Advertisement

ಸವಾಲುಗಳಿಗೆ ಸವಾಲ್‌ ಹಾಕೋದೇ ಬಾಳಿನ ಗುರಿಯಾಗಲಿ

03:45 AM Feb 21, 2017 | Team Udayavani |

ವಿದ್ಯಾರ್ಥಿ ಜೀವನದಲ್ಲಿ ಹಲವು ಬಗೆಯ ಕಷ್ಟಗಳು, ನಕಾರಾತ್ಮಕ ಆಲೋಚನೆಗಳು ಜೊತೆಯಾಗುತ್ತವೆ. ಅವು ವಿದ್ಯಾರ್ಥಿ ಬದುಕಿನ ನೆಮ್ಮದಿಯನ್ನೇ ಹಾಳು ಮಾಡುವಷ್ಟು ಪ್ರಬಲವಾಗಿರುತ್ತವೆ. ಅಂಥ ಸವಾಲುಗಳಿಗೆ ಎದೆಯೊಡ್ಡಿ ನಿಲ್ಲುವುದೇ ಬಾಳಿನ ಗುರಿಯಾಗಬೇಕು.

Advertisement

ಕಾಡಿನಲ್ಲಿದ್ದ ಗರ್ಭಿಣಿ ಜಿಂಕೆಗೆ ಪ್ರಸವವೇದನೆ ಆರಂಭವಾಗಿತ್ತು. ಅದು ನದಿಯ ದಡದಲ್ಲಿ ಎಲ್ಲಾದರೂ ದಟ್ಟ ಹುಲ್ಲು ಇರುವ ಸ್ಥಳವನ್ನು ಹುಡುಕುವ ಯತ್ನದಲ್ಲಿತ್ತು. ಕಡೆಗೂ ಜಿಂಕೆಯ ಪ್ರಸವಕ್ಕೆ ಅನುಗುಣವಾದ ಸ್ಥಳ ದೊರೆಯಿತು. ಈ ವೇಳೆಗೆ ಅದರ ಪ್ರಸವ ವೇದನೆ ಕೂಡ ಹೆಚ್ಚಾಗಿತ್ತು.

ಅದೇ ಕ್ಷಣದಲ್ಲಿ ದಟ್ಟ ಕಾರ್ಮೋಡಗಳು ಆವರಿಸಿ ಕಾಳಿYಚ್ಚು ತನ್ನ ಕೆನ್ನಾಲಿಗೆ ಚಾಚಲು ಆರಂಭಿಸಿತ್ತು. ಈ ಅನಿರೀಕ್ಷಿತ ಬೆಳವಣಿಗೆಯಿಂದ ತಬ್ಬಿಬ್ಟಾದ ಜಿಂಕೆ ತನ್ನ ಎಡಗಡೆ ನೋಡಿದಾಗ ಬೇಟೆಗಾರನೊಬ್ಬ ಶಸOಉಸನ್ನದಟಛಿನಾಗಿ ತನ್ನನ್ನು ಗುರಿಯಾಗಿಸಿದ್ದು ಕಂಡುಬಂತು. ಬಲಗಡೆ ನೋಡಿದರೆ ಹಸಿದ ಹುಲಿ ಅದನ್ನೇ ಸಮೀಪಿಸುತ್ತಿತ್ತು.

ಈ ಸಂದರ್ಭದಲ್ಲಿ ಗರ್ಭಿಣಿ ಜಿಂಕೆ ಏನು ತಾನೇ ಮಾಡಲು ಸಾಧ್ಯ? ಅದಕ್ಕಿರುವುದು ಪ್ರಸವ ವೇದನೆ! ತನ್ನ ಸರ್ವನಾಶಕ್ಕಾಗಿ ಕಾದು ಕುಳಿತ ಬೇಟೆಗಾರನಿಂದ ಅದು ಬದುಕುಳಿಯಲು ಸಾಧ್ಯವೇ? ಒಂದು ವೇಳೆ ಬೇಟೆಗಾರನಿಂದ ತಪ್ಪಿಸಿಕೊಂಡರೂ, ಹಸಿದ ಹೆಬ್ಬುಲಿಯಿಂದ ಪಾರಾಗಲು ಸಾಧ್ಯವೆ? ಹಬ್ಬುತ್ತಿರುವ ಕಾಳಿYಚ್ಚಿನ ನಡುವೆ ಅದು ಮಗುವಿಗೆ ಜನ್ಮ ಕೊಟ್ಟಿàತೆ? ಜಿಂಕೆ ಮುಂದೆ ಏನು ಮಾಡಬಹುದು? ಈ ಪ್ರಶ್ನೆಗೆ ಬಗೆ ಬಗೆಯ ಉತ್ತರಗಳನ್ನು ಕೊಡಬಹುದು. ಆದರೆ ವಾಸ್ತವವಾಗಿ ಏನಾಯ್ತು ಗೊತ್ತೇ? ತನಗೆ ಒದಗಿದ ಕಷ್ಟಗಳನ್ನು, ತನ್ನೆದುರಿಗೇ ಕಾದು ಕುಳಿತಿರುವ ಸಾವನ್ನೂ ಲೆಕ್ಕಿಸದ ಜಿಂಕೆ, ಒಂದು ಹೊಸ ಜೀವಕ್ಕೆ ಜನ್ಮ ನೀಡುವಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿತು.

