Advertisement
ಇದಕ್ಕೂ ಪೂರ್ವದಲ್ಲಿ ಕೆಲವು ವರ್ಷ ಗಳ ಹಿಂದೆ ಗುರ್ಮಿತ್ ಮಂಗಳೂರಿನ ನೆಹರೂ ಮೈದಾನದಲ್ಲಿ ಸಾರ್ವಜನಿಕ ಪ್ರವಚನ ನೀಡಿದ್ದರು. ಆ ಬಳಿಕ ಗುರ್ಮಿತ್ ಅವರ ಸಂಬಂಧಿಕರೊಬ್ಬರು ಮಂಗಳೂರಿನಲ್ಲಿರುವ ಕಾರಣದಿಂದ ನಗರಕ್ಕೆ ಭೇಟಿ ನೀಡಿದ್ದರು.ಡೇರಾ ಸಚ್ಚಾ ಸೌದಾ ಎಂಬ ಆಧ್ಯಾತ್ಮಿಕ ಪಂಥವನ್ನು ಮನ್ನಡೆಸಿಕೊಂಡು, ಹೊರ ದೇಶ ಹಾಗೂ ದೇಶದ 46 ಕಡೆಗಳಲ್ಲಿ ಶಾಖೆಗಳನ್ನು ಮಾಡಿ ಗುರ್ಮಿತ್ ರಾಂ ರಹೀಂ ಸಿಂಗ್ ಮಾನವೀಯ ಸಂದೇಶ ಗಳನ್ನು ಸಾರುತ್ತ ಬಂದಿದ್ದರು. ಇದ ರನ್ವಯ ಗುರ್ಮಿತ್ ಅವರ ಅನುಯಾಯಿಗಳು ಮಂಗ ಳೂರಿನಲ್ಲಿ ಪ್ರವಚನ ಆಯೋ ಜಿಸಿದ್ದರು.
ಮಂಗಳೂರಿನ ಕರಾವಳಿ ಉತ್ಸವ ಮೈದಾನದಲ್ಲಿ ಮೊದಲ ದಿನ ಆಯೋ ಜಿಸಿದ ಕಾರ್ಯಕ್ರಮಕ್ಕೆ ಬಿಗಿ ಪೊಲೀಸ್ ಪಹರೆಯ ಮಧ್ಯೆ ಗುರ್ಮಿತ್ ಸಿಂಗ್ ಆಗಮಿಸಿದ್ದರು. ಸ್ಥಳೀಯ ಪೊಲೀಸರ ಜತೆಗೆ ಗುರ್ಮಿತ್ ಅವರ ಖಾಸಗಿ ಅಂಗರಕ್ಷರೂ ಜತೆಯಲ್ಲಿದರು. ಸಂಜೆ ನಡೆದ ಕಾರ್ಯಕ್ರಮದಲ್ಲಿ ಸಾವಿರ ಕ್ಕಿಂತಲೂ ಮಿಕ್ಕಿ ಜನ ಭಾಗವಹಿಸಿದ್ದರು. ಗುರ್ಮಿತ್ ಸಿಂಗ್ ವೇದಿಕೆಗೆ ಬರು ತ್ತಿದ್ದಂತೆ ಕರತಾಡನ, ಶಿಳ್ಳೆಗಳ ಮೂಲಕ ಜನರು ಸ್ವಾಗತಿಸಿದರು. ಹಿಂದೂ, ಮುಸ್ಲಿಂ, ಕ್ರೈಸ್ತ, ಸಿಕ್ಖ್, ಧರ್ಮಗಳ ಸಾರವನ್ನು ಪ್ರಸ್ತಾವಿಸುವ ಮೂಲಕ ಗುರ್ಮಿತ್ ಸಿಂಗ್ ಸೇರಿದ್ದ ಜನರನ್ನು ಆಕರ್ಷಿತರನ್ನಾಗಿಸಿದ್ದರು. ಮಾನ ವೀಯ ಸಂದೇಶಗಳನ್ನು ಈ ಸಭೆ ಯಲ್ಲಿ ನೀಡಿದ್ದರು. ಗುರ್ಮಿತ್ ಹಿಂದಿ ಸಂದೇಶ ವನ್ನು ಮಂಗಳೂರಿನಲ್ಲಿ ಉಪನ್ಯಾಸಕರಾಗಿದ್ದ ಬೈಕಾಡಿ ಜನಾರ್ದನ ಆಚಾರ್ ಅವರು ಭಾಷಾಂತರಿಸಿದ್ದರು. ಮರುದಿನ ಸಂಜೆ ಸುರತ್ಕಲ್ ಮೈದಾನದಲ್ಲಿ ಗುರ್ಮಿತ್ ಸಿಂಗ್ ಪ್ರವಚನ ಆಯೋಜನೆಗೊಂಡಿತ್ತು. ಕರಾವಳಿ ಹಾಗೂ ಹೊರರಾಜ್ಯದ ಗುರ್ಮಿತ್ ಅನುಯಾಯಿಗಳು ಈ ಕಾರ್ಯ ಕ್ರಮವನ್ನು ಸಂಘಟಿಸಿದ್ದರು. ಇಲ್ಲೂ ಸಾವಿರಾರು ಭಕ್ತರು ಕರಾವಳಿ ಹಾಗೂ ಬೇರೆ ಬೇರೆ ಊರಿನಿಂದ ಆಗಮಿಸಿದ್ದರು. ಎಲ್ಲ ಧರ್ಮಗಳ ಮಾನ ವೀಯ ಅಂಶಗಳನ್ನು ಆಯ್ಕೆ ಮಾಡಿ, ಭಾಷಣದಲ್ಲಿ ಪ್ರಸ್ತಾವ ಮಾಡಲಾಗಿತ್ತು.
Related Articles
Advertisement
ಮಾಲ್ ಸುತ್ತಾಡಿದ್ದ ಗುರ್ಮಿತ್ ಸಿಂಗ್!ಆಧ್ಯಾತ್ಮಿಕ ಸಾಧನೆ ಮಾಡಿದ ಗುರ್ಮಿತ್ ಸಿಂಗ್ ತನ್ನ ಐಷಾರಾಮಿ ಜೀವನದ ಮೂಲಕವೇ ಗುರುತಿಸಿಕೊಂಡವರು. ಸಿನೆಮಾ, ಮಾಲ್, ಕಾರು, ಬೈಕ್‌ಗಳ ಶೋಕಿ ಸೇರಿ ದಂತೆ ಬಗೆ ಬಗೆಯ ಅವತಾರಗಳ ಮೂಲಕ ವಿಜೃಂಭಿಸಿ ಸುದ್ದಿಯಲ್ಲಿದ್ದರು. ಕರಾ ವಳಿ ಭಾಗ ದಲ್ಲಿ ಪ್ರವಚನ ನೀಡುವ ಆಶಯ ದಿಂದ ಮಂಗಳೂರಿಗೆ ಆಗಮಿಸಿದ ಗುರ್ಮಿತ್ ಇಲ್ಲಿನ ಮಾಲ್ ಗಳಿಗೆ ಭೇಟಿ ನೀಡು ವು ದನ್ನು ಮರೆಯ ಲಿಲ್ಲ. ತನ್ನ ಬೆಂಬಲಿಗರ ಸುಮಾರು 10ಕ್ಕೂ ಅಧಿಕ ಐಷಾರಾಮಿ ಕಾರುಗಳ ಜತೆಗೆ ಮಂಗಳೂರು ಸುತ್ತಾಡಿ, ಮಾಲ್‌ಗೆ ಭೇಟಿ ನೀಡಿದ್ದರು. ಗುರ್ಮಿತ್ ಆಗಮನದ ಹಿನ್ನೆಲೆಯಲ್ಲಿ ಮಾಲ್‌ನಲ್ಲಿ ವ್ಯಾಪಕ ಪೊಲೀಸ್ ಬಂದೋಬಸ್ತ್ ಮಾಡ ಲಾಗಿತ್ತು ಹಾಗೂ ಅಲ್ಲಿದ್ದ ಜನರನ್ನು ತೆರವುಗೊಳಿಸಲಾಗಿತ್ತು. – ದಿನೇಶ್ ಇರಾ