Advertisement

Sandalwood; ಹೊಸ ಚಿತ್ರದತ್ತ ಗುರು ದೇಶಪಾಂಡೆ; ಹಾಡುಗಳ ಧ್ವನಿಮುದ್ರಣ ಶುರು

04:31 PM Feb 22, 2024 | Team Udayavani |

ನಿರ್ದೇಶಕ ಹಾಗೂ ನಿರ್ಮಾಪಕ ಗುರು ದೇಶಪಾಂಡೆ ತಮ್ಮ ಜಿ ಸಿನಿಮಾಸ್‌ ಲಾಂಛನದಲ್ಲಿ ನಿರ್ಮಾಣ ಮಾಡುತ್ತಿರುವ ಪ್ರೊಡಕ್ಷನ್‌ ನಂ.4 ಚಿತ್ರದ ಹಾಡುಗಳ ಧ್ವನಿಮುದ್ರಣ ಪೂಜೆ ನಾಗರಭಾವಿಯ ಲೂಪ್‌ ಸ್ಟುಡಿಯೋಸ್‌ನಲ್ಲಿ ಇತ್ತೀಚೆಗೆ ನೆರವೇರಿತು. ಜಟ್ಟ, ಮೈತ್ರಿ ಚಿತ್ರಗಳ ಬಿ.ಎಂ ಗಿರಿರಾಜ್‌ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಚಿತ್ರಕ್ಕೆ ಬಿ.ಜೆ.ಭರತ್‌ ಸಂಗೀತ ಈ ಚಿತ್ರಕ್ಕೆ ಸಂಗೀತ ನೀಡುತ್ತಿದ್ದಾರೆ.

Advertisement

“ಹಿಂದೆ ಸಾಂಗ್‌ ರೆಕಾರ್ಡಿಂಗ್‌ ಪೂಜೆ ಎಂದರೆ ಒಂದು ಸಡಗರ. ಈಗ ಕೆಲವು ವರ್ಷಗಳಿಂದ ಆ ಸಂಸ್ಕೃತಿ ಮರೆತು ಹೋಗಿದೆ. ಗುರು ದೇಶಪಾಂಡೆ ಮತ್ತೆ ಸಾಂಗ್‌ ರೆಕಾರ್ಡಿಂಗ್‌ ಪೂಜೆ ಮೂಲಕ ತಮ್ಮ ನೂತನ ಚಿತ್ರಕ್ಕೆ ಚಾಲನೆ ನೀಡಿದ್ದಾರೆ.

ಈ ಸಿನಿಮಾ ಈ ಕಾಲಘಟ್ಟದಲ್ಲಿ ನಡೆಯುವ ಕಥೆಯಾಗಿರು ತ್ತದೆ. ಮರೆಯಾಗು ತ್ತಿರುವ ಸಂಸ್ಕೃತಿ ಯ ಮತ್ತೆ ತರುವ ಪ್ರಯತ್ನವನ್ನು ಈ ಚಿತ್ರದಲ್ಲಿ ಮಾಡುತ್ತಿದ್ದೇವೆ. ಭರತ್‌ ಅವರ ಸಂಗೀತ ನಿರ್ದೇಶನದಲ್ಲಿ ಇಂದಿನಿಂದ ಸಾಂಗ್‌ ರೆಕಾರ್ಡಿಂಗ್‌ ಆರಂಭವಾಗಿದೆ. ಮುಂದಿನ ದಿನಗಳಲ್ಲಿ ಹೆಚ್ಚಿನ ಮಾಹಿತಿ ನೀಡುತ್ತೇವೆ’ ಎಂದರು ನಿರ್ದೇಶಕ ಗಿರಿರಾಜ್‌.

ನಿರ್ಮಾಪಕ ಗುರುದೇಶಪಾಂಡೆ ಮಾತನಾಡಿ, “ಇದು ಜಿ ಸಿನಿಮಾಸ್‌ ಮೂಲಕ ನಿರ್ಮಾಣವಾಗುತ್ತಿರುವ ನಾಲ್ಕನೇಯ ಚಿತ್ರ. ನಮ್ಮ ಜಿ ಅಕಾಡೆಮಿ ಮೂಲಕ ಸಾಕಷ್ಟು ಮಕ್ಕಳಿಗೆ ನಟನಾ ತರಬೇತಿ ನೀಡಲಾಗುತ್ತಿದೆ. ಈಗಾಗಲೇ ಹತ್ತು ಬ್ಯಾಚ್‌ಗಳು ಯಶಸ್ವಿಯಾಗಿ ಪೂರ್ಣವಾಗಿದೆ. ಮಕ್ಕಳಿಗೆ ಬರೀ ನಟನೆ ಕಲಿಸಿಕೊಟ್ಟು ಕಳುಹಿಸಿದರೆ ಸಾಲದು. ಅವರಿಗೆ ಸೂಕ್ತ ವೇದಿಕೆ ಕೂಡ ಕಲ್ಪಿಸಿಕೊಡಬೇಕು. ಅದರಲ್ಲೂ ವಿಶೇಷವಾಗಿ ಮಧ್ಯಮವರ್ಗದ ಮಕ್ಕಳಿಗೆ. ಆ ಸಲುವಾಗಿ ನಮ್ಮ ಈ ಚಿತ್ರದಲ್ಲಿ ನಮ್ಮ ಜಿ ಅಕಾಡೆಮಿಯ 15ಕ್ಕೂ ಅಧಿಕ ಮಕ್ಕಳು ನಟಿಸಲಿದ್ದಾರೆ. ಕನ್ನಡದ ಹೆಸರಾಂತ ನಟರು ಈ ಚಿತ್ರದ ನಾಯಕರಾಗಿ ಅಭಿನಯಿಸಲಿದ್ದಾರೆ. ಈ ಕುರಿತು ಹೆಚ್ಚಿನ ವಿಷಯಗಳನ್ನು ಮುಂದಿನ ದಿನಗಳಲ್ಲಿ ಹಂಚಿಕೊಳ್ಳುತ್ತೇವೆ’ ಎನ್ನುವುದು ಗುರುದೇಶಪಾಂಡೆ ಮಾತು.

ಸಂಗೀತ ನಿರ್ದೇಶಕ ಬಿ.ಜೆ.ಭರತ್‌, ಗೀತರಚನೆಕಾರ ಪುನೀತ್‌ ಆರ್ಯ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next