Advertisement
ತಳಪುಝ ಠಾಣಾ ವ್ಯಾಪ್ತಿಯ ಮನೆಯೊಂದಕ್ಕೆ ಐವರು ನಕ್ಸಲರ ತಂಡ ಮಂಗಳವಾರ ರಾತ್ರಿ ಊಟಕ್ಕೆಂದು ತೆರಳಿದ್ದಾಗ ಪೊಲೀಸರು ದಾಳಿ ನಡೆಸಿದ್ದರು. ಶರಣಾಗುವಂತೆ ಸೂಚಿಸಿದಾಗ ಗುಂಡಿನ ಚಕಮಕಿ ನಡೆಯಿತು. ಈ ಹಂತದಲ್ಲಿ ಮೂವರು ನಕ್ಸಲರು ಪರಾರಿಯಾದರೆ, ನಕ್ಸಲ್ ಮುಖಂಡ ಕೇರಳ ಮೂಲದ ಚಂದ್ರು ಅಲಿಯಾಸ್ ತಿರುವೆಂದಿಗಮ್ ಹಾಗೂ ಶ್ರೀಮತಿಯನ್ನು ಪೊಲೀಸರು ವಶಕ್ಕೆ ಪಡೆದರು. ಇವರಿಬ್ಬರೂ ಕೇರಳ ಹಾಗೂ ಕರ್ನಾಟಕದ ಪೊಲೀಸರಿಗೆ ಬೇಕಾಗಿದ್ದರು. ಬಂಧಿತರಿಂದ ಪಿಸ್ತೂಲ್ ಮತ್ತು ನಾಡ ಬಂದೂಕು ವಶಕ್ಕೆ ಪಡೆಯಲಾಗಿದೆ.
Related Articles
Advertisement
ಪರಾರಿಯಾಗಿರುವವರ ಬಂಧನಕ್ಕೆ ಕಾಸರಗೋಡು ಜಿಲ್ಲೆಯ 3 ಪೊಲೀಸ್ ಉಪವಿಭಾಗಗಳಿಂದ ತಲಾ 10ರಂತೆ30 ಪೊಲೀಸರು ಮತ್ತು ಜಿಲ್ಲಾ ಸಶಸ್ತ್ರ ಮೀಸಲು ಪೊಲೀಸ್ ಪಡೆಯ 20 ಪೊಲೀಸರ ಸಹಿತ 50 ಮಂದಿ ಯನ್ನು ಮಾನಂತವಾಡಿಗೆ ಕಳುಹಿಸಲಾಗಿದೆ. ಪೊಲೀಸರ ಬಗ್ಗೆ ನಕ್ಸಲರಿಗೆ ಮಾಹಿತಿ ನೀಡುವ ಅನೀಶ್ ಎಂಬಾತನನನ್ನು ಪೊಲೀಸರು ಬಂಧಿಸಿದ್ದಾರೆ.