ಚಂಡೀಗಢ್: ಡೇರಾ ಸಚ್ಚಾ ಸೌದಾ ಸಮುದಾಯದ ಧರ್ಮಗುರು ಗುರ್ಮೀತ್ ರಾಮ್ ರಹೀಮ್ ಸಿಂಗ್ ವಿರುದ್ಧದ ಸುಮಾರು 15 ವರ್ಷಗಳ ಹಿಂದಿನ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿಂತೆ ಹರ್ಯಾಣದ ಪಂಚಕುಲದಲ್ಲಿರುವ ಸಿಬಿಐ ವಿಶೇಷ ಕೋರ್ಟ್ ತೀರ್ಪು ಪ್ರಕಟಿಸಲಿರುವ ಹಿನ್ನೆಲೆಯಲ್ಲಿ ಚಂಡೀಗಢ್ ಮತ್ತು ಪಂಚಕುಲದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ.
ಪಂಚಕುಲ ಹಾಗೂ ಚಂಡೀಗಢ್ ನಿಂದ ಸುಮಾರು 15 ಕಿಲೋ ಮೀಟರ್ ದೂರದಲ್ಲಿ ರಾಮ್ ರಹೀಮ್ ನ ಸುಮಾರು 2 ಲಕ್ಷ ಅನುಯಾಯಿಗಳು ಈಗಾಗಲೇ ಜಮಾಯಿಸಿದ್ದಾರೆ. ನಾನು ತೀವ್ರತರವಾದ ಬೆನ್ನು ನೋವು ಕಾಡುತ್ತಿದೆ. ಆದರೂ ನ್ಯಾಯಾಧೀಶರ ಆದೇಶದ ಮೇರೆಗೆ ನಾನು ಶುಕ್ರವಾರ ಕೋರ್ಟ್ ಗೆ ಆಗಮಿಸಲಿದ್ದೇನೆ, ನನಗೆ ದೇವರ ಮೇಲೆ ನಂಬಿಕೆ ಇದೆ. ನನ್ನ ಅನುಯಾಯಿಗಳು ಶಾಂತಿಯನ್ನು ಕಾಪಾಡಬೇಕೆಂದು ಡೇರಾ ಬಾಬಾ ಟ್ವೀಟ್ ಮಾಡಿರುವುದಾಗಿ ಮಾಧ್ಯಮದ ವರದಿ ತಿಳಿಸಿದೆ.
ಸುಮಾರು 25 ವರ್ಷಗಳ ಹಿಂದೆ ಇಬ್ಬರು ಸಾಧ್ವಿಗಳ ಮೇಲೆ ಅತ್ಯಾಚಾರ ಎಸಗಿದ್ದಾರೆಂಬ ಪ್ರಕರಣ ಇದಾಗಿದೆ. ಈ ನಿಟ್ಟಿನಲ್ಲಿ ಕಾನೂನು ಸುವ್ಯವಸ್ಥೆಯ ಸಮಸ್ಯೆ ಉದ್ಭವಿಸಬಾರದೆಂದು ಹರ್ಯಾಣ ಮತ್ತು ಪಂಜಾಬ್ ಸರ್ಕಾರ ನೂರಾರು ಪೊಲೀಸರು ಹಾಗೂ ಅರೆಸೇನಾ ಪಡೆಯನ್ನು ನಿಯೋಜಿಸಿದೆ ಎಂದು ವರದಿ ವಿವರಿಸಿದೆ. ಅಷ್ಟೇ ಅಲ್ಲ ಆಗಸ್ಟ್ 24 ಮತ್ತು 25ರಂದು ಶಾಲೆಗಳನ್ನು ತೆರೆಯದಿರುವಂತೆ ಜಿಲ್ಲಾಡಳಿತ ಮನವಿ ಮಾಡಿದೆ.
ಪಂಜಾಬ್ ಮತ್ತು ಹರ್ಯಾಣ ಹೈಕೋರ್ಟ್ ಆದೇಶದ ಮೇರೆಗೆ 2002ರಲ್ಲಿ ರಾಮ್ ರಹೀಮ್ ವಿರುದ್ಧ ಸಿಬಿಐ ಐಪಿಸಿಯ ವಿವಿಧ ಸೆಕ್ಷನ್ ಗಳ ಅಡಿ ಅಪರಾಧ ಸಂಚು, ವಂಚನೆ, ಹರಿತವಾದ ಆಯುಧದಿಂದ ಗಂಭೀರ ಗಾಯ ಹಾಗೂ ಬೆದರಿಕೆ ಪ್ರಕರಣ ದಾಖಲಿಸಲಾಗಿತ್ತು.
ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ಆದೇಶದ ಮೇರೆಗೆ ರಾಂ ರಹೀಮ್ ವಿರುದ್ಧ ಭಾರತೀಯ ದಂಡ ಸಂಹಿತೆಯ ವಿವಿಧ ಸೆಕ್ಷನ್‌ಗಳ ಅಡಿ ಅಪರಾಧ ಸಂಚು, ವಂಚನೆ, ಹರಿತವಾದ ಆಯುಧದಿಂದ ಗಂಭೀರವಾದ ಗಾಯ ಹಾಗೂ ಬೆದರಿಕೆ ಪ್ರಕರಣ ದಾಖಲಿಸಲಾಗಿದೆ.
ಡೇರಾ ಆಶ್ರಮದ ಮಾಜಿ ಅನುಯಾಯಿ ಹಂಸರಾಜ್ ಚೌಹಾಣ್ ಎಂಬುವರು ರಾಮ್ ರಹೀಮ್ ವಿರುದ್ಧ ಹೈಕೋರ್ಟ್‌ನಲ್ಲಿ ದಾವೆ ಹೂಡಿದ್ದರು.