ಉಡುಪಿ: ಗುಂಡಿಬೈಲು ಇಂಡಿಯನ್ ಆಯಿಲ್ ಪೆಟ್ರೋಲ್ ಬಂಕ್ ಬಳಿಯಲ್ಲಿ ಒಕಾಯ ಎಲೆಕ್ಟ್ರಿಕ್ ವಾಹನಗಳ ಅಧಿಕೃತ ಮಾರಾಟ ಸಂಸ್ಥೆ “ಲಕ್ಷ್ ಇವಿ ಮೋಟಾರ್’ನ ಉದ್ಘಾಟನೆ ಡಿ. 25ರ ಮಧ್ಯಾಹ್ನ 12ಕ್ಕೆ ನಡೆಯಲಿದೆ.ಶಾಸಕ ಕೆ. ರಘುಪತಿ ಭಟ್ ಉದ್ಘಾಟಿಸಲಿದ್ದು, ಸ್ಥಳೀಯ ಗಣ್ಯರು ಉಪಸ್ಥಿತರಿರಲಿದ್ದಾರೆ.
ಎಲೆಕ್ಟ್ರಿಕ್ ವಾಹನವು ಶೇ. 97ಕ್ಕೂ ಅಧಿಕ ಬ್ಯಾಟರಿ ಬಾಳಿಕೆ ಬರಲಿದ್ದು, 3 ವರ್ಷಗಳ ವಾರಂಟಿ ಹೊಂದಿದೆ. 70 ಕಿ.ಮೀ. ವೇಗವಾಗಿ ಚಲಾಯಿಸಬಹುದಾದ ಈ ವಾಹನಗಳಲ್ಲಿ ಎಲ್‌ಇಡಿ ಲೈಟ್ಸ್ ವಿದ್ ಡಿಆರ್‌ಎಲ್, ಕಾಂಬಿ ಬ್ರೇಕಿಂಗ್ ಸಿಸ್ಟಮ್, ಪೋರ್ಟೆಬಲ್ ಬ್ಯಾಟರಿ, ಬಿಎಲ್ ಡಿಸಿ ಹಬ್ ಮೋಟಾರ್, ಆಕರ್ಷಕ 10 ಬಣ್ಣಗಳಲ್ಲಿ ಲಭ್ಯವಿವೆ.
ಭಾರತದ ಹೆಚ್ಚು ಬೇಡಿಕೆಯ ಒಕಾಯ ಫಾಸ್ಟ್ ಎಫ್4 ಸ್ಕೂಟರ್ ಒಮ್ಮೆ ಚಾರ್ಜ್ ಮಾಡಿದರೆ 140ರಿಂದ 160 ಕಿ.ಮೀ. ಕೊಡಲಿದ್ದು, ಗಂಟೆಗೆ 60ರಿಂದ 70 ಕಿ.ಮೀ. ವೇಗವಾಗಿ ಕ್ರಮಿಸಬಹುದು. ಎಲ್ಲ ಕಾಲಮಾನಕ್ಕೂ ಹೊಂದಿಕೆಯಾಗುವ ಈ ಸ್ಕೂಟರ್ ಉತ್ಪಾದನೆಯಲ್ಲಿ ಸುರಕ್ಷತೆಗೆ ಹೆಚ್ಚು ಒತ್ತು ನೀಡಲಾಗಿದೆ.
ವಿಶೇಷತೆಗಳು: 35 ವರ್ಷಗಳ ಎಲೆಕ್ಟ್ರೋನಿಕ್ಸ್ ಅನುಭವ, 19 ವರ್ಷ ಸಾಫ್ಟ್ ವೇರ್/ಟೆಕ್ನಾಲಜಿ ಅನುಭವ, 31 ವರ್ಷ ಬ್ಯಾಟರಿ ಉತ್ಪಾದನೆಯ ವಿನ್ಯಾಸ/ಸೇವೆಗಳ ಅನುಭವ ಹೊಂದಿರುವ ಒಕಾಯ ಕಂಪೆನಿಯ ಸ್ವಂತ ಬ್ಯಾಟರಿ ಮತ್ತು ತಂತ್ರಜ್ಞಾನ, 30ಕ್ಕೂ ಹೆಚ್ಚು ವರ್ಷ ಬ್ಯಾಟರಿ ಬಾಳಿಕೆ, ಶೇ. 100ರಷ್ಟು ಸುರಕ್ಷರತೆಯ ಎಲ್‌ಎಫ್ಪಿ ಬ್ಯಾಟರಿ, ಬೆಂಕಿ ಅನಾಹುತದಿಂದ ಸುರಕ್ಷತೆ, ಉತ್ತಮ ಉಷ್ಣ ಸ್ಥಿರತೆ, 50 ಡಿಗ್ರಿ ಸೆ. ತಾಪಮಾನದಲ್ಲೂ ಸುರಕ್ಷಿತವಾಗಿರಲಿದೆ.
ಇದುವರೆಗೆ 11 ಕೋಟಿಗೂ ಹೆಚ್ಚು ಸಂತೃಪ್ತಿಯ ಗ್ರಾಹಕರನ್ನು ಹೊಂದಿದೆ. ಒಕಾಯ ಫಾಸ್ಟ್4ರಲ್ಲಿ ಎಫ್2ಬಿ, ಎಫ್2ಟಿ, ಫ್ರೀಡಮ್, ಕ್ಲಾಸಿಕ್ ಮಾಡೆಲ್‌ಗಳಿದ್ದು, ವಿವಿಧ ಶ್ರೇಣಿಗಳಲ್ಲಿ ಲಭ್ಯವಿವೆ. ಗ್ರಾಹಕರು ಕೇವಲ 2,500 ರೂ. ಪಾವತಿಸಿ ಬುಕ್ಕಿಂಗ್ ಮಾಡಬಹುದು. ಉದ್ಘಾಟನೆ ಪ್ರಯುಕ್ತ ವಿಶೇಷ ರಿಯಾಯಿತಿಯೊಂದಿಗೆ ಸ್ಕ್ರ್ಯಾಚ್ ಕಾರ್ಡ್ ಕೂಪನ್ ಲಭ್ಯವಿದೆ. ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿ ಸಬ್ ಡೀಲರ್ ತೆಗೆದುಕೊಳ್ಳುವವರು ಸಂಸ್ಥೆಯನ್ನು ಸಂಪರ್ಕಿಸಲು ಮಾಲಕರ ಪ್ರಕಟನೆ ತಿಳಿಸಿದೆ.