ಜಿಂಕೆ ಮಗುವಿಗೆ ಜನ್ಮ ನೀಡುವ ಸಮಯದಲ್ಲಿ… ಮೋಡ ಕವಿದಿದ್ದ ಕಾರಣ ಬೇಟೆಗಾರನ ಗುರಿ ತಪ್ಪಿಹೋಯ್ತು. ಬೇಟೆಗಾರನ ತಪ್ಪಿದ ಗುರಿಯಿಂದ ಜಿಂಕೆಯ ಹೊಟ್ಟೆಗೆ ಬೀಳಬೇಕಿದ್ದ ಬಾಣ ಹುಲಿಯ ಹೊಟ್ಟೆಗೆ ನಾಟಿತು. ಪರಿಣಾಮ ಹುಲಿ ಬಲಿಯಾಯ್ತು. ನಂತರದ ಕೆಲವೇ ಕ್ಷಣಗಳಲ್ಲಿ, ಕವಿದ ಮೋಡ ಹನಿಗಳನ್ನು ಸುರಿಸಿ ಕಾಳಿYಚ್ಚನ್ನು ಆರಿಸಿತು. ಅಷ್ಟರಲ್ಲಿ ಜಿಂಕೆಯ ಸುಖ ಪ್ರಸವವೂ ಆಗಿತ್ತು.

Advertisement

ಜಿಂಕೆಯಂತೆಯೇ ಮನುಷ್ಯನ ಬದುಕಿನಲ್ಲೂ ಅನೇಕ ಕಡೆಗಳಿಂದ ಕಷ್ಟಗಳು, ನಕಾರಾತ್ಮಕ ಆಲೋಚನೆಗಳು ಬರುತ್ತವೆ. ಕೆಲವೊಮ್ಮೆ ಇಂತಹ ಆಲೋಚನೆಗಳು ನಮ್ಮನ್ನೇ ನಾಶ ಮಾಡುವಷ್ಟು ಪ್ರಬಲವಾಗಿರುತ್ತವೆ. ಈಗ ಒಮ್ಮೆ ಯೋಚಿಸಿ ನೋಡಿ ಜಿಂಕೆಗೆ ಆ ಕ್ಷಣದಲ್ಲಿ ಹೆಚ್ಚಿನ ಆದ್ಯತೆ ಮಗುವಿಗೆ ಜನ್ಮ ನೀಡುವುದಾಗಿತ್ತು. ಹಾಗಾಗಿ ಅದು ಉಳಿದ ಕಷ್ಟಗಳನ್ನೆಲ್ಲ ಮರೆತು ತನ್ನ ಕರುಳ ಬಳ್ಳಿಗೆ ಜೀವ ಕೊಡುವುದಕ್ಕೆ ಮೊದಲಾಯ್ತು. ಮಗುವಿಗೆ ಜೀವ ಕೊಡುವುದರ ಹೊರತಾಗಿ ಮತ್ತೇನನ್ನೂ ಮಾಡಲು ಜಿಂಕೆ ಅಶಕ್ತವಾಗಿತ್ತು. ಜಿಂಕೆಯಂತೆಯೇ ನಾವು ಕೂಡ ನಮ್ಮ ಕೆಲಸದ ಮೇಲೆ, ಜೀವನದ ಮೇಲೆ ಪ್ರೀತಿ, ಗಮನ, ನಂಬಿಕೆ, ಭರವಸೆಗಳನ್ನಿಟ್ಟಲ್ಲಿ ಯಶಸ್ಸು ಕಟ್ಟಿಟ್ಟ ಬುತ್ತಿ. ಆಗ ಎಂತಹುದೇ ಆಘಾತ, ಕಷ್ಟಗಳು ನಮ್ಮನ್ನು ಹತ್ತಿಕ್ಕಲಾರವು.

Advertisement

Udayavani is now on Telegram. Click here to join our channel and stay updated with the latest news.

Next