ಅಧ್ಯಕ್ಷನಾಗಿ ಸೇವೆ ಮಾಡುವ ಸೌಭಾಗ್ಯ ಒದಗಿ ಬಂದಿದೆ. ನಮ್ಮ ಉದ್ಯಮದ ಜತೆಯಲ್ಲಿ ಅಧ್ಯಾತ್ಮ ಚಿಂತನೆಯೊಂದಿಗೆ ಮುನ್ನಡೆಯಬೇಕು.

ನಮ್ಮ ಜೀವನದ ಸಾರ್ಥಕತೆಗೆ ಉತ್ತಮ ಸಂಸ್ಕಾರ, ಸತ್ಯ-ಧರ್ಮ, ಶಾಂತಿ, ಸ್ನೇಹಮಯ ಜೀವನ ಸಾಧ್ಯವಾಗಬೇಕು. ಅಂತಹ ಸಂಸ್ಕೃತಿ ನಮಗೆ ಗುರುವಿನ ಮುಖಾಂತರ ಸಿಗಲು ಸಾಧ್ಯ. ಸಮಾಜದಲ್ಲಿ ಉತ್ತಮ ವ್ಯಕ್ತಿಯಾಗಿ ರೂಪುಗೊಳ್ಳಲು, ಉತ್ತಮ ಜೀವನಕ್ಕೆ ಗುರು ಮುಖ್ಯ. ನಮ್ಮ ಜೀವನದ ಪ್ರತಿ ಮಜಲುಗಳಲ್ಲಿಯೂ ನಮಗೆ ಬೇರೆ ಬೇರೆ ರೂಪದಲ್ಲಿ ಗುರು ಮುಖ್ಯ.

ಬದುಕಿನುದ್ದಕ್ಕೂ ಸತ್ಕರ್ಮಗಳನ್ನು ಮಾಡಲು ನಮಗೆ ಗುರುವಿನ ಉಪದೇಶ, ಪ್ರೇರಣೆಯಿಂದ ಮಾತ್ರ ಸಾಧ್ಯ. ಜ್ಞಾನವೆಂಬ ಬೆಳಕನ್ನು ನಿಡುವ ಮಹಾನ್‌ ಶಕ್ತಿಯೇ ಗುರು. ಒಡಿಯೂರು ಶ್ರೀಗಳ ಆಶೀರ್ವಾದ, ಮಾರ್ಗದರ್ಶನದೊಂದಿಗೆ ಪುಣೆ ಶ್ರೀ ಗುರುದೇವ ಸೇವಾ ಬಳಗವು ಧಾರ್ಮಿಕ ಸಾಮಾಜಿಕ ಕಾರ್ಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿದ್ದು, ಅಂತೆಯೇ ಶ್ರೀಗಳ ಷಷ್ಠ್ಯಬ್ದ ಸಂಭ್ರಮದ ಈ ಸಂದರ್ಭದಲ್ಲಿ ನಾವೆಲ್ಲರೂ ಒಂದೇ ಕುಟುಂಬದವರಂತೆ ಸೇರಿ ಗುರು ಸೇವಾ ಕಾರ್ಯಗಳಲ್ಲಿ ಕೈಜೋಡಿಸೋಣ ಎಂದರು.

Advertisement

ಪುಣೆ ಬಳಗದ ಮಾಜಿ ಅಧ್ಯಕ್ಷ ಸದಾನಂದ ಕೆ. ಶೆಟ್ಟಿ, ಗೌರವ ಸಲಹೆಗಾರರಾದ ಉಷಾಕುಮಾರ್‌ ಶೆಟ್ಟಿ, ಒಡಿಯೂರು ಶ್ರೀಗಳ ಷಷ್ಠ್ಯಬ್ದ ಪುಣೆ ಸಮಿತಿಯ ಗೌರವಾಧ್ಯಕ್ಷ ನಾರಾಯಣ ಶೆಟ್ಟಿ, ಶ್ರೀ ವಜ್ರಮಾತಾ ಮಹಿಳಾ ವಿಕಾಸ ಕೇಂದ್ರದ ಉಪಾಧ್ಯಕ್ಷೆ ಶೋಭಾ ಯು. ಶೆಟ್ಟಿ, ಕಾರ್ಯದರ್ಶಿ ವೀಣಾ ಪಿ. ಶೆಟ್ಟಿ ಉಪಸ್ಥಿತರಿದ್ದರು.

