Advertisement

ಶ್ರೀನಗರದ ಲಾಲ್‌ ಚೌಕದಲ್ಲಿ ಗುಂಡಿನ ಸದ್ದು : ಅಂಗಡಿಗಳು ಬಂದ್‌

03:23 PM Apr 01, 2017 | Team Udayavani |

ಶ್ರೀನಗರ : ಸದಾ ಚಟುವಟಿಕೆಗಳಿಂದ ಗಿಜಿಗುಡುತ್ತಿರುವ ಶ್ರೀನಗರದ ಲಾಲ್‌ ಚೌಕ್‌ ಮಾರ್ಕೆಟ್‌ ಪ್ರದೇಶದಲ್ಲಿ ಇಂದು ಬೆಳಗ್ಗೆ ಗುಂಡು ಹಾರಾಟದ ಸದ್ದು ಕೇಳಿ ಬಂದ ಕಾರಣ ಅಂಗಡಿ ಮುಂಗಟ್ಟುಗಳು ಒಡನೆಯೇ ಬಾಗಿಲೆಳೆದುಕೊಂಡವು. ಭೀತರಾದ ಪಾದಚಾರಿಗಳು ಸುರಕ್ಷಿತ ಸ್ಥಳಗಳಿಗೆ ಓಡತೊಡಗಿದರು. 

Advertisement

‘ಲಾಲ್‌ ಚೌಕ್‌ ಮಾರ್ಕೆಟ್‌ ಪ್ರದೇಶದಲ್ಲಿ ಗುಂಡು ಹಾರಾಟದ ಸದ್ದು ಕೇಳಿಬಂದ ವಿಷಯ ತಿಳಿದೊಡನೆಯೇ ನಾವು ಬಂದೋಬಸ್ತನ್ನು ಹೆಚ್ಚಿಸಿ ಘಟನೆಯ ತನಿಖೆಯನ್ನು ಆರಂಭಿಸಿದ್ದೇವೆ’ ಎಂದು ಹಿರಿಯ ಪೊಲೀಸ್‌ ಅಧಿಕಾರಿ ತಿಳಿಸಿದ್ದಾರೆ.

ಗುಂಡಿನ ಸದ್ದು ಕೇಳಿ ಭೀತರಾದ ಜನರು ಮೊದಲಿಗೆ ಭಯೋತ್ಪಾದಕರ ದಾಳಿ ಆರಂಭವಾಗಿದೆ ಎಂದು ಗ್ರಹಿಸಿ ಭಯಭೀತರಾಗಿ ಜೀವರಕ್ಷಣೆಗೆ ಓಡತೊಡಗಿದರು

“ತಾಜ್‌ಮಹಲ್‌ ಪ್ರವೇಶಿಸಲು ಯತ್ನಿಸಿದ ಹುಡುಗನೊಬ್ಬನನ್ನು ನಾವು ವಶಕ್ಕೆ ತೆಗೆದುಕೊಂಡಿದ್ದೇವೆ. ಆತ ಮಾನಸಿಕನಾಗಿ ಅಸ್ವಸ್ಥನಿರುವಂತೆ ಕಂಡುಬಂದಿದೆ. ಯಾರೂ ಭಯ, ಆತಂಕ ಪಡಬೇಕಾದ ಅಗತ್ಯವಿಲ್ಲ’ ಎಂದು ಶ್ರೀನಗರ ಎಸ್‌ಪಿ ಹೇಳಿದರು. 

Advertisement

Udayavani is now on Telegram. Click here to join our channel and stay updated with the latest news.

Next