ಬಳಗದ ಗೌರವ ಕಾರ್ಯದರ್ಶಿ, ಒಡಿಯೂರು ಶ್ರೀಗಳ ಷಷ್ಠ್ಯಬ್ದ ಪುಣೆ ಸಮಿತಿಯ ಅಧ್ಯಕ್ಷ ಎನ್‌. ರೋಹಿತ್‌ ಶೆಟ್ಟಿ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿ, ಷಷ್ಠ್ಯಬ್ದ ಸಂಭ್ರಮದ ಪುಣೆ ಸಮಿತಿಯ ಕಾರ್ಯ ಯೋಜನೆಗಳು ಹಾಗೂ ಮುಂದೆ ಕೈಗೊಳ್ಳಲಿರುವ ಕಾರ್ಯಕ್ರಮಗಳ ಬಗ್ಗೆ ತಿಳಿಸಿದರು. ವೇದಿಕೆಯಲ್ಲಿದ್ದ ಪ್ರಮುಖರು ಗುರು ಪೂರ್ಣಿಮೆಯ ಮಹತ್ವದ ಬಗ್ಗೆ ತಮ್ಮ ಅನಿಸಿಕೆಗಳನ್ನು ತಿಳಿಸಿದರು. ಈ ಸಂದರ್ಭ ಪುಣೆ ಶ್ರೀ ಗುರುದೇವ ಬಳಗದ ಭಜನ ಮಂಡಳಿಯ
ಗುರು ದಾಮೋದರ ಬಂಗೇರ, ಸರೋಜಿನಿ ಬಂಗೇರ ದಂಪತಿಯನ್ನು, ತಬಲಾ ವಾದಕ ಯೋಗೇಶ್‌ ಮತ್ತು ವಜ್ರಮಾತಾ ಮಹಿಳಾ ವಿಕಾಸ ಕೇಂದ್ರದ ಭಜನ ಮಂಡಳಿಯ ಸದಸ್ಯರನ್ನು ಪ್ರಭಾಕರ ಶೆಟ್ಟಿ ಶೆಟ್ಟಿ ದಂಪತಿ ಸತ್ಕರಿಸಿದರು.

ಕಾರ್ಯಕ್ರಮದಲ್ಲಿ ಬಂಟ್ಸ್‌ ಅಸೋಸಿಯೇಶನ್‌ನ ಅಧ್ಯಕ್ಷ ಆನಂದ್‌ ಶೆಟ್ಟಿ ಮಿಯಾರು, ಪಿಂಪ್ರಿ-ಚಿಂಚಾಡ್‌ ತುಳು ಸಂಘದ ಅಧ್ಯಕ್ಷ ಹರೀಶ್‌ ಶೆಟ್ಟಿ ಕುರ್ಕಾಲ್‌, ಬಳಗದ ಪ್ರಮುಖರಾದ ರಂಜಿತ್‌ ಶೆಟ್ಟಿ, ಜಗದೀಶ್‌ ಹೆಗ್ಡೆ, ಸುರೇಶ್‌ ಶೆಟ್ಟಿ, ರಾಜು ಹೆಗ್ಡೆ, ವಸಂತ್‌ ಶೆಟ್ಟಿ, ದಾಮೋದರ ಬಂಗೇರ, ಅಜಿತ್‌ ಶೆಟ್ಟಿ, ಉಮೇಶ್‌ ಶೆಟ್ಟಿ, ಶ್ರೀ ವಜ್ರಮಾತಾ ಮಹಿಳಾ ವಿಕಾಸ ಕೇಂದ್ರದ ಪ್ರಮುಖರಾದ ಸರೋಜಿನಿ ಡಿ. ಬಂಗೇರ, ಸುಧಾ ಎನ್‌. ಶೆಟ್ಟಿ, ಪುಷ್ಪಾ ಪೂಜಾರಿ, ಮಮತಾ ಡಿ. ಶೆಟ್ಟಿ,
ಶ್ವೇತಾ ಎಚ್‌. ಮೂಡಬಿದ್ರಿ, ವೀಣಾ ಡಿ. ಶೆಟ್ಟಿ, ಸಂದ್ಯಾ ಶೆಟ್ಟಿ, ಲಲಿತಾ ಪೂಜಾರಿ, ಸುಜಾತಾ ಶೆಟ್ಟಿ, ಸ್ನೇಹಾಲತಾ ಆರ್‌. ಶೆಟ್ಟಿ, ಸ್ವರ್ಣಲತಾ ಜೆ. ಹೆಗ್ಡೆ, ನಯನಾ ಶೆಟ್ಟಿ, ಸ್ನೇಹಲ್‌ ಪಿ. ಶೆಟ್ಟಿ, ರಕ್ಷಾ ಶೆಟ್ಟಿ, ಜಯಲಕ್ಷ್ಮೀ ಎಚ್‌. ಶೆಟ್ಟಿ, ದೀಪಾ ಶೆಟ್ಟಿ ಹಾಗೂ ಹೆಚ್ಚಿನ ಸಂಖ್ಯೆಯ ಗುರು ಭಕ್ತರು ಭಾಗವಹಿಸಿ ಗುರು ಕೃಪೆಗೆ ಪಾತ್ರರಾದರು. ಹರೀಶ್‌ ಮೂಡಬಿದ್ರಿ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು. ಅನ್ನ ಪ್ರಸಾದ ಸಂತರ್ಪಣೆ ನಡೆಯಿತು.

20 ವರ್ಷಗಳಿಂದ ಗುರುಸೇವೆ
ಗುರುವಿನ ಪ್ರೇರಣೆಯಂತೆ ನಡೆಯುವುದು ನಮ್ಮೆಲ್ಲರ ಕರ್ತವ್ಯ. ಒಡಿಯೂರು ಕ್ಷೇತ್ರದಲ್ಲಿ ಸ್ವಾಮೀಜಿಯವರ ಮುಖಾಂತರ ಹಲವಾರು ಕಾರ್ಯ ಯೋಜನೆಗಳು ಸಾಕಾರಗೊಂಡಿವೆ. ಸ್ವಾಮೀಜಿಯವರ ಆಶೀರ್ವಾದದಿಂದ ನಾವು ಇಲ್ಲಿಯೂ ಸುಮಾರು 20 ವರ್ಷಗಳಿಂದ ಗುರುಸೇವೆಯನ್ನು ಮಾಡುತಿದ್ದೇವೆ. ಶ್ರೀಗಳ ಷಷ್ಠ್ಯಬ್ದ ಸಂಭ್ರಮದಲ್ಲಿ ಸೇವೆಗೆ ಅವಕಾಶ ಸಿಕ್ಕಿದೆ. ನಾವು ಇಲ್ಲಿ ಕೈಗೊಂಡಿರುವ ಎಲ್ಲ ಧಾರ್ಮಿಕ, ಸಾಮಾಜಿಕ ಸೇವಾ ಕಾರ್ಯಗಳನ್ನು ಸುಸಂಸ್ಕೃತವಾಗಿ ನೆರವೇರಿಸಿ ಗುರುಕೃಪೆಗೆ ಪಾತ್ರರಾಗೋಣ. -ನಾರಾಯಣ ಶೆಟ್ಟಿ, ಗೌರವಾಧ್ಯಕ್ಷರು, ಒಡಿಯೂರು ಶ್ರೀಷಷ್ಠ್ಯಬ್ದ ಸಮಿತಿ ಪುಣೆ

ನಮ್ಮ ಹಿಂದೂ ಸನಾತನ ಧರ್ಮ, ಸಂಸ್ಕೃತಿಯಲ್ಲಿ ಪುರಾತನ ಕಾಲದಿಂದಲೂ ಗುರುವಿಗೆ ಮಹತ್ವದ ಸ್ಥಾನವನ್ನು ನೀಡಲಾಗಿದೆ. ಗುರುವಿನ ಪ್ರೇರಣೆಯಂತೆ ಬಹಳಷ್ಟು ಲೋಕಕಲ್ಯಾಣ ಕಾರ್ಯಗಳು ನಡೆದಿವೆ. ಈ ಒಂದು ಪರಂಪರೆ ಇಂದಿನ ದಿನಗಳಲ್ಲೂ ನಾವು ಕಾಣುತ್ತೇವೆ. ಒಡಿಯೂರು ಶ್ರೀಗಳ ಮೂಲಕ ನಡೆಯುವ ಸಮಾಜ ಸೇವಾ ಕಾರ್ಯದಲ್ಲಿ, ಗುರುಸೇವೆಯಲ್ಲಿ ನಾವು ಕೂಡಾ ಕೈಜೋಡಿಸಿಕೊಂಡು ಗುರುಕೃಪೆಗೆ ಪಾತ್ರರಾಗೋಣ.
-ಸದಾನಂದ ಕೆ. ಶೆಟ್ಟಿ, ಮಾಜಿ ಅಧ್ಯಕ್ಷರು,
ಶ್ರೀಗುರುದೇವ ಸೇವಾ ಬಳಗ ಪುಣೆ

ತಾಯಿ ಜೀವ ಕೊಟ್ಟರೆ, ಗುರು ಜೀವನ ಕೊಡುತ್ತಾರೆ. ಪ್ರೀತಿ-ವಿಶ್ವಾಸದಿಂದ ಸನ್ಮಾರ್ಗದಲ್ಲಿ ನಮಗೆ ಬೆನ್ನೆಲುಬಾಗಿ ಇರುವ ಗುರುವಿನ ಸೇವೆಯಲ್ಲಿ ನಮ್ಮನ್ನು ಅರ್ಪಿಸಿಕೊಂಡರೆ ದೇವರು, ಗುರುವಿನ ಕೃಪಾಶೀರ್ವಾದ ನಮಗೆ ಸಿಗುತ್ತದೆ. ಅಂತಹ ಗುರುಶ್ರೇಷ್ಠರಾದ ಒಡಿಯೂರು ಶ್ರೀಗಳು ನಮಗೆ ಸಿಕ್ಕಿದ್ದಾರೆ. ಶ್ರೀಗಳ ಷಷ್ಠ್ಯಬ್ದ ಎಂದರೆ ಗುರುವಿನ ಮೂಲಕ ನಡೆಯುವ ಸಮಾಜ ಸೇವಾ ಕಾರ್ಯಗಳೇ ಆಗಿವೆ. ಶ್ರೀಗಳ ಧ್ಯೇಯ ಕೂಡಾ ಇದೆ ಆಗಿದೆ.
-ಉಷಾ ಕುಮಾರ್‌ ಶೆಟ್ಟಿ, ಗೌರವ ಸಲಹೆಗಾರರು,
ಶ್ರೀ ಗುರುದೇವ ಸೇವಾ ಬಳಗ ಪುಣೆ

Advertisement

Udayavani is now on Telegram. Click here to join our channel and stay updated with the latest news.

